Advertisement
ಕೋವಿಡ್ ಸೋಂಕು ನಿಯಂತ್ರಿಸಲು ವಿಧಿಸಲಾಗಿದ್ದ ಲಾಕ್‌ಡೌನ್ ನಿಮಿತ್ತ ಕಳೆದ ಒಂದೂವರೆ ತಿಂಗಳಿಂದ ಬಿಕೋ ಎನ್ನುತ್ತಿದ್ದ ನಗರದ ಪ್ರಮುಖ ರಸ್ತೆಗಳು, ಸೋಮವಾರದಿಂದ ಮಧ್ಯಾಹ್ನದವರೆಗೆ ಅನ್ ಲಾಕ್ ಆದ ಹಿನ್ನೆಲೆಯಲ್ಲಿ ರಸ್ತೆಗಳು ವಾಹನದಟ್ಟಣೆ, ಜನಜಂಗುಳಿಯಿಂದ ಕಂಗೊಳಿಸಿದವು.
Related Articles
Advertisement
ನಗರದ ಬೆಂಗಳೂರು ರಸ್ತೆಯಲ್ಲಿನ ಬಟ್ಟೆ, ರೆಡಿಮೇಡ್ ಗಾರ್ಮೆಂಟ್ಸ್ ಶಾಪ್‌ಗ್ಳು ಕದ್ದು ಮುಚ್ಚಿ ವಹಿವಾಟು ನಡೆಸುತ್ತಿದ್ದವು. ಕೆಲವೊಂದು ಮಳಿಗೆಗಳು ಅರ್ಧಕ್ಕೆ ಬಾಗಿಲು ತೆರೆದಿದ್ದರೆ, ಇನ್ನು ಕೆಲ ಮಳಿಗೆಗಳ ಮುಂದೆ ಸಿಬ್ಬಂದಿ, ಮಾಲೀಕರು ನಿಂತು ಬಂದ ಗ್ರಾಹಕರನ್ನು ಸದ್ದಿಲ್ಲದೇ ಬಾಗಿಲು ತೆರೆದು ಒಳಗೆ ಕಳುಹಿಸಿ ಬಾಗಿಲು ಹಾಕಿ ವ್ಯಾಪಾರ ನಡೆಸುತ್ತಿದ್ದರು. ಪೊಲೀಸರು ಬರುತ್ತಿದ್ದಂತೆ ಬಾಗಿಲು ಹಾಕಿ ಮಾಯವಾಗುತ್ತಿದ್ದ ದೃಶ್ಯ ಕಂಡುಬಂತು.
ಕಾಣದ ಸಾಮಾಜಿಕ ಅಂತರ: ಅನ್‌ಲಾಕ್ ಆದ ಹಿನ್ನೆಲೆಯಲ್ಲಿ ತೆರೆಯಲಾದ ಮಳಿಗೆಗಳ ಮುಂದೆ ಗುಂಪುಗುಂಪಾಗಿ ನಿಂತಿದ್ದ ಗ್ರಾಹಕರ ನಡುವೆ ಸಾಮಾಜಿಕ ಅಂತರ ಮಾಯವಾಗಿತ್ತು. ಕೋವಿಡ್ ಮೊದಲ ಅವಧಿ ಯಂತೆ ಅಂಗಡಿಗಳ ಮುಂದೆ ಗ್ರಾಹಕರು ನಿಲ್ಲಲು ವೃತ್ತಗಳನ್ನು ಹಾಕಲಾಗಿತ್ತಾದರೂ, ಯಾರೊಬ್ಬರೂ ಪಾಲಿಸುತ್ತಿರಲಿಲ್ಲ. ಈ ಕುರಿತು ಮಳಿಗೆಯವರು ಸಹ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಪಾಡುವಂತೆ ಸೂಚನೆ ನೀಡುತ್ತಿರಲಿಲ್ಲ. ಮುಖ್ಯವಾಗಿ ಗ್ರಾಹಕರಿಗೆ ಸ್ಯಾನಿಟೈಸರ್ ಸಹ ವ್ಯವಸ್ಥೆ ಮಾಡಿರಲಿಲ್ಲ. ಇವ್ಯಾವನ್ನೂ ಗಮನಿಸದ ಗ್ರಾಹಕರು ಸಹ ಗುಂಪಲ್ಲೇ ನಿಂತು ಕೂಗಿ ಕೂಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.