Advertisement

ಬಡವರಿಗೆ 60 ಸಾವಿರ ಕೆಜಿ ತರಕಾರಿ ಹಂಚಿಕೆ

10:39 PM Jun 04, 2021 | Team Udayavani |

ಬಳ್ಳಾರಿ: ಕೋವಿಡ್‌ ಸೋಂಕು, ಲಾಕ್‌ಡೌನ್‌ ನಿಮಿತ್ತ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ನಗರದ ವಿವಿಧ ಬಡಾವಣೆಗಳಲ್ಲಿ ಇರುವ ಬಡ ಜನರಿಗೆ ರಾಜ್ಯಸಭೆ ಸದಸ್ಯ ಡಾ| ಸೈಯದ್‌ ನಾಸೀರ್‌ ಹುಸೇನ್‌ ಅವರು ಗುರುವಾರ ತರಕಾರಿ ಕಿಟ್‌ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್‌ ಸೋಂಕು, ಲಾಕ್‌ಡೌನ್‌ ಪರಿಣಾಮ ಬಡಜನರು, ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಹಾಗಾಗಿ ಎಐಸಿಸಿಯ ಸೋನಿಯಾಗಾಂಧಿ , ರಾಹುಲ್‌ ಗಾಂಧಿ , ರಾಜ್ಯ ಕಾಂಗ್ರೆಸ್‌ ಮುಖಂಡರ ಆದೇಶದ ಮೇರೆಗೆ ಕಳೆದ ಎರಡೂ¾ರು ದಿನಗಳ ಹಿಂದೆ ವಿವಿಧ ಬಡಾವಣೆಗಳಲ್ಲಿರುವ ಬಡ ಜನರಿಗೆ ಪ್ರತಿದಿನ 2 ಸಾವಿರಕ್ಕೂ ಹೆಚ್ಚು ಉಚಿತವಾಗಿ ಆಹಾರದ ಪ್ಯಾಕೇಟ್‌ ವಿತರಿಸಲಾಗುತ್ತಿದೆ. ಇದೀಗ ಪ್ರತಿ ಕುಟುಂಬಕ್ಕೆ 6 ಕೆಜಿ ತರಕಾರಿಯುಳ್ಳ ಕಿಟ್‌ ಪ್ರತಿದಿನ 2 ಸಾವಿರ ಕುಟುಂಬಗಳಿಗೆ ವಿತರಿಸಲಾಗುವುದು.

ಐದು ದಿನಗಳಲ್ಲಿ 60 ಸಾವಿರ ಕೆಜಿ ತರಕಾರಿ ಬಡ ಜನರಿಗೆ ಹಂಚಿಕೆ ಮಾಡಲಾಗುತ್ತಿದೆ. ಅದಕ್ಕಾಗಿ ನಗರದ ಶಾದಿಮಹಲ್‌ನಲ್ಲಿ ಟೊಮೆÂಟೊ, ಹಸಿಮೆಣಸಿನಕಾಯಿ, ಬೀಟ್‌ರೋಟ್‌, ಕ್ಯಾಬೇಜ್‌ ಸೇರಿ ಸುಮಾರು ಒಂದು ವಾರಕ್ಕೆ ಆಗುವಷ್ಟು ತರಕಾರಿ ಪ್ಯಾಕೇಟ್‌ ಮಾಡಿ ಸಿದ್ಧಪಡಿಸಲಾಗುತ್ತಿದೆ ಎಂದರು.

