ಹಗರಿಬೊಮ್ಮನಹಳ್ಳಿ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯ ದಾನಿ ಬದಾಮಿ ಕರಿಬಸವರಾಜ, ಡಾ| ಗಜಾಪುರ ಜಗದೀಶ ನೂರು ಆಕ್ಸಿಜನ್ ಸಿಲಿಂಡರ್ ಹಾಗೂ 8 ಪೊಮೀಟರ್‌ಗಳನ್ನು ದೇಣಿಗೆ ನೀಡಿ ಕೊರೊನಾ ವೈರಸ್ ಎದುರಿಸಲು ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆಗೆ ಶಕ್ತಿ ನೀಡಿದ್ದಾರೆ.
ತಾಲೂಕಿನಲ್ಲಿ ಆಕ್ಸಿಜನ್ ಸಮಸ್ಯೆಯಿಂದಾಗಿ ಹೆಚ್ಚು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸಿಲಿಂಡರ್ ಕೊರತೆ ನೀಗಿಸಲು ವೀರಶೈವ ವಿದ್ಯಾವರ್ಧಕ ಸಂಘದ ನಿರ್ದೇಶಕ ಬದಾಮಿ ಕರಿಬಸವರಾಜ ಬಾದಾಮಿ ಮತ್ತು ಡಾ| ಗಜಾಪುರ ಜಗದೀಶ ಸೇರಿ 100 ಆಕ್ಸಿಜನ್ ಸಿಲಿಂಡರ್‌ಗಳನ್ನು ದೇಣಿಗೆ ಮಾನವೀಯತೆ ಮೆರೆದಿದ್ದಾರೆ.
ಆಕ್ಸಿಜನ್ ಸಿಲಿಂಡರ್‌ಗಳಿಗೆ ಪೊಮೀಟರ್‌ಗಳು ಸಿಗದೇ ಸಮಸ್ಯೆಯಾಗುತ್ತಿರುವುದನ್ನು ವೈದ್ಯರ ಬಳಿ ಮಾಹಿತಿ ಪಡೆದು ಪಟ್ಟಣದ ಗ್ರೀನ್ ಎಚ್‌ಬಿಎಚ್ ಸಂಘಟನೆ ಪದಾ ಧಿಕಾರಿಗಳು 8 ಪೊಮೀಟರ್ ಗಳನ್ನು ಮುಂಬೈಯಿಂದ ತರಿಸಿ ಆಸ್ಪತ್ರೆಗೆ ದೇಣಿಗೆ ನೀಡಿದ್ದಾರೆ.
ಪಟ್ಟಣದ ದಾನಿಗಳಿಂದ ಆರೋಗ್ಯ ಇಲಾಖೆಗೆ ನೆರವು ಹರಿದು ಬಂದಿದ್ದರಿಂದ ಸೇವೆಗೆ ಬಲಬದಂತಾಗಿದೆ. ಈ ಕುರಿತು ತಹಶೀಲ್ದಾರ್ ಕೆ. ಶರಣಮ್ಮ ಪ್ರತಿಕ್ರಿಯಿಸಿ, ಪಟ್ಟಣದ ದಾನಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆಗೆ ನೆರವು ನೀಡಿದ್ದು ಮೆಚ್ಚುವಂತಹದ್ದು. ಸ್ವಯಂಪ್ರೇರಿತರಾಗಿ ಆರೋಗ್ಯ ಇಲಾಖೆಗೆ ಅಗತ್ಯ ಪರಿಕರಗಳನ್ನು ದಾನಿಗಳು, ಸಾಮಾಜಿಕ ಸಂಘಟನೆಗಳು ನೆರವು ನೀಡಿದ್ದರಿಂದ ಕೊರೊನಾ ವೈರಸ್ ರೋಗಿಗಳಿಗೆ ಶಕ್ತಿ ಬಂದಂತಾಗಿದೆ ಎಂದು ತಿಳಿಸಿದರು.
ದಾನಿಗಳಾದ ವೀ.ವಿ.ಸಂಘದ ನಿರ್ದೇಶಕ ಬದಾಮಿ ಕರಿಬಸವರಾಜ, ಶಶಿ ಗಜಾಪುರ, ಗ್ರೀನ್ ಎಚ್‌ಬಿಎಚ್ ಸಂಘದ ಆನಂದಬಾಬು, ಅಶೋಕ ಭಾವಿಕಟ್ಟಿ, ಕುಮಾರ್‌ಪಾಲ್, ವಿಕಾಸ್ ಬಾಫನ್, ವಿ.ಎಚ್. ಮನೋಹರ್, ಬಾವಿ ಶಶಿಧರ, ಟಿಎಚ್‌ಓ ಡಾ| ಶಿವರಾಜ್, ಸಿಎಂಓ ಡಾ| ಶಂಕರನಾಯ್ಕ ಡಾ. ತಿಪ್ಪೇಸ್ವಾಮಿ ಇತರರಿದ್ದರು.