Advertisement

ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರವೂ ಮುಖ್ಯ

09:46 PM Jun 24, 2021 | Team Udayavani |

ಹರಪನಹಳ್ಳಿ: ದೇಶ ಅಭಿವೃದ್ಧಿ ಹೊಂದಬೇಕಾದರೆ ವಿದ್ಯಾìರ್ಥಿಗಳ ಪಾತ್ರ ಬಹಳ ಮುಖ್ಯವಾಗಿದ್ದು, ಈ ದಿಸೆಯಲ್ಲಿ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಶಾಸಕ ಜಿ. ಕರುಣಾಕ ರೆಡ್ಡಿ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಹಾಗೂ ಡಿಪ್ಲೊಮಾ ಪಾಲಿಟೆಕ್ನಿಕ್‌ ಕಾಲೇಜ್‌ ವಿದ್ಯಾರ್ಥಿಗಳಿಗೆ ಬುಧವಾರ ಉಚಿತ ಟ್ಯಾಬ್‌ ವಿತರಿಸಿ ಹಾಗೂ ಸ್ಮಾರ್ಟ್‌ ಕ್ಲಾಸ್‌ ರೂಂ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ನಾನು 2008ರಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಡಿಪ್ಲೊಮಾ ಪಾಲಿಟೆಕ್ನಿಕ್‌ ಕಾಲೇಜ್‌ ಮಂಜೂರು ಮಾಡಿಸಿ ತಾಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಕಟ್ಟಡಕ್ಕೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಕಾಲೇಜ್‌ ನಿರ್ಮಿಸಿ ಪ್ರಾರಂಭಿಸಿರುವುದರ ಫಲವಾಗಿ ಇಂದು ಈ ಕಾಲೇಜ್‌ನಲ್ಲಿ 2017 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದು ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದರು.

ಇನ್ನು ಮುಂದಿನ ದಿನಗಳಲ್ಲಿಯೂ ಈ ಕಾಲೇಜಿಗೆ ಬೇಕಾಗುವ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಬಳಿಕ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು. ನಂತರ ತಾಲೂಕಿನ ದುಗ್ಗಾವತಿ, ಕಡತಿ, ಹಲುವಾಗಲು ಗ್ರಾಮಗಳಿಗೆ ತೆರಳಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ದೇವದಾಸಿಯರಿಗೆ, ನಿರ್ಗತಿಕರಿಗೆ ಆಹಾರ ಕಿಟ್‌ ವಿತರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌, ಪುರಸಭಾ ಅಧ್ಯಕ್ಷ ಮಂಜುನಾಥ್‌ ಇಜಂತ್ಕರ್‌, ಸದಸ್ಯರುಗಳಾದ ಎಂ.ಕೆ.ಜಾವೀದ್‌, ಕಿರಣ್‌ ಶಾನಭೋಗ್‌, ಮುಖಂಡರಾದ ಆರ್‌.ಲೋಕೇಶ್‌, ಸಣ್ಣ ಹಾಲಪ್ಪ, ಬಾಗಳಿ ಕೊಟ್ರೇಶಪ್ಪ, ಬೆಣ್ಣಿಹಳ್ಳಿ ಕರೇಗೌಡ, ಬಿ.ವೈ. ವೆಂಕಟೇಶ್‌ ನಾಯ್ಕ, ಎಂ. ಮಲ್ಲೇಶ್‌, ರಂಗಾಪುರ ಬಸವರಾಜ್‌, ಆಲೂರು ಶ್ರೀನಿವಾಸ, ರಾಘವೇಂದ್ರಶೆಟ್ಟಿ, ಯು.ಪಿ. ನಾಗರಾಜ, ಎಂ.ಸಂತೋಷ, ಸಿಪಿಐ ನಾಗರಾಜ್‌ ಎಂ.ಕಮ್ಮಾರ, ಪಿಎಸ್‌ಐ ಪ್ರಕಾಶ್‌, ವಲಯ ಅರಣ್ಯಾ ಧಿಕಾರಿ ಭರತ್‌ ಡಿ. ತಳವಾರ, ಬಿಇಒ ಎಸ್‌.ಎಂ. ವೀರಭದ್ರಯ್ಯ, ಪ್ರಾಚಾರ್ಯರಾದ ಷಣ್ಮುಖನಗೌಡ, ಉಪನ್ಯಾಸಕರಾದ ಬಿ.ಎಂ. ವಿಜಯ್‌ ಕುಮಾರ್‌, ಭೀಮಪ್ಪ, ಹುಚ್ಚುರಾಯಪ್ಪ, ಜಟ್ಟೆಪ್ಪ, ತೆಲಿಗಿ ಈಡಿಗರ ಅಂಜಿನಪ್ಪ, ಶಿವರಾಜ ಹೂವಾಗರ್‌ ಪೊಲೀಸ್‌ ಸಿಬ್ಬಂದಿಗಳಾದ ಕೂಲಹಳ್ಳಿ ಕೊಟ್ರೇಶ, ವಾಸುನಾಯ್ಕ, ರವಿ ದಾದಪುರ, ಅರಣ್ಯ ಇಲಾಖೆ ಸಿಬ್ಬಂದಿ ಶಿವಕುಮಾರ್‌, ರಾಥೋಡ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next