Advertisement
ಸಿರುಗುಪ್ಪ: ಕೊರೊನಾ ಕರ್ಫ್ಯೂ ಕಾರಣದಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ ವಲಸೆ ಹೋಗಿದ್ದ 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಹಳ್ಳಿಗಳಿಗೆ ಮರಳಿರುವ ಪರಿಣಾಮವಾಗಿ ಈಗ ಪ್ರತಿ ಗ್ರಾಮಗಳಲ್ಲಿಯೂ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಹಳ್ಳಿ ಜನರಲ್ಲಿ ಆತಂಕ ಮೂಡಿಸಿದೆ.
Related Articles
Advertisement
ನಗರಗಳಂತೆಯೇ ಹಳ್ಳಿಗಳಲ್ಲಿಯೂ ಸ್ಥಳಿಯ ಅಧಿ ಕಾರಿಗಳು ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅನಗತ್ಯ ಓಡಾಡದಂತೆ ಒಂದೆಡೆ ನೂರಾರು ಜನರು ಸೇರದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಹಳ್ಳಿಗಳ ಜನರ ಸಹಕಾರ ಅ ಧಿಕಾರಿಗಳಿಗೆ ಸಿಗುತ್ತಿಲ್ಲ. ನಿರ್ಲಕ್ಷ ದಿಂದ ಪ್ರತಿ ಹಳ್ಳಿಗಳಲ್ಲಿಯೂ ಕೊರೊನಾ ಒಕ್ಕರಿಸಿ ಗ್ರಾಮಾಂತರ ಪ್ರದೇಶದ ಜನರ ನಿದ್ದೆಗೆಡಿಸಿದೆ. ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ಕೊರೊನಾ ಸೋಂಕು ಹರಡಿದ್ದು, ಪ್ರತಿ ಹಳ್ಳಿಯಲ್ಲಿಯೂ 5-10 ಜನ ಅನಾರೋಗ್ಯದಿಂದ ಬಳಲಿ ಹಾಸಿಗೆ ಹಿಡಿಯುತ್ತಿದ್ದಾರೆ.
ಆದರೂ ಜನರು ಕೊರೊನಾ ತಪಾಸಣೆಗೆ ಮುಂದಾಗುತ್ತಿಲ್ಲ. ಕೆಲವರು ಮೆಡಿಕಲ್ ಶಾಪ್‌ಗ್ಳಿಂದ ಜ್ವರ, ಶೀತಕ್ಕೆ ತಾವೆ ಕೇಳಿ ತಂದ ಔಷ ಧ ಸೇವಿಸುತ್ತಿದ್ದಾರೆ. ಮತ್ತೆ ಕೆಲವರು ಸ್ಥಳಿಯವಾಗಿ ಸಿಗುವ ವೈದ್ಯರಿಂದ ಚಿಕಿತ್ಸೆ ಪಡೆದು ಮನೆಯಲ್ಲಿದ್ದಾರೆ. ಇದರಿಂದ ಕೆಲವು ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರತೆಯತ್ತ ಸಾಗುತ್ತಿದ್ದು, ಕೊನೆ ಘಳಿಗೆಯಲ್ಲಿ ವೆಂಟಿಲೇಟರ್ ಆಕ್ಸಿಜನ್ ಬೆಡ್ ಸಿಗದೆ ಪ್ರಾಣ ಕಳೆದುಕೊಳ್ಳುವ ಪ್ರಸಂಗಗಳು ಹೆಚ್ಚಾಗುತ್ತಿವೆ.
ಒಟ್ಟಾರೆ ಕೊರೊನಾ ಸೋಂಕು ಹಳ್ಳಿಗಳಲ್ಲಿ ಹರಡುತ್ತಲೇ ಇದ್ದು, ಸೋಂಕಿನ ಸರಪಳಿಯನ್ನು ಹರಿಯಲು ಸ್ಥಳಿಯ ಆಡಳಿತಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇದರೊಟ್ಟಿಗೆ ಎಲ್ಲರಿಗೂ ಕಡ್ಡಾಯ ತಪಾಸಣೆ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ, ಕೋವಿಡ್ ಆರೈಕೆ ಕೇಂದ್ರಗಳ ಸ್ಥಾಪನೆಗೂ ಮುಂದಾಗಬೇಕಾಗಿದೆ. ತಾಲೂಕಿನಲ್ಲಿ ಆರೋಗ್ಯ ಮತ್ತು ಕಂದಾಯ, ಗ್ರಾಪಂ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪಡೆಯು ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ಇತರೆಕಡೆ ದುಡಿಯಲು ಹೋಗಿದ್ದ ಕಾರ್ಮಿಕರು ಹಳ್ಳಿಗಳಿಗೆ ಮರಳಿ ಬಂದಿರುವುದರಿಂದ ಕೊರೊನಾ ವೈರಸ್ ಹೆಚ್ಚಾಗಲು ಕಾರಣವಾಗಿದೆ. ಆದ್ದರಿಂದ ಹಳ್ಳಿಗಳಲ್ಲಿ ಕೊರೊನಾ ವೈರಸ್ ಸೋಂಕು ತಡೆಯಲು ಅಂಗನವಾಡಿ, ಆಶಾ ಕಾರ್ಯಕರ್ತೆರು ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.ಶಿವಪ್ಪ,ಕರೂರು ಗ್ರಾಪಂ ಪಿಡಿಒ