Advertisement

ರಸಗೊಬ್ಬರ ಅಭಾವ: ತಪ್ಪದ ರೈತರ ಅಲೆದಾಟ

10:24 PM Jun 10, 2021 | Team Udayavani |

„ರವಿಕುಮಾರ್‌ ಎಂ

Advertisement

ಕೊಟ್ಟೂರು: ಈ ವರ್ಷ ಪ್ರಾರಂಭದಿಂದಲೇ ಮುಂಗಾರು ಮಳೆ ಧಾರಾಕಾರವಾಗಿ ಸುರಿದಿದೆ. ರೈತರು ಹೊಲಗಳನ್ನು ಹದ ಮಾಡಿಕೊಂಡು ರಸಗೊಬ್ಬರ ಶೇಖರಣೆಗೆ ಮುಂದಾಗಿದ್ದಾರೆ. ಇತ್ತ ರಸಗೊಬ್ಬರ ಸಿಗದೇ ಕಂಗಾಲಾಗಿದ್ದಾರೆ.

ತಾಲೂಕಿನಲ್ಲಿ 24 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದುಡಿಮೆಗೆಂದು ಪರ ಊರಿಗೆ ಹೋದ ಮಕ್ಕಳೆಲ್ಲ ಗ್ರಾಮದ ಕಡೆ ಮುಖಮಾಡಿ ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ವರ್ಷ ಉತ್ತಮ ಬೆಳೆ ಬೆಳೆಯಲೇಬೇಕು ಎಂದು ನಿರ್ಧರಿಸಿ ರಸಗೊಬ್ಬರ ಖರೀದಿಗೆ ಸಾಲುಗಟ್ಟಿ ಅಂಗಡಿ ಮುಂದೆ ಜಮಾಯಿಸಿದ್ದಾರೆ. ಆದರೆ ಡಿಎಪಿ ರಸಗೊಬ್ಬರದ ಕೊರತೆ ಎದುರಾಗಿದ್ದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ಬೆಳಗಿನಿಂದ ಸಾಲಿನಲ್ಲಿ ನಿಂತರೂ ಕೇವಲ 2 ಚೀಲಗಳು ಮಾತ್ರ ಸಿಗುತ್ತಿದ್ದು ಬೆಳೆಗೆ ಬೇಕಾದ ಅಗತ್ಯ ಗೊಬ್ಬರಗಳೇ ಸಿಗುತ್ತಿಲ್ಲ ಎಂದು ಕಂಗಾಲಾಗಿದ್ದಾರೆ. ಸರ್ಕಾರ ಡಿಎಪಿ ರಸಗೊಬ್ಬರವನ್ನು ಸಮಯಕ್ಕೆ ಸರಿಯಾಗಿ ವಿತರಿಸಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂಬುದು ರೈತರ ಅಳಲು.

Advertisement

ರೈತರಿಗೆ ಡಿಎಪಿ ಗೊಬ್ಬರ ಸಮರ್ಪಕವಾಗಿ ಸಿಗುವಂತೆ ಸೂಚಿಸುತ್ತೇನೆ. ಖಾಸಗಿ ಅಂಗಡಿಯವರು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಹಾಗೂ ಗೋದಾಮಿನಲ್ಲಿ ಇಟ್ಟು ಕೃತಕ ಅಭಾವ ಸೃಷ್ಟಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇನೆ.

ಜಿ.ಅನಿಲ್‌ಕುಮಾರ್‌,

ತಹಶೀಲ್ದಾರ್‌, ಕೊಟ್ಟೂರು

 

ಮುಂಗಾರು ಮಳೆ ಬಂದಾಗಿನಿಂದ ಹೊಲಗಳನ್ನು ಹದ ಮಾಡಿದ್ದೇವೆ. ಆದರೆ ರಸಗೊಬ್ಬರ ಪ್ರಾರಂಭದಲ್ಲೇ ಕೊರತೆಯಾದರೆ ಮುಂದಿನ ದಿನಗಳಲ್ಲಿ ಹೇಗೆ. ಕೂಡಲೇ ಸರ್ಕಾರ ನಮ್ಮಂತ ರೈತರ ಕಡೆ ಗಮನಹರಿಸಿ ಸಮರ್ಪಕವಾಗಿ ರಸಗೊಬ್ಬರ, ಬಿತ್ತನೆ ಬೀಜ ನೀಡಲು ಮುಂದಾಗಬೇಕು.

ಕೊಟ್ರೇಶಪ್ಪ, ರೈತ

ರಸಗೊಬ್ಬರ ವಿಚಾರವಾಗಿ ಕೃಷಿ ಜಂಟಿ ನಿರ್ದೇಶಕರೊಂದಿಗೆ ಮಾತನಾಡಿ ರೈತರಿಗೆ ಅನ್ಯಾಯವಾಗದಂತೆ ಅಧಿ ಕಾರಿಗಳಿಗೆ ಸೂಚಿಸುತ್ತೇನೆ. ಕಳಪೆಮಟ್ಟದ ಬೀಜಗಳನ್ನು ವಿತರಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಅಧಿ ಕಾರಿಗಳಿಗೆ ಸೂಚಿಸುತ್ತೇನೆ. ಕೂಡಲೇ ಸಮರ್ಪಕವಾಗಿ ರಸಗೊಬ್ಬರ ಪೂರೈಸಲು ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವೆ.

ಎಸ್‌. ಭೀಮಾನಾಯ್ಕ ಶಾಸಕರು, ಹಗರಿಬೊಮ್ಮನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next