Advertisement
ಬಳ್ಳಾರಿ: ಮಹಮ್ಮಾರಿ ಕೋವಿಡ್ ಸೋಂಕು ಎರಡನೇ ಅಲೆ ನಿಯಂತ್ರಿಸಲು ಕಳೆದ ಒಂದೂವರೆ ತಿಂಗಳಿಂದ ರಾಜ್ಯ ಸರ್ಕಾರ ವಿಧಿ ಸಿದ್ದ ಲಾಕ್‌ಡೌನ್ ಮುಕ್ತಾಯವಾಗಿದ್ದು, ಸೋಮವಾರ ಬೆಳಗಿನ ಜಾವ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮೊದಲ ಅನ್‌ಲಾಕ್ 1 ಆರಂಭವಾಗಲಿದೆ.
Related Articles
Advertisement
ಏನೇನು ಇರಲಿವೆ: ಅನ್‌ಲಾಕ್ 1ರಲ್ಲಿ ಉತ್ಪಾದನೆ ಘಟಕ, ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳ ಚಾಲನೆಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ ಕೇವಲ ಶೇ. 50ರಷ್ಟು ಸಿಬ್ಬಂದಿ ಬಳಸಿಕೊಳ್ಳಬೇಕು ಎಂದು ಸೂಚಿಸಿದೆ. ಅದೇ ರೀತಿ ಗಾರ್ಮೆಂಟ್ಸ್ ಉತ್ಪಾದನಾ ಘಕಟಗಳು ಕೇವಲ ಶೇ. 30ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಘಟಕಗಳಿಗೆ ಚಾಲನೆ ನೀಡಬಹುದಾಗಿದೆ.
ಆಹಾರ, ದಿನಸಿ, ಹಣ್ಣುಗಳು ಮತ್ತು ವೆಜಿಟೇಬಲ್‌ಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು ಮತ್ತು ಪ್ರಾಣಿಗಳ ಮೇವಿನೊಂದಿಗೆ ವ್ಯವಹರಿಸುವ ಅಂಗಡಿಗಳಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ರಸ್ತೆ, ಬೀದಿಬದಿ ವ್ಯಾಪಾರಿಗಳಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳಿಗೂ ಸಹ ಅನುಮತಿಸಲಾಗಿದೆ. ಮದ್ಯದಂಗಡಿಗಳು ಮತ್ತು ಮಳಿಗೆಗಳು, ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಅನುಮತಿಸಿ. ಎಲ್ಲ ವಸ್ತುಗಳ ಮನೆ ವಿತರಣೆಯು 24/7 ಅನ್ನು ತಮ್ಮ ಮನೆಗಳ ಹೊರಗಿನ ನಿವಾಸಿಗಳ ಚಲನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅನುಮತಿ ನೀಡಲಾಗಿದೆ.
ಅಲ್ಲದೇ, ಕಟ್ಟಡ ಸೇರಿ ಎಲ್ಲ ನಿರ್ಮಾಣ ಚಟುವಟಿಕೆಗಳು/ದುರಸ್ತಿ ಕಾರ್ಯಗಳು ಅಂಗಡಿಗಳು/ಸಂಸ್ಥೆಗಳು ಸೇರಿದಂತೆ ನಿರ್ಮಾಣ ಮೆಟೀರಿಯಲ್, ವಿಶೇಷವಾಗಿ ಸಿಮೆಂಟ್ ಮತ್ತು ಸ್ಟೀಲ್ ಘಟಕಕ್ಕೆ ಅನುಮತಿ ನೀಡಲಾಗಿದ್ದು, ಅಗತ್ಯ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಉದ್ಯಾನವನಕ್ಕೆ ಅವಕಾಶ: ಅನ್‌ಲಾಕ್ 1ರಲ್ಲಿ ಉದ್ಯಾನವನಗಳಿಗೂ ಬೆಳಗಿನ ಜಾವ 5 ಗಂಟೆಯಿಂದ 10 ಗಂಟೆವರೆಗೆ ತೆರೆಯಲು ಅವಕಾಶ ಕಲ್ಪಿಸಿದೆ. ಈ ಅವ ಧಿಯಲ್ಲಿ ವಾಯುವಿವಾರ, ವಾಕಿಂಗ್, ಜಾಗಿಂಗ್ ಮಾಡುವವರಿಗೆ ಅನುಮತಿ ನೀಡಲಾಗಿದೆ. ಆದರೆ, ಯಾವುದೇ ಗುಂಪು ಚಟುವಟಿಕೆಗಳನ್ನು ನಿಷೇಧಿ ಸಿದ್ದು ನಡೆಸುವಂತಿಲ್ಲ.