Advertisement

ಕೊರೊನಾ ವ್ಯಾಕ್ಸಿನ್‌ ಅಪಪ್ರಚಾರಕ್ಕೆ ಕಿವಿಗೊಡಬೇಡಿ

05:15 PM Jan 27, 2021 | |

ಹರಪನಹಳ್ಳಿ: ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಸೋಂಕು ತಡೆಗಟ್ಟಲು ಅಭಿವೃದ್ಧಿಪಡಿಸುವ ವಾಕ್ಸಿನ್‌ ಬಗ್ಗೆ ವಿರೋಧ ಪಕ್ಷಗಳು ಅಪ್ರಚಾರ ನಡೆಸುತ್ತಿದ್ದು, ಇದಕ್ಕೆ ಜನರು ಕಿವಿಗೊಡಬಾರದು ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್‌ ಜನರಲ್ಲಿ ಮನವಿ ಮಾಡಿದರು.

Advertisement

ತಾಲ್ಲೂಕಿನಲ್ಲಿ ಗೌರಿಹಳ್ಳಿ ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಗೌರಿಹಳ್ಳಿಯಿಂದ ಕನ್ನಾಯಕನಹಳ್ಳಿ ಗ್ರಾಮದವರೆಗೆ ಅಂದಾಜು 13.33 ಕೋಟಿರೂ ಮೊತ್ತದಲ್ಲಿ 17.82 ಕಿ.ಮೀ ರಸ್ತೆ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಆರಂಭದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ವ್ಯಾಕ್ಸಿನ್‌ ನೀಡಲಾಗುತ್ತಿದ್ದು, ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ಸಿಗಲಿದೆ. ಕಾಂಗ್ರೆಸ್‌ನವರು ಇದರ ಬಗ್ಗೆ ಅಪ್ರಚಾರ ನಡೆಸುತ್ತಿರುವುದು ಬೇಸರದ ಸಂಗತಿಯಾಗಿದೆ.

ಲಸಿಕೆ ನಿಜಕ್ಕೂ ಜೀವ ರಕ್ಷಕವಾಗಿದೆ ಎಂದ ಅವರು ರೈತರ ಹೆಸರಿನಲ್ಲಿ ಕೆಲವರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಯಿಂದ ರೈತರ ಆದಾಯ ದ್ವಿಗುಣಗೊಳ್ಳಲಿದೆ. ಇದರಲ್ಲಿ ರೈತರಿಗೆ ಮಾರಕವಾಗುವಂತಹ ಯಾವುದೇ ಅಂಶಗಳಿಲ್ಲ ಎಂದರು.
ಕೇಂದ್ರ ಸರ್ಕಾರದಿಂದ ಜಲ್‌ ಜೀವನ್‌ ಯೋಜನೆಯಡಿ ಪ್ರತಿ ಮನೆಗೂ ನೀರು ಕೊಡುವಂತಹ ಯೋಜನೆ ರೂಪಿಸಲಾಗಿದ್ದು, ದಾವಣಗೆರೆ ಜಿಲ್ಲೆಯ 370 ಗ್ರಾಮ ಆಯ್ಕೆ ಮಾಡಲಾಗಿದೆ. ಎಲ್ಲಾ ಗ್ರಾಮಗಳಿಗೂ ಈ ಯೋಜನೆ ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ. ರಸ್ತೆ ಅಭಿವೃದ್ಧಿಗಾಗಿ ನನ್ನ ಕ್ಷೇತ್ರಕ್ಕೆ 170 ಕೋಟಿರೂ ಅನುದಾನ ಮಂಜೂರಾಗಿದ್ದು, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅದ್ಯತೆ ನೀಡಲಾಗಿದೆ. ಗ್ರಾಮದ ಜನರು ರಸ್ತೆ ಕಳೆಪೆಯಾಗಲು ಬಿಡದೇ ಗುಣಮಟ್ಟದ ರಸ್ತೆ ಮಾಡುವಂತೆ ಜಾಗೃತಿವಹಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ಪಿಎಂಜಿಎಸ್‌ವೈನಲ್ಲಿ 20 ಕೋಟಿ ರೂ. ಹಣ ಬಂದಿದ್ದು, ಅಲಗಿಲವಾಡ ರಸ್ತೆ 8 ಕೋಟಿರೂ ಹಾಕಿದ್ದೇವೆ. ರಾಜ್ಯ ಸರ್ಕಾರದಿಂದ 100 ಕೋಟಿರೂ ಅ ಕ ಎಸ್ಸಿಪಿ ಮತ್ತು ಟಿಎಸ್ಸಿಪಿ ಯೋಜನೆಯಡಿ ಕಾಂಕ್ರಿಟ್‌ ರಸ್ತೆ, ಚರಂಡಿಗಳನ್ನು ಮಾಡಿದ್ದೇವೆ.

ಪ್ರತಿಯೊಂದು ಗ್ರಾಮದಲ್ಲಿ ಎಡೂ¾ರು ಶಾಲಾ ಕೊಠಡಿ ಮಂಜೂರಾಗಿವೆ. ಅಂಗನವಾಡಿ ಕೇಂದ್ರ ನಿರ್ಮಿಸಲಾಗುತ್ತಿದೆ. ಚಿಗಟೇರಿ ಮತ್ತು ಇತರೆ 110 ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಯೋಜನೆ ಹಾಗೂ ದೇವಾಲಯಗಳ ಜೀಣೋರ್ದಾರಕ್ಕೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೋರಲಾಗಿದೆ ಎಂದು ತಿಳಿಸಿದರು.

Advertisement

ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಎಲ್‌. ಮಂಜ್ಯನಾಯ್ಕ, ಪುರಸಭೆ ಅಧ್ಯಕ್ಷ ಮಂಜುನಾಥ ಇಂಜಾತ್ಕರ್‌, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌, ಮುಖಂಡರಾದ ಎಂ.ಪಿ.ನಾಯ್ಕ, ಆರ್‌.ಲೋಕೇಶ್‌, ಸಣ್ಣ ಹಾಲಪ್ಪ, ಪುರಸಭೆ ಸದಸ್ಯ ಎಂ.ಕೆ.ಜಾವೀದ್‌, ಎಇಇ ರವಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಓದಿ :    ಸ್ವೇಚ್ಛಾಚಾರಕ್ಕೆ ಸಂವಿಧಾನ ಬಳಕೆ ಬೇಡ

Advertisement

Udayavani is now on Telegram. Click here to join our channel and stay updated with the latest news.

Next