ಬಳ್ಳಾರಿ: ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿ ಗಳು ಇಲ್ಲದಿದ್ದರೆ ನಗರದ ಸಮಸ್ಯೆಗಳು ಸಂಬಂಧಪಟ್ಟ ಅಧಿ ಕಾರಿಗಳಿಂದ ಹೇಗೆ ನಿರ್ಲಕ್ಷ ಕ್ಕೊಳಗಾಗುತ್ತವೆ ಎಂಬುದಕ್ಕೆ ನಗರದ ಎಸ್‌ಪಿ ವೃತ್ತ ಬಳಿಯ ಶಾಸ್ತ್ರಿನಗರ ಎರಡನೇ ಕ್ರಾಸ್‌ನಲ್ಲಿ ದುರ್ನಾಥ ಬೀರಿ ಜನರಿಗೆ ಕಿರಿಕಿರಿಯುಂಟು ಮಾಡುತ್ತಿರುವ ತೆರೆದ ಚರಂಡಿಯೇ ತಾಜಾ ಉದಾಹರಣೆಯಾಗಿದೆ. ಹಲವು ತಿಂಗಳುಗಳಿಂದ ಬ್ಲಾಕ್ ಆಗಿ ಪಾಲಿಕೆ ಅಧಿ ಕಾರಿಗಳ ಗಮನ ಸೆಳೆದರೂ ನಿರ್ಲಕ್ಷ Â ವಹಿಸುತ್ತಿದ್ದಾರೆ.
ಕಳೆದೆರಡು ವರ್ಷಗಳಿಂದ ಜನಪ್ರತಿನಿಧಿ ಗಳಿಲ್ಲದೇ ಆಡಳಿತಾಧಿಕಾರಿಗಳಿಂದ ನಡೆಯುತ್ತಿದ್ದ ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಗೆ ಕಳೆದ ಏಪ್ರಿಲ್ 27 ರಂದು ಚುನಾವಣೆ ನಡೆದು ಏ. 30ರಂದು ಫಲಿತಾಂಶವೂ ಹೊರಬಿದ್ದು, ಜನಪ್ರತಿನಿ ಧಿಗಳು ಚುನಾಯಿತರಾಗಿದ್ದಾರೆ. ಲಾಕ್‌ಡೌನ್ ಪರಿಣಾಮ ಮೇಯರ್, ಉಪಮೇಯರ್ ಚುನಾವಣೆ ಮುಂದೂಡಲಾಗಿದೆ. ಆದರೆ, ಜನಪ್ರತಿನಿಧಿ ಗಳು ಸಕ್ರಿಯಗೊಳ್ಳದ ಹಿನ್ನೆಲೆಯಲ್ಲಿ ನಗರದಲ್ಲಿ ತೆರೆದ ಚರಂಡಿ ಸೇರಿ ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದು, ಸ್ಥಳೀಯ ನಿವಾಸಿಗಳು ಸಂಬಂಧಪಟ್ಟ ಅ ಧಿಕಾರಿಗಳ ಗಮನ ಸೆಳೆದರೂ ನಿರ್ಲಕ್ಷ ವಹಿಸಿ ಜಾಣಕುರುಡು ಮೆರೆಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಕ್ರೋ ಕಂಟೈನ್ಮೆಂಟ್ ಝೋನ್: ಶಾಸ್ತ್ರಿನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಮೈಕ್ರೋ ಕಂಟೈನ್ಮೆಂಟ್ ಝೋನ್ ಆಗಿದೆ. ಸುಮಾರು 15ಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ, ಬಹುತೇಕ ಮನೆಗಳಿಂದಲೂ ಶೌಚಾಲಯದ ಸಂಪರ್ಕವನ್ನು ತೆರೆದ ಚರಂಡಿಗೆ ಕಲ್ಪಿಸಿದ್ದು, ಕೋವಿಡ್ ಸೋಂಕಿತರು ವಾಂತಿಬೇಧಿ ಸೇರಿ ನಿತ್ಯ ಕರ್ಮಗಳೆಲ್ಲವೂ ತೆರೆದ ಚರಂಡಿಗೆ ಬಿಡುತ್ತಿರುವುದು ಶಾಸ್ತ್ರಿನಗರದ ನಿವಾಸಿಗಳಲ್ಲಿನ ಆತಂಕ ಮತ್ತಷ್ಟು ಹೆಚ್ಚಿಸಿದೆ.
ಚರಂಡಿಯನ್ನು ಸ್ವತ್ಛಗೊಳಿಸುವಂತೆ ಈಗಾಗಲೇ ಸಂಬಂಧಪಟ್ಟ ಪಾಲಿಕೆ ಆಯುಕ್ತೆ ಪ್ರೀತಿ ಗೆಹೊಟ್ ಅವರಿಗೆ ಮತ್ತು ಇಂಜಿನಿಯರ್‌ಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆಯುಕ್ತರು ಫೋನ್ ಮಾಡಿ ಕೇಳುತ್ತಿದ್ದಂತೆ ಆಯ್ತು ಮೇಡಮ್ ಮಾಡುತ್ತೇವೆ ಎಂದು ವಿನಮ್ರತೆ ವ್ಯಕ್ತಪಡಿಸುವ ಅಧಿ ಕಾರಿಗಳು ನಂತರ ತಾವು ಆಡಿದ್ದೇ ಆಟವೆಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಶಾಸ್ತ್ರಿನಗರದ ನಿವಾಸಿಗಳಾದ ಪ್ರಕಾಶ್, ರಾಮರೆಡ್ಡಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಶಾಸ್ತ್ರಿನಗರ 2ನೇ ಕ್ರಾಸ್ ಬಳಿ ತೆರೆದ ಚರಂಡಿ ಪಕ್ಕದಲ್ಲೇ ಹೊಟೇಲ್, ಬೇಕರಿ, ಖಾನಾವಳಿಗಳು, ತರಕಾರಿ ಅಂಗಡಿಗಳು ಇವೆ. ಸಂಬಂಧಪಟ್ಟ ಅ ಧಿಕಾರಿಗಳು ಜನರ ಸಮಸ್ಯೆಗಳನ್ನೂ ಆಲಿಸದೆ ನಿರ್ಲಕ್ಷವಹಿಸುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ಬೇಸರ ಮೂಡಿಸಿದೆ. ಈ ಕುರಿತು ಪಾಲಿಕೆ ಆಯುಕ್ತೆ ಪ್ರೀತಿ ಗೆಹೊಟ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸದೆ ಪರಿಶೀಲಿಸುವುದಾಗಿ ಸಂದೇಶ ಕಳುಹಿಸಿದ್ದಾರೆ.