ಕೂಡ್ಲಿಗಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊವಿಡ್ ಚಿಕಿತ್ಸಾ ಕೇಂದ್ರಕ್ಕೆ ಶನಿವಾರ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಆಶೋಕ್ ತೋಟದ್, ತಹಶೀಲ್ದಾರ್ ಟಿ. ಜಗದೀಶ್, ತಾಲೂಕು ಪಂಚಾಯ್ತಿ ಕಾರ್ಯನಿಚರ್ವರವಹಣಾ ಕಾರಿ ಜಿ.ಎಂ. ಬಸಣ್ಣ ಬೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಶೌಚಾಲಯದ ನೀರು ಹರಿದು ಕೋವಿಡ್ ಕೇಂದ್ರದ ಹಾದಿಯಲ್ಲಿ ಹರಿಯುತ್ತಿರುವ ಬಗ್ಗೆ ಸಾರ್ವಜನಿಕರು ಆಶೋಕ್ ತೋಟ ಅವರ ಬಳಿ ದೂರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದನ್ನು ದುರಸ್ತಿಪಡಿಸಲು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ತಮ್ಮ ಅನುದಾನದಲ್ಲಿ ಈಗಾಗಲೇ 4 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಕಾಮಗಾರಿ ಮಾಡಲು ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿದೆ. ನಾಳೆಯೇ ಕೆಲಸ ಆರಂಭಿಸಲು ಅವರಿಗೆ ತಿಳಿಸಲಾಗಿದೆ ಎಂದರು.
ವಾರಕ್ಕೊಮ್ಮೆ ಸಕ್ಕಿಂಗ್ ಮಿಷನ್ ತಂದು ಶೌಚಾಲಯದ ಗುಂಡಿಯನ್ನು ಸ್ವತ್ಛಗೊಳಿಸುವಂತೆ ಪಟ್ಟಣ ಪಂಚಾಯ್ತಿ ಮುಖ್ಯಾ ಧಿಖಾರಿ ಸಿ.ಪಕೃದ್ಧೀನ್ ಸಾಬ್ ಅವರಿಗೆ ತಹಶೀಲ್ದಾರ್ ಟಿ. ಜಗದೀಶ್ ಸೂಚನೆ ನೀಡಿದರು. ಪ್ರತಿದಿನ ಆಸ್ಪತ್ರೆ ಆವರಣವನ್ನು ಸ್ವತ್ಛವಾಗಿಟ್ಟುಕೊಳ್ಳಿ. ಶಾಸಕರ ಸೂಚನೆಯಂತೆ ಶೌಚಾಲಯದ ನೀರು ಹೋಗಲು ಒಳ ಚರಂಡಿಯನ್ನು ದುರಸ್ತಿ ಮಾಡಲಾಗುವುದು.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಶೌಚಾಲಯದ ನೀರು ಹೊರ ಬಾರದಂತೆ ನೋಡಿಕೊಳ್ಳಬೇಕು ಎಂದು ಆಸ್ಪತ್ರೆ ಸಿಬ್ಬಂದಿಗೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಧಿಕಾರಿ ಜಿ.ಎಂ. ಬಸಣ್ಣ ಹೇಳಿದರು.
ನಂತರ ಆಕ್ಸಿಜನ್ ಪೂರೈಕೆ, ಕೊವಿಡ್ ಚಿಕಿತ್ಸೆಗೆ ಬೇಕಾದ ಎಲ್ಲ ಯಂತ್ರಗಳು ಹಾಗೂ ಪರಿಕರಗಳು ಸರಿಯಾಗಿ ಕೆಲಸ ಮಾಡುತ್ತಿರುವ ಬಗ್ಗೆ ಡಾ| ಆಶ್ವರ್ಯ ಅವರಿಂದ ಮಾಹಿತಿ ಪಡೆದ ಆಶೋಕ್ ತೋಟದ್ ಅವರು ಯಾವುದೇ ಯಂತ್ರಗಳು ದುರಸ್ತಿ ಇದ್ದರೆ ತಕ್ಷಣ ಮಾಡಿಸುವಂತೆ ತಿಳಿಸಿದರು.