Advertisement
ಬಳ್ಳಾರಿ: ರೈತರಲ್ಲಿ ಬೇಡಿಕೆ ಹೆಚ್ಚಿರುವ ಸಿಂಜೆಂಟಾ ಕಂಪನಿ ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿಕೊಳುತ್ತಿರುವ ಡೀಲರ್‌ಗಳು ಇನ್ನುಮುಂದೆ ಡಿಸ್ಟ್ರಿಬ್ಯೂಟರ್, ಅಧಿ ಕಾರಿಗಳ ಸಮ್ಮುಖದಲ್ಲೇ ಶೇ. 5ರಷ್ಟು ಲಾಭಕ್ಕೆ ರೈತರಿಗೆ ಬೀಜ ಮಾರಾಟ ಮಾಡಬೇಕಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪರ ಸಲಹೆಯಂತೆ ಮಳಿಗೆಗಳ ಮೇಲೆ ದಾಳಿ ನಡೆಸಿರುವ ಕೃಷಿ, ತೋಟಗಾರಿಕೆ ಅಧಿ ಕಾರಿಗಳು ಡೀಲರ್‌ಗಳಿಗೆ ತಾಕೀತು ಮಾಡಿದ್ದಾರೆ.
Related Articles
Advertisement
ಈ ವೇಳೆ ಪರವಾನಗಿ ಇಲ್ಲದೇ ಮಾರಾಟ ಸೇರಿ ವಿವಿಧ ಲೋಪದೋಷಗಳನ್ನು ಪತ್ತೆಹಚ್ಚಿ ನೋಟಿಸ್ ಜಾರಿಗೊಳಿಸಿದ್ದಾರೆ. ಆರು ಪ್ರಕರಣಗಳ ದಾಖಲಿಸಲಾಗಿದೆ. ದಾಳಿ ವೇಳೆ ಬೇಡಿಕೆ ಹೆಚ್ಚಿರುವ ಸಿಂಜೆಂಟಾ ಕಂಪನಿ 5531, 2043 ಮೆಣಸಿನಕಾಯಿ ಬಿತ್ತನೆ ಬೀಜದ ದಾಸ್ತಾನು ಕಂಡುಬಂದಿಲ್ಲ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಎಸ್.ಬೋಗಿ ತಿಳಿಸಿದ್ದಾರೆ.
ಶೇ. 5ರ ಲಾಭಕ್ಕೆ ಮಾರಾಟ:ಕಳೆದ ವರ್ಷ ಸಿಂಜೆಂಟಾ ಕಂಪನಿಯ 5531 ಮತ್ತು 2043 ಬಿತ್ತನೆ ಬೀಜದಿಂದ ಉತ್ತಮ ಉಳುವರಿ ಬಂದಿತ್ತಾದರೂ, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ ಕಾಯಿಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಚುಕ್ಕೆಗಳು ಬಂದಿರಲಿಲ್ಲ. ಇದು ರೈತರಿಗೆ ಹೆಚ್ಚು ಲಾಭ ತಂದುಕೊಡದಿದ್ದರೂ, ಸಾಲದ ಸುಳಿಗಂತೂ ಸಿಲುಕಿಸಲಿಲ್ಲ. ಪರಿಣಾಮ ಈ ಬಿತ್ತನೆ ಬೀಜಗಳ ಮೇಲೆ ಈ ವರ್ಷ ರೈತರಲ್ಲಿ ಹೆಚ್ಚು ವಿಶ್ವಾಸ ಮೂಡಿದೆ.
ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಕಂಪನಿಗಳ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದ ರೈತರು ಸಹ ಈ ಬಾರಿ ಸಿಂಜೆಂಟಾ ಕಂಪನಿಯ 5531, 2043 ಬೀಜಕ್ಕಾಗಿ ಅಲೆದಾಡುತ್ತಿರುವುದು ಸಾಧಾರಣವಾಗಿ ಬೀಜಕ್ಕೆ ಬೇಡಿಕೆ ಹೆಚ್ಚಲು ಕಾರಣವಾಗಿದೆ.
ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಡೀಲರ್‌ಗಳು, ಲಾಕ್‌ಡೌನ್ ನೆಪವೊಡ್ಡಿ ಬೀಜಗಳನ್ನು 80, 90 ಸಾವಿರ ರೂ.ಗಳಿಂದ 1 ಲಕ್ಷ ರೂ. ಗಳವರೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡು ಅ ಕ ಲಾಭ ಗಳಿಸಿದ್ದಾರೆ. ಹೀಗಾಗಿ ಈ ದಂಧೆಗೆ ಕಡಿವಾಣ ಹಾಕುವ ಸಲುವಾಗಿ ಸಿಂಜೆಂಟಾ ಕಂಪನಿಯ 5531 ಬಿತ್ತನೆ ಬೀಜಕ್ಕೆ ಕೆಜಿ 57 ಸಾವಿರ ರೂ, 2043 ಬೀಜಕ್ಕೆ ಕೆಜಿ 67 ಸಾವಿರ ರೂ. ಬೆಲೆ ನಿಗದಿಪಡಿಸಲಾಗಿದೆ.
ಡೀಲರ್‌ಗಳು ಮೂಲಬೆಲೆಗೆ ಶೇ.5 ರಷ್ಟು ಲಾಭವನ್ನಿಟ್ಟುಕೊಂಡು ರೈತರಿಗೆ ಮಾರಾಟ ಮಾಡಬೇಕು. ಜತೆಗೆ ಡಿಸ್ಟ್ರಿಬ್ಯೂಟರ್‌ಗಳು, ಇಲಾಖೆ ಅ ಧಿಕಾರಿಗಳ ಸಮ್ಮುಖದಲ್ಲೇ ರೈತರಿಗೆ ವಿತರಿಸಬೇಕು ಎಂದು ಅ ಧಿಕಾರಿಗಳು ಸೂಚನೆ ನೀಡಿದ್ದಾರೆ.