Advertisement
ವಾಹನದಲ್ಲಿ ಧ್ವನಿವರ್ಧಕದ ಮೂಲಕ ಜನಜಾಗೃತಿ ಮೂಡಿಸುವ ಈ ಅಭಿಯಾನವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅ ಧಿಕಾರಿಗಳ ಕಚೇರಿಯಿಂದ, ಸಂಗಮ್ ವೃತ್ತ, ರಾಘವೇಂದ್ರ ಚಿತ್ರಮಂದಿರ ವೃತ್ತ, ಮೀನಾಕ್ಷಿ ವೃತ್ತ, ಜಿಲ್ಲಾ ಧಿಕಾರಿಗಳ ಕಾರ್ಯಲಯ, ರಾಯಲ್ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಪೋಲೀಸ್ ಠಾಣೆ, ಎಪಿಎಂಸಿ ಯಾರ್ಡ್, ಬಾಪೂಜಿ ನಗರ, ಮಿಲ್ಲರ್ ಪೇಟೆ, ಶ್ರೀ ರಾಂಪುರ ಕಾಲೋನಿ, ಎಮ್.ಜಿ ವೃತ್ತ, ಪಟೇಲ್ ನಗರ, ಎಸ್.ಎನ್.ಪೇಟೆ, ಗಾಂ ನಗರ, ದುರ್ಗಮ್ಮ ಗುಡಿ ವೃತ್ತ, ಎಸ್.ಪಿ.ಸರ್ಕಲ್, ಕೋಟೆ, ಕೌಲ್ ಬಜಾರ್, ಬೆಳಗಲ್ ಕ್ರಾಸ್, ರೇಡಿಯೋ ಪಾರ್ಕ, ನಂದಿ ಸ್ಕೂಲ್ ಹೊಸಪೇಟೆ ರಸ್ತೆ, ಸುಧಾ ಕ್ರಾಸ್, ಓಪಿಡಿ ಇಂದಿರಾನಗರ, ದೇವಿನಗರ, ಮೋತಿ ವೃತ್ತ, ರಾಯಲ್ ವೃತ್ತದ ಮುಖಾಂತರ ಪುನಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅ ಧಿಕಾರಿಗಳ ಕಚೇರಿಗೆ ತಲುಪಿತು. ಬಳಿಕ ಮಾತನಾಡಿದ ಡಿಎಚ್‌ಒ ಡಾ| ಜನಾರ್ಧನ್ ಅವರು ಸಮುದಾಯದಲ್ಲಿ ಅನಾದಿಕಾಲದಿಂದಲೂ ಬಳಕೆಯಲ್ಲಿರುವ ತಂಬಾಕಿನ ವಿವಿಧ ಉತ್ಪನ್ನಗಳನ್ನು ಸಾರ್ವಜನಿಕರು ಆರೋಗ್ಯದ ಹಿನ್ನೆಲೆಯಲ್ಲಿ ಹಂತಹಂತವಾಗಿ ಬಳಕೆಯನ್ನು ನಿಯಂತ್ರಿಸುವ ಕಾರ್ಯ ಕಾನೂನಾತ್ಮಕ ರೀತಿಯಲ್ಲಿ ಹಾಗೂ ಜಾಗೃತಿ ನೀಡುವ ಮೂಲಕ ಕೈಗೊಳ್ಳಲಾಗುತ್ತಿದೆ.
Related Articles
Advertisement
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿ ಕಾರಿಗಳ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ಅಧಿ ಕಾರಿ ಡಾ| ಮರಿಯಂಬಿ, ಜಿಲ್ಲಾ ಸರ್ವೇûಾಣಾ ಧಿಕಾರಿ ಡಾ| ಆರ್.ಅಬ್ದುಲ್ಲಾ, ಜಿಲ್ಲಾ ಕುಷ್ಠರೋಗ ನಿಯಂತ್ರಣಾ ಧಿಕಾರಿ ಡಾ| ರಾಜಶೇಖರ್ ರೆಡ್ಡಿ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ| ಗುರುರಾಜ್ ಬಿ ಚವ್ಹಾಣ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ದುರುಗೇಶ ಮಾಚನೂರು, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಡಾ| ಜಬೀನ್ ತಾಜ್, ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಂಯೋಜಕರು ಗುರುರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಈಶ್ವರ ದಾಸಪ್ಪನವರ್, ತಂಬಾಕು ವ್ಯಸನ ಮುಕ್ತ ಕೇಂದ್ರದ ಮಲ್ಲೇಶಪ್ಪ, ಡಾ| ಗುರುಪ್ರಸಾದ್ ಪುರೋಹಿತ್, ಶರತ್ ಬಾಬು ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಸಿಬ್ಬಂದಿಗಳು ಉಪಸ್ಥಿತರಿದ್ದರು.