ಬಳ್ಳಾರಿ ನಗರದಲ್ಲಿ ಕೋವಿಡ್‌ ಸೋಂಕು ಹೆಚ್ಚಿದ್ದ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ನಾಳೆಯಿಂದ ಪ್ರತ್ಯೇಕ ಟ್ರಾಕ್ಟರ್‌ ಮೂಲಕ ಸ್ಯಾನಿಟೈಸರ್‌ ಮಾಡಿಸಲಾಗುತ್ತದೆ. ಜತೆಗೆ ಆಕ್ಸಿಜನ್‌ ಸಿಲಿಂಡರ್‌, ಕಾನ್ಸ್‌ಂಟ್ರೇಟರ್ಗಳನ್ನು ಸಹ ಆರಂಭಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಟ್ರೋಲ್‌  ಸಂಖ್ಯೆ ನೀಡಲಾಗುವುದು. ಪ್ರತ್ಯೇಕ ತಾಂತ್ರಿಕ ತಂಡವನ್ನು ನಿಯೋಜಿಸಲಾಗುವುದು. ಅಗತ್ಯವುಳ್ಳವರು ಸಂಪರ್ಕಿಸಿದಲ್ಲಿ ತಾಂತ್ರಿಕ ತಂಡದವರೇ ಕೊಂಡೊಯ್ದು, ಪುನಃ ಅವರೇ ವಾಪಸ್‌ ತರುತ್ತಾರೆ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿ  ಗಳು, ನೂತನ ಪಾಲಿಕೆ ಸದಸ್ಯರು ಸಹಕಾರ ನೀಡುತ್ತಿದ್ದಾರೆ ಎಂದರು.

ಇದೇ ಜೂನ್‌ 7ಕ್ಕೆ ರಾಜ್ಯದಲ್ಲಿ ಲಾಕ್‌ ಡೌನ್‌ ಮುಕ್ತಾಯವಾಗಲಿದೆ ಎಂದು ಸಿಎಂ ಯಡಿಯೂರಪ್ಪನವರು ಟ್ವೀಟ್‌ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ಅದು ಈಗ ಕಡಿಮೆಯಾಗಿದೆ. ಹಾಗಾಗಿ ಸಂಪೂರ್ಣ ಲಾಕ್‌ ಡೌನ್‌ ಮುಂದುವರೆಸುವುದೇ ಅಥವಾ ವಿನಾಯಿತಿ ನೀಡಬೇಕಾ ಎಂಬುದು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ನಿರ್ಣಯ ಕೈಗೊಳ್ಳಲಿದ್ದಾರೆ ಎಂದವರು ವಿವರಿಸಿದರು.

Advertisement

ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ, ರಾಜ್ಯಸಭೆ ಸದಸ್ಯ ಸೈಯದ್‌ ನಾಸೀರ್‌ ಹುಸೇನ್‌ ಅವರು, ಪಾಲಿಕೆಯ ನೂತನ ಸದಸ್ಯರ ಸಹಕಾರದೊಂದಿಗೆ ಬಡ ಜನರನ್ನು ಗುರುತಿಸಿ, ಆಹಾರದ ಪಾಕೇಟ್‌ ಮತ್ತು ತರಕಾರಿಗಳನ್ನು ನೀಡುವ ಮೂಲಕ ಜನರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಅಲ್ಲದೇ, ಲಾಕ್‌ಡೌನ್‌ನಿಂದ ಜನರು ಇಷ್ಟೆಲ್ಲ ಕಷ್ಟಗಳನ್ನು ಎದುರಿಸಿದರೂ ಪರಿಹಾರ ಘೋಷಣೆ ಮಾಡದ ರಾಜ್ಯ ಸರ್ಕಾರ ದಿವಾಳಿಯಾಗಿದೆ.

ಆರೋಗ್ಯಕ್ಕೆ ಸಂಬಂ ಸಿದಂತೆ ವೈದ್ಯಕೀಯ ಪರಿಕರಗಳು, ಔಷಧಗಳನ್ನು ಸಮರ್ಪಕವಾಗಿ ಪೂರೈಸುವಲ್ಲಿ ವಿಫಲವಾಗಿದೆ. ಸರ್ಕಾರದ ಎಲ್ಲ ಸಚಿವರು ತಮ್ಮ ಒಳಜಗಳಗಳನ್ನು, ಬೇರೆ ಕೆಲಸಗಳನ್ನು ಬದಿಗೊತ್ತಿ ಕೆಲಸ ಮಾಡಿದಲ್ಲಿ ಸೋಂಕನ್ನು ನಿಯಂತ್ರಿಸಬಹುದು ಎಂದವರು ಸಲಹೆ ನೀಡಿದರು. ಈ ವೇಳೆ ಪಾಲಿಕೆ ನೂತನ ಸದಸ್ಯ ಆಸೀಫ್‌, ಮುಖಂಡರಾದ ಅಯಾಜ್‌, ಇಲಿಯಾಸ್‌ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next