Advertisement
ಬಳ್ಳಾರಿ: ಕೋವಿಡ್ ಸೋಂಕು ಎರಡನೇ ಅಲೆ ಪರಿಣಾಮ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದ ಮೇಲೂ ಪರಿಣಾಮ ಬೀರಿದೆ. ಸೋಂಕು ನಿಯಂತ್ರಣಕ್ಕಾಗಿ ಕಳೆದ ಒಂದು ತಿಂಗಳಿಂದ ವಿಧಿ ಸಲಾಗಿರುವ ಲಾಕ್‌ಡೌನ್‌ನಿಂದ ನಂದಿನಿ ಹಾಲು ಮತ್ತದರ ಉತ್ಪನ್ನಗಳ ಮಾರಾಟ ಕುಸಿದಿದ್ದು, ಹೆಚ್ಚುವರಿ ಹಾಲು ಶಾಲಾ ಮಕ್ಕಳಿಗೆ ವಿತರಿಸಲು ಸಿದ್ಧತೆ ನಡೆಸಿದೆ.
Related Articles
Advertisement
ಹಾಲಿನ ಪೌಡರ್‌ಗೆ ಪರಿವರ್ತನೆ: ಸದ್ಯ ಲಾಕ್ ಡೌನ್ ಪರಿಣಾಮ ಮಾರಾಟ ಕುಸಿತದಿಂದ ಪ್ರತಿದಿನ ಸರಾಸರಿ ಉಳಿಯುವ 15 ಸಾವಿರ ಲೀಟರ್ ಹಾಲನ್ನು ಧಾರವಾಡ ಡೈರಿಗೆ ಕಳುಹಿಸಿ ಹಾಲಿನ ಪೌಡರ್‌ನ್ನಾಗಿ ಪರಿವರ್ತಿಸಲಾಗುತ್ತದೆ. ಈ ಪೌಡರ್ ಅನ್ನು ಪುನಃ ವಾಪಸ್ ಪಡೆದ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿನ ಅಂಗನವಾಡಿ, ಪ್ರಾಥಮಿಕ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಈ ಮೊದಲು ತಿಂಗಳಿಗೆ 400 ಟನ್ ಹಾಲಿನ ಪೌಡರ್ ಬೇಕಾಗುತ್ತಿತ್ತು. ಬೇರೆ ಒಕ್ಕೂಟಗಳಿಂದ ಖರೀದಿಸಿ ವಿತರಿಸಲಾಗುತ್ತಿತ್ತು ಎಂದು ಸ್ಪಷ್ಟಪಡಿಸಿದರು.
ಪ್ರೌಢಶಾಲೆಗೂ ಕ್ಷೀರಭಾಗ್ಯ: ಲಾಕ್‌ಡೌನ್ ಪರಿಣಾಮ ಒಕ್ಕೂಟದಲ್ಲಿ ಪ್ರತಿದಿನ ಉಳಿಯುತ್ತಿರುವ ಹಾಲನ್ನು ಪೌಡರ್ ಆಗಿ ಪರಿವರ್ತಿಸಿ ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ, ಪ್ರಾಥಮಿಕ ವಿದ್ಯಾರ್ಥಿಗಳಿಗೆ ವಿತರಿಸಿದಂತೆ, ಪ್ರೌಢಶಾಲೆ ವಿದ್ಯಾರ್ಥಿಗಳಿಗೂ ಜೂನ್-ಜುಲೈ ತಿಂಗಳಲ್ಲಿ ವಿತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲಾಕ್‌ಡೌನ್ ಪರಿಣಾಮ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಕ್ಷೀರಭಾಗ್ಯ ಯೋಜನೆ, ಶಾಲೆಗಳು ಆರಂಭವಾದಲ್ಲಿ ಪುನಃ ಚಾಲನೆ ಪಡೆದುಕೊಳ್ಳಲಿದೆ. ಆಗ ಉಳಿದ ಈ ಎಲ್ಲ ಹಾಲನ್ನು ನಿಭಾಯಿಸಬಹುದು ಎನ್ನುತ್ತಾರೆ ಅವರು. ಲಾಕ್‌ಡೌನ್‌ನಿಂದ ಒಕ್ಕೂಟಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟವಾಗದಿದ್ದರೂ ಉತ್ಪನ್ನಗಳ ಮಾರಾಟವಂತೂ ಕುಸಿತವಾಗಿದೆ.