Advertisement
ಇಲ್ಲಿನ ಗಾಂಧಿ ನಗರದ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 44 ವರ್ಷಗಳ ಹಿಂದೆ ತುಂಗಭದ್ರಾ ಗ್ರಾಮೀಣ ಬ್ಯಾಂಕ್ ಹೆಸರಲ್ಲಿ ಆರಂಭವಾಗಿ ಬಳಿಕ ಕಾವೇರಿ, ವಿಕಾಸ ಗ್ರಾಮೀಣ ಬ್ಯಾಂಕ್‌ಗಳು ವಿಲೀನವಾದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ.
Related Articles
Advertisement
ಪ್ರಧಾನ ಮಂತ್ರಿ ಸ್ವ-ನಿ ಯೋಜನೆಯಡಿ 5876 ಬೀದಿಬದಿ ವ್ಯಾಪಾರಿಗಳಿಗೆ 5.87 ಕೋಟಿ ರು.ಗಳ ಸಾಲವನ್ನು ವಿತರಿಸಲಾಗಿದೆ. ಅಲ್ಲದೇ, ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಎಲ್ಲ ಸಿಬ್ಬಂದಿಗಳು ನೀಡಿದ್ದ ಒಂದುದಿನದ ವೇತನದ ಮೊತ್ತ 85 ಲಕ್ಷ ರೂ.ಗಳನ್ನು ಪಿಎಂ ಕೇರ್ಸ್ ಫಂಡ್ ಮತ್ತು ಸಿಎಂ ರಿಲೀಫ್ ಫಂಡ್‌ಗೆ ನೀಡುವ ಮೂಲಕ ಬ್ಯಾಂಕಿನ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ ಎಂದು ವಿವರಿಸಿದರು.
ಒಟಿಎಸ್ ಪದ್ಧತಿ ವ್ಯವಸ್ಥೆ: ಬ್ಯಾಂಕ್‌ನಿಂದ ವಿತರಣೆಯಾದ ಸಾಲ ಮರುಪಾವತಿಯಲ್ಲಿ ಒಂದಷ್ಟು ಸಮಸ್ಯೆಯಿದೆ. ಮರುಪಾವತಿಸಲು ಸಮಸ್ಯೆಯಾದಲ್ಲಿ ಅಂತಹವರಿಗಾಗಿ ಓಟಿಎಸ್ (ಒನ್ ಟೈಮ್ ಸೆಟಿಲ್‌ಮೆಂಟ್) ಪದ್ಧತಿ ಜಾರಿಗೆ ತರಲಾಗಿದೆ. ಈ ಪದ್ಧತಿಯಲ್ಲಿ ಶೇ.25 ರಷ್ಟು ಸಾಲವನ್ನು ಪಾವತಿಸಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಅಂತಹ ಗ್ರಾಹಕರು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕೋವಿಡ್‌ಗೆ 16 ಸಿಬ್ಬಂದಿ ಬಲಿ; ಪರಿಹಾರ ವಿತರಣೆ: ಕೋವಿಡ್ ಸೋಂಕಿಗೆ ರಾಜ್ಯಾದ್ಯಂತ ಬ್ಯಾಂಕ್‌ನ ಒಟ್ಟು 14 (ಮೊದಲ ಅಲೆಯಲ್ಲಿ 6, 2ನೇ ಅಲೆಯಲ್ಲಿ 8) ಸಿಬ್ಬಂದಿಗಳು ಮೃತಪಟ್ಟಿದ್ದು, ಅವರೆಲ್ಲರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇನ್ನು ಬ್ಯಾಂಕ್ ಸಿಬ್ಬಂದಿಗಳ ವೇತನ ಸಮಸ್ಯೆಗೆ 170 ಕೋಟಿ ರೂ.ಗಳ ಅರಿಯರ್ನ್ನು ವಿತರಿಸುವ ಮೂಲಕ ಇತ್ಯರ್ಥ ಪಡಿಸಲಾಗಿದೆ.
ಜತೆಗೆ ಮನೆ ನಿರ್ಮಾಣಕ್ಕೆ, ವಾಹನಗಳ ಖರೀದಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಸಕ್ತ ವರ್ಷ 247 ಸಿಬ್ಬಂದಿಗಳನ್ನು ಭರ್ತಿ ಮಾಡುವ ಮೂಲಕ ಸಿಬ್ಬಂದಿ ಕೊರತೆ ನೀಗಿಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಮಹಾ ಪ್ರಬಂಧಕರಾದ ಜಿ.ಪ್ರದೀಪ್ ವರ್ಮಾ, ಎ.ಎನ್ .ಪ್ರಸಾದ್, ಎ.ಪಿ. ಹೇಮಾದ್ರಿ, ನಿಂಗೇಗೌಡ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಇದ್ದರು.