ಕಂಪ್ಲಿ: ಜಗತ್ತಿಗೆ ಮಾದರಿಯಾದ ಮಹಾತ್ಮರ ಹಾಗೂ ನಾಯಕರ ತ್ಯಾಗ ಬಲಿದಾನಗಳ ಮೂಲಕ ರಚಿತವಾಗಿರುವ ಸಂವಿಧಾನವನ್ನು ಸ್ವೇಚ್ಛಾಚಾರಕ್ಕೆ ಬಳಸದೇ ಅಭಿವೃದ್ಧಿಗಾಗಿ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಹಶೀಲ್ದಾರ್ ಗೌಸಿಯಾಬೇಕು ತಿಳಿಸಿದರು.
ಅವರು ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಪೊಲೀಸ್, ಗೃಹರಕ್ಷದಳ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿದ್ಯಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಶಾಂತಲಾ ವಿ. ವಿದ್ಯಾಧರ್ ಮತ್ತು ಕಂಪ್ಲಿ ತಾಪಂ ಅಧ್ಯಕ್ಷೆ ಕೆ. ಉಮಾದೇವಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿಧೀಜಿ ಹಾಗೂ ಡಾ| ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸನ್ಮಾನ: ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕಪಡೆದ ವಿದ್ಯಾರ್ಥಿಗಳಾದ ವಿದ್ಯಾಸಾಗರ ಶಾಲೆಯ ಧನುಶ್ರೀ ಎಸ್.ಎಂ, ಸಾಹಿತಿ ವಿದ್ಯಾಲಯದ ಎಚ್. ಸೋಮಶೇಖರ್, ಶಾರದಾ ನಿಕೇತನ ಶಾಲೆಯ ಶರತ್ ಮತ್ತು ಚಿದಾನಂದರಿಗೆ ಕಸಾಪ ಮತ್ತು ತಾಲೂಕು ಆಡಳಿತದಿಂದ ಕನ್ನಡ ಕುವರಿ ಹಾಗೂ ಕನ್ನಡ ಕುವರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಾಲೂಕು ಆಡಳಿತದಿಂದ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪಡೆದ ಎಸಿ ದಾನಪ್ಪ, ವೈಜ್ಞಾನಿಕ ಕೃಷಿಕ ಕೆ. ಶಂಕರ್, ಸಾಹಿತಿ ಜಿ. ಪ್ರಕಾಶ್, ಕಲಾವಿದರಾದ ಹಾಲುಮಾರೋ ಈರಪ್ಪ, ಕಾರೇಕಲ್ ವೆಂಕೋಬಣ್ಣ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿಪಿಐ ಸುರೇಶ್ ಎಚ್. ತಳವಾರ್, ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ತಾಪಂ ಸದಸ್ಯರಾದ ಎಚ್. ಈರಣ್ಣ, ಬಿ.ಎಸ್. ಶಿವಮೂರ್ತಿ, ಪುರಸಭೆ ಉಪಾಧ್ಯಕ್ಷೆ ಕೆ. ನಿರ್ಮಲ ವಸಂತ, ಸದಸ್ಯರಾದ ಬಟ್ಟ ಪ್ರಸಾದ್ ಎಂ. ಉಸ್ಮಾನ್, ಎಸ್.ಎಂ. ನಾಗರಾಜ ವೀರಾಂಜಿನೇಯಲು, ಉಪ ತಹಶೀಲ್ದಾರ್ ಬಿ. ರವೀಂದ್ರಕುಮಾರ್, ತಾಪಂ ಇಒ ಬಿ. ಬಾಲಕೃಷ್ಣ, ಮುಖ್ಯಾಧಿಕಾರಿ ರಮೇಶ್ ಬಡಿಗೇರ್, ಉಪನೋಂದಣಾಧಿ ಕಾರಿ ಚಂದ್ರಕಾಂತ್ ಇದ್ದರು.
ಓದಿ : ಕಮ್ಯುನಿಸ್ಟ್ ಆಡಳಿತ ರಾಜ್ಯಗಳಲ್ಲೇ ಕಾರ್ಮಿಕರ ಶೋಷಣೆ