Advertisement
ನಗರದ ಜಿಪಂ ನಜೀರ್‌ಸಾಬ್ ಸಭಾಂಗಣದಲ್ಲಿ ಸೋಮವಾರ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂ ಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆ ಆರಂಭವಾದ ಕೆಲಹೊತ್ತಿಗೆ ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಈಶ್ವರಪ್ಪ, ಮೆಣಸಿನಕಾಯಿ ಬೀಜ ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅಧಿಕಾರಿಗಳು ಏನು ಕ್ರಮಕೈಗೊಂಡಿದ್ದೀರಿ? ಎಂದು ಕೃಷಿ, ತೋಟಗಾರಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಧ್ಯ ಪ್ರವೇಶಿಸಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಿತ್ತನೆ ಬೀಜ ದೊರೆಯದೇ ರೈತರು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ ಎಂದರು.
Related Articles
Advertisement
ಗ್ರಾಪಂಗೆ 50 ಸಾವಿರ ಅನುದಾನ: ಸಚಿವರು ಗ್ರಾಮೀಣ ಮಟ್ಟದಲ್ಲಿ ರಚಿಸಲಾದ ಕಾರ್ಯಪಡೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. 14ನೇ ಹಣಕಾಸು ಯೋಜನೆ ಅಡಿ ಬಾಕಿ ಉಳಿದ ಅನುದಾನ, 15ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಳ್ಳುವುದರ ಜೊತೆಗೆ ಕೋವಿಡ್ ನಿರ್ವಹಣೆಗಾಗಿ ಪ್ರತಿ ಗ್ರಾಪಂಗಳಿಗೆ ತಲಾ 50 ಸಾವಿರ ರೂ. ಗಳನ್ನು ಇನ್ನೂ 3-4 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಈ ಅನುದಾನ ಬಳಸಿಕೊಂಡು ಸೋಂಕನ್ನು ಸಂಪೂರ್ಣ ತಹಬದಿಗೆ ತರಬೇಕು ಎಂದು ಅವರು ಸೂಚಿಸಿದರು.
ಬಾಲಚೈತನ್ಯ ಕೇಂದ್ರಗಳು ಆರಂಭ: ಜಿಪಂ ಸಿಇಒ ಕೆ.ಆರ್. ನಂದಿನಿ ಮಾತನಾಡಿ, ಕೊರೊನಾ 3ನೇ ಅಲೆಯಿಂದ ಮಕ್ಕಳನ್ನು ಪಾರು ಮಾಡಲು ಜಿಲ್ಲಾಡಳಿತ ಮತ್ತು ಜಿಪಂ ಜೊತೆಗೂಡಿ ಬಾಲಚೈತನ್ಯ ಹೆಸರಿನ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಜೂ.8ರಂದು ಪ್ರಾಯೋಗಿಕವಾಗಿ ಬಳ್ಳಾರಿ, ಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ 2ನೇ ಹಂತದಲ್ಲಿ ಜೂ.10ರಂದು ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹರಪ್ಪನಹಳ್ಳಿ ಮತ್ತು ಸಿರುಗುಪ್ಪ ತಾಲ್ಲೂಕುಗಳಲ್ಲಿ ಚಾಲನೆ ನೀಡಲಾಗುತ್ತಿದೆ. ಈಗಾಗಲೇ ಎಲ್ಲ ತಾಲ್ಲೂಕುಗಳಲಿ ತಲಾ 2 ಕೇಂದ್ರಗಳಂತೆ ಜಿಲ್ಲೆಯಲ್ಲಿ ಆರೈಕೆ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದರು.
0-6 ವರ್ಷದೊಳಗಿನ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜಿಲ್ಲೆಯಲ್ಲಿ ಒಟ್ಟು 827 ತೀವ್ರ ಅಪೌಷ್ಟಿಕ ಮಕ್ಕಳಿದ್ದು, 45,774 ಸಾಧರಣಾ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿದ್ದು, ಈ ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆ ಹಾಗೂ ರೋಗನಿರೋಧಕ ಹೆಚ್ಚಿಸುವ ಸಲುವಾಗಿ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ಕೇಂದ್ರಕ್ಕೆ ಅವಶ್ಯವಿರುವ ಔಷಧ, ವೈದ್ಯಕೀಯ ಸಿಬ್ಬಂದಿ, ಚಿಕಿತ್ಸೆಗೆ ಬಳಕೆ ಮಾಡುವ ಸಾಮಗ್ರಿಗಳ ಪಟ್ಟಿ ತಯಾರಿಸಲಾಗಿದೆ ಎಂದರು.
ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಸೈಯದ್ ನಾಸಿರ್ ಹುಸೇನ್, ಶಾಸಕರಾದ ಜಿ.ಕರುಣಾಕರರೆಡ್ಡಿ, ಈ.ತುಕಾರಾಂ, ಬಿ.ನಾಗೇಂದ್ರ, ಕೆ.ಸಿ.ಕೊಂಡಯ್ಯ, ಎಂ.ಎಸ್. ಸೋಮಲಿಂಗಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಹಾಗೂ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್ ಮತ್ತು ಜಿಲ್ಲೆಯ 11 ಗ್ರಾಪಂಗಳ ಪಿಡಿಒಗಳು ಇತರರಿದ್ದರು.