Advertisement

ಕಾಂಗ್ರೆಸ್ಸಿಗರು ಸ್ಥಾನಮಾನಗಳಿಗೆ ಗೌರವ ಕೊಡಲಿ

10:26 PM Jun 14, 2021 | Team Udayavani |

ಹಗರಿಬೊಮ್ಮನಹಳ್ಳಿ: ದೇಶದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ತೈಲವನ್ನು ತರಿಸಿಕೊಳ್ಳಲು 2 ಲಕ್ಷ ಕೋಟಿರೂ. ಗಳ ಸಾಲ ಮಾಡಿದ್ದು, ಬಿಜೆಪಿ ಸರಕಾರ ಬಡ್ಡಿ ಸಮೇತ ಸಾಲ ತೀರಿಸಿ ತೈಲ ಉತ್ಪನ್ನ ರಾಷ್ಟ್ರಗಳ ಹುಬ್ಬೇರಿಸುವಂತೆ ಮಾಡಿದೆ ಎಂದು ಕ್ಷೇತ್ರದ ಮಾಜಿ ಶಾಸಕ ಕೆ.ನೇಮರಾಜನಾಯ್ಕ ತಿಳಿಸಿದರು.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಟ್ಟಣದ ಆಟೋ ಚಾಲಕರಿಗೆ ಮತ್ತು ಅಲೆಮಾರಿ ಸಮುದಾಯಗಳ ಕುಟುಂಬಗಳಿಗೆ ಆಹಾರ ಕಿಟ್‌ ಗಳನ್ನು ವಿತರಿಸಿ ನಂತರ ಅವರು ಮಾತನಾಡಿದರು. ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳ ಹಗುರವಾಗಿ ಮಾತನಾಡುತ್ತಿರುವುದನ್ನು ನಿಲ್ಲಿಸಬೇಕು.

ರಾಜ್ಯದ ಜನತೆ ಕೋವಿಡ್‌ನಿಂದ ಸಂಕಷ್ಟದಲ್ಲಿ ಇರುವುದನ್ನು ಅರಿತು ವಿವಿಧ ಸಮುದಾಯದ ಬಡಜನತೆಗೆ ಯಡಿಯೂರಪ್ಪನವರು ಪ್ರೋತ್ಸಾಹ ಧನ ಘೋಷಣೆ ಮಾಡಿರುವುದನ್ನು ಸಿದ್ದರಾಮಯ್ಯ ತಿಳಿದುಕೊಳ್ಳಬೇಕು. ಸಿದ್ದರಾಮಯ್ಯ ಕೂಡ ರಾಜ್ಯದ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದವರಾಗಿದ್ದಾರೆ, ಸ್ಥಾನಮಾನಗಳಿಗೆ ಗೌರವ ಕೊಡುವುದನ್ನು ಕಲಿಯಬೇಕು. ಈ ದೇಶದ 80 ಕೋಟಿ ಜನತೆಗೆ ದೀಪಾವಳಿಯವರೆಗೂ ಆಹಾರ ವಿತತರಿಸುವಂತೆ ಆದೇಶಿಸಿದ್ದಾರೆ. ಕಾಂಗ್ರೆಸ್‌ ಟೀಕೆ ಮಾಡಬೇಕೆಂದೇ ಮಾಡುತ್ತಿದೆ.

ದೇಶದ ಜನತೆಯ ಬಗ್ಗೆ ನಿಜವಾದ ಕಾಳಜಿ ಇಲ್ಲ. ಇವರ ಸರಕಾರದ ಅವ ಧಿಯಲ್ಲಿ ಸಿಲಿಂಡರ್‌ ಪಡೆಯಬೇಕಾದರೆ ಬ್ಲಾಕ್‌ನಲ್ಲಿ ಪಡೆಯುತ್ತಿದ್ದೇವು. ಇಂದು ಮೊಬೈಲ್‌ ಮೂಲಕ ಸಂದೇಶ ಕಳಿಸಿದರೆ ಎರಡೇ ದಿನಕ್ಕೆ ಮನೆಬಾಗಿಲಿಗೆ ಸಿಲಿಂಡರ್‌ ಬರುತ್ತದೆ. ಕಾಂಗ್ರೆಸ್‌ ನವರು ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುವುದನ್ನು ನಿಲ್ಲಿಸಬೇಕು. ಲಸಿಕೆಗಾಗಿ 100 ಕೋಟಿ ರೂ.ಗಳನ್ನು ನೀಡುವ ಕಾಂಗ್ರೆಸ್‌ನ ಶಾಸಕರುಗಳು, ಅನುದಾನ ಬಿಟ್ಟು ಸ್ವಂತ ಹಣ ನೀಡಲಿ.

ಅನುದಾನದ ಮೊತ್ತವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಲಿ. ಈಗಾಗಲೇ ಉಚಿತ ಲಸಿಕೆಯನ್ನು ಸರಕಾರ ನೀಡುತ್ತಿದೆ ಎಂಬುದನ್ನು ಮರೆಯಬಾರದು. ಶ್ರಮಿಕರಿಗೊಂದು ನಮನ ಎನ್ನುವ ಕಿಟ್‌ಗಳನ್ನು ಕ್ಷೇತ್ರದ 3 ಸಾವಿರಕ್ಕೂ ಹೆಚ್ಚು ಬಡಜನತೆಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು. ಮುಖಂಡ ಭದ್ರವಾಡಿ ಚಂದ್ರಶೇಖರ ಮಾತನಾಡಿ, ಕ್ಷೇತ್ರದಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡಿದ್ದರೂ ಕೂಡ ಮಾಜಿ ಶಾಸಕ ನೇಮರಾಜನಾಯ್ಕ ನಿರಂತರವಾಗಿ ಜನತೆ ಸಂಪರ್ಕದಲ್ಲಿದ್ದು ಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಿ. ಗಂಗಾಧರ, ಬದಾಮಿ ಮೃತ್ಯುಂಜಯ, ಚಿತ್ತವಾಡ್ಗಿ ಪ್ರಕಾಶ, ಬಡಿಗೇರ್‌ ಬಸವರಾಜ್‌, ಬಿಜೆಪಿ ಮಂಡಲ ಕಾರ್ಯದರ್ಶಿ ಬ್ಯಾಟಿ ನಾಗರಾಜ್‌, ನಗರ ಘಟಕದ ಅಧ್ಯಕ್ಷ ಜೆ.ಎಂ. ಜಗದೀಶಯ್ಯ, ಕಿನ್ನಾಳ್‌ ಸುಭಾಷ್‌, ಗರಗ ಪ್ರಕಾಶ್‌, ಟಿ.ಮಹೇಂದ್ರ, ಕುರುಬರ ವೆಂಕಟೇಶ, ಉಮಾದೇವಿ, ಜ್ಯೋತಿರಾಜ್‌, ಶೋಭಾ, ಉಮಾಪತಿ, ಐನಳ್ಳಿ ಶೇಖರ್‌, ನಾಗರಾಜ್‌, ಬಿ.ಜಿ.ಬಡಿಗೇರ್‌, ರಾಹುಲ್‌, ಸಿದ್ದರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next