Advertisement
ಸಿರುಗುಪ್ಪ: ತಾಲೂಕಿನಲ್ಲಿ ಕೊರೊನಾ ಸೋಂಕಿತ ಶವಗಳಿಗೆ ಮತ್ತು ಅನಾಥ ಶವಗಳಿಗೆ ಗೌರವದ ಅಂತ್ಯಕ್ರಿಯೆ ಮಾಡುವ ಕಾರ್ಯವನ್ನು ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕಾರ್ಯಕರ್ತರು ನಡೆಸುತ್ತಿದ್ದಾರೆ.
Related Articles
Advertisement
ಈ ತಂಡದ ಸದಸ್ಯರು ಮಾಡುತ್ತಿರುವ ಕೆಲಸವನ್ನು ನೋಡಿದರೆ ಭಯವು ಆವರಿಸುತ್ತದೆ. ಮನಸ್ಸು ಭಾರವಾಗುತ್ತದೆ. ಕೊರೊನಾದಿಂದ ಸಾವನ್ನಪ್ಪಿದರೆ ಮನೆಯವರೇ ಹತ್ತಿರ ಬಾರದ ಪರಿಸ್ಥಿತಿಯನ್ನು ಅಪರಿಚಿತ ಶವಕ್ಕೆ ಹೆಗಲು ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಪಿಪಿಇ ಕಿಟ್ ಧರಿಸಿ ಸೊಂಕಿತರ ಅಂತ್ಯಕ್ರಿಯೆ ಮಾಡುತ್ತಿದ್ದಾರೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊರೊನಾ ಸೊಂಕಿತರ ಅಂತ್ಯಸಂಸ್ಕಾರವನ್ನು ಈ ತಂಡದ ಸದಸ್ಯರು ಆರೋಗ್ಯ ಇಲಾಖೆಯ ಸಮ್ಮುಖದಲ್ಲಿ ವೈಜ್ಞಾನಿಕವಾಗಿ ಮಾಡುವ ಮೂಲಕ ಮಾನವೀಯತೆ ಇನ್ನೂ ಇದೆ ಎನ್ನುವುದನ್ನು ತೋರಿಸಿದ್ದಾರೆ.
ಪಿಎಫ್‌ಐ ಸಂಘಟನೆಯ 12 ಸದಸ್ಯರು ನುರಿತ ವೈದ್ಯರಿಂದ ತರಬೇತಿ ಪಡೆದು ಮೃತಪಟ್ಟ ಕೊರೊನಾಸೋಂಕಿತರ ಅಂತ್ಯಸಂಸ್ಕಾರ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಿ ಮಾಡಬೇಕೆನ್ನುವುದು ಅರಿತು, ಆಯಾ ಧರ್ಮದ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ.-ಖಾಜ ಕಿಜರ್, ಸಂಘಟನೆ ಸದಸ್ಯ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಮಾಡುತ್ತಿರುವ ಕಾರ್ಯ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಕೊರೊನಾ ಸೋಂಕಿತರನ್ನು ಮುಟ್ಟಿ ಅಂತ್ಯಸಂಸ್ಕಾರ ಮಾಡುವ ಕಾರ್ಯವನ್ನು ಈ ಸಂಘಟನೆಯ ಕಾರ್ಯಕರ್ತರು ಆಯಾ ಧರ್ಮಕ್ಕೆ ಅನುಗುಣವಾಗಿ ಮಾಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ.
-ಡಾ|ದೇವರಾಜ್, 100 ಹಾಸಿಗೆಗಳ ಸರ್ಕಾರಿ
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