Advertisement
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಏರುತ್ತಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. ಕಳೆದ ಒಂದು ವಾರದಿಂದ ಸಾವಿಲ್ಲದ ದಿನಗಳೇ ಇಲ್ಲದಂತಾಗಿದೆ. ಗ್ರಾಮದ ಹಿರಿಯ ಮುಖಂಡರೊಬ್ಬರು ಮೃತಪಟ್ಟ ಮೂರನೇ ದಿನವೇ ಅವರ ಮಗನೂ ಕೂಡ ಮೃಪಟ್ಟಿರುವುದು ಕುಟುಂಬದವರ ಜೊತೆ ಇಡೀ ಗ್ರಾಮಸ್ಥರ ಮನಸ್ಸನ್ನು ಘಾಸಿಗೊಳಿಸಿದೆ.
Related Articles
Advertisement
ಸರಕಾರ ಪ್ರತಿದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ತರಕಾರಿ ಕಿರಾಣಿಗೆ ಅವಕಾಶ ನೀಡಿರುವುದನ್ನು ಇನ್ನಷ್ಟು ಬಿಗಿಗೊಳಿಸಲು ವಾರದಲ್ಲಿ ಎರಡು ದಿನಮಾತ್ರ, ಸರಕಾರ ನಿರ್ಧಾರ ಮಾಡಿರುವ ಸಮಯದಲ್ಲಿ ಮಾತ್ರ ಕಿರಾಣಿ ಅಂಗಡಿ, ಇತರೆ ಅಂಗಡಿಗಳು ತೆರೆಯಬೇಕು ಎಂದು ನಿರ್ಧರಿಸಿ ಜಾರಿಗೊಳಿಸಲು ಪ್ರಯತ್ನ ನಡೆಸಿದ್ದಾರೆ.
ಇದಕ್ಕೆ ಸ್ಥಳೀಯ ಗ್ರಾಪಂ ಕೂಡ ಪೂರಕವಾಗಿದ್ದು, ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಯುವ ಪ್ರಮುಖರಾದ ಬಿ.ದೇವಿಪ್ರಸಾದ, ಸುಣಗಾರ ರಾಮು, ವೈ.ಕೆ. ಶ್ರೀನಿವಾಸ, ಹರೀಶ್ ಸೊಬಟಿ, ರವಿಕುಮಾರ ಸಕ್ರಹಳ್ಳಿ, ಬಾಳಿಕಾಯಿ ವೀರೇಶ್, ಯಮನೂರ, ಬಿ.ಶಕ್ತಿಪ್ರಸಾದ, ಸುಣಗಾರ ಮಂಜುನಾಥ, ನಂದೀಶ್, ಕುಮಾರ ಸುಣಗಾರ, ಗೌರಜ್ಜನವರ ಕೊಟ್ರೇಶ, ಆಕಾಶ್ ಸೇರಿದಂತೆ ಸಮಾನ ಮನಸ್ಕರು ಗ್ರೂಪ್‌ನಲ್ಲಿ ಚರ್ಚೆ ನಡೆಸಿ ಒಂದು ಹಂತದ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಯುವಕರು ಸೋಷಿಯಲ್ ಮೀಡಿಯಾಗಳ ಮೂಲಕ ಕೊರೊನಾ ವಿರುದ್ದ ಜನಜಾಗೃತಿ ಜೊತೆಗೆ ಸ್ವಯಂ ಲಾಕ್‌ಡೌನ್‌ಗೆ ನಿರ್ಧಾರ ಮಾಡಿರುವುದನ್ನು ಗ್ರಾಮದ ಹಿರಿಯರು ಪ್ರಶಂಸಿಸಿದ್ದಾರೆ.
ಗ್ರಾಪಂ ಕಾಳಜಿ: ಈಗಾಗಲೇ ಗ್ರಾಪಂನವರು ಗ್ರಾಮದ ಚರಂಡಿಗಳನ್ನು ಸ್ವತ್ಛಗೊಳಿಸುವ ಮೂಲಕ ಕಾಳಜಿ ಮೆರೆದಿದ್ದಾರೆ. ವೈರಸ್ ತಡೆಗಟ್ಟಲು ಗ್ರಾಮದ ಎಲ್ಲ ವಾರ್ಡ್‌ಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿದ್ದಾರೆ.
ಗ್ರಾಪಂನ ಸದಸ್ಯರುಗಳು ಯುವಕರಿರುವುದರಿಂದ ಸ್ವತ್ಛತೆ, ಮೂಲಭೂತ ಸೌಕರ್ಯಗಳು, ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಜನರಿಗೆ ಸುಲಭವಾಗಿ ಸೂಕ್ತ ಸಮಯದಲ್ಲಿ ಒದಗುತ್ತಿವೆ.