ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಲೆಕ್ಷನ್‌ನಿಂದ ಎಲೆಕ್ಷನ್‌ವರೆಗೂ ಕಾಂಗ್ರೆಸ್ ಪಕ್ಷದ ಹಿರಿಯ, ಕಿರಿಯ ಮುಖಂಡರು, ಕಾರ್ಯಕರ್ತರು ವ್ಯವಸ್ಥಿತವಾದ ಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಳಿಸಲು ಕಾರಣವಾಯಿತು ಎಂದು ರಾಜ್ಯಸಭೆ ಸದಸ್ಯ ಡಾ| ಸೈಯದ್ ನಾಸೀರ್ ಹುಸೇನ್ ಹೇಳಿದರು. ನಗರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಚುನಾವಣೆಗೂ ಮುನ್ನ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ಬಳಿಕ ಪಕ್ಷದ ಹಿರಿಯ, ಕಿರಿಯ ನಾಯಕರು, ಕಾರ್ಯಕರ್ತರು ಎಲ್ಲರೂ ಸಲೆಕ್ಷನ್‌ನಿಂದ ಎಲೆಕ್ಷನ್‌ವರೆಗೂ ಅತ್ಯಂತ ವ್ಯವಸ್ಥಿತವಾಗಿ ಪ್ರತಿ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಲಾಯಿತು. ಚುನಾವಣೆ ನಡೆಯದೇ ಕಳೆದ ಎರಡುವರೆ ವರ್ಷಗಳ ಕಾಲ ಪಾಲಿಕೆ ಆಡಳಿತದಲ್ಲಿ ಬಿಜೆಪಿಯವರು ನಡೆಸಿದ ಹಸ್ತಕ್ಷೇಪ, ರಾಷ್ಟ್ರೀಯ, ರಾಜ್ಯ ಸಮಸ್ಯೆಗಳು, ಸಿಎಎ, ಎನ್‌ಆರ್‌ಸಿ ಈ ಎಲ್ಲ ವಿಷಯಗಳ ಕುರಿತು ಪ್ರಚಾರದಲ್ಲಿ ಜನರಲ್ಲಿ ಮನವರಿಕೆ ಮಾಡಿಕೊಡಲಾಯಿತು. ಈ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆಯಲ್ಲಿ 21 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದೆ. ಅಲ್ಲದೇ, ಐದು ವಾರ್ಡ್‌ಗಳಲ್ಲಿ ಗೆದ್ದಿರುವ ಪಕ್ಷೇತರ ಅಭ್ಯರ್ಥಿಗಳು ಸಹ ಕಾಂಗ್ರೆಸ್‌ನವರಾಗಿದ್ದು, ಈಗಾಗಲೇ ಅವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.
ಪರಾಜಿತ ಅಭ್ಯರ್ಥಿಗಳಿಂದ ಗಲಾಟೆ: ಪಾಲಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಸೋತಿರುವ ಹಿನ್ನೆಲೆಯಲ್ಲಿ ಹಲವು ವಾರ್ಡ್‌ಗಳಲ್ಲಿ ಗಲಾಟೆ ನಡೆಸಿದ್ದಾರೆ. ನಗರದ 8,20,29,39 ಸೇರಿ ಹಲವು ವಾರ್ಡ್‌ಗಳಲ್ಲಿ ಪರಾಜಿತ ಅಭ್ಯರ್ಥಿಗಳ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿಗೆ ತೆರಳಿ ಬೆದರಿಕೆಯೊಡ್ಡುವುದು, ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದು ಮನೆಗಳ ಮುಂದೆ ತಿರುಗಾಡುವುದನ್ನು ಮಾಡುತ್ತಿದ್ದಾರೆ. ಈ ಕುರಿತು ಎಸ್‌ಪಿ ಅವರ ಗಮನಕ್ಕೆ ತರಲಾಗಿದೆ ಎಂದವರು ತಿಳಿಸಿದರು. ಶಾಸಕ ಬಿ.ನಾಗೇಂದ್ರ ಮಾತನಾಡಿ, ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ರಾಜ್ಯಕ್ಕೆ ದಿಕ್ಸೂಚಿಯಾಗಿದೆ. ಟಿಕೇಟ್ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಕಾಪಾಡುವ ಸಲುವಾಗಿ ಕೆಲವೊಬ್ಬರಿಗೆ ಟಿಕೇಟ್ ದೊರೆಯದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದಾರೆ.
ಚುನಾವಣೆಯಲ್ಲಿ ಜಯಗಳಿಸಿದ ಎಲ್ಲರಿಗೂ ಸಾಮಾಜಿಕ ನ್ಯಾಯ ಮಾನದಂಡವಾಗಿದೆ. ಪಕ್ಷದಿಂದ ಸ್ಪ ರ್ಧಿಸಿದ್ದ 39 ಅಭ್ಯರ್ಥಿಗಳು ಸಹ ಗೆಲ್ಲುವಂತಹವರೇ. ಅವರವರ ತಂತ್ರಗಾರಿಕೆಯಿಂದ ಕೆಲವರು ಸೋತಿರಬಹುದು ಎಂದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಲ್‌ಪಿ ನಾಯಕ ಸಿದ್ದರಾಮಯ್ಯನವರ ಎಲ್ಲರನ್ನೂ ಒಗ್ಗೂಡಿ ಚುನಾವಣೆ ಎದುರಿಸುವಂತೆ ನೀಡಿದ ಸೂಚನೆ ಮೇರೆಗೆ ಎಲ್ಲರೂ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದೇವೆ. ಯಶಸ್ವಿ ಕಂಡಿದ್ದೇವೆ. ಮುಂದೆ ಪಾಲಿಕೆ ಚುನಾವಣೆಯಲ್ಲೂ ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದಂತೆ ನೇಮಕ ಮಾಡಲಾಗುವುದು ಎಂದ ಅವರು, ಕಾಂಗ್ರೆಸ್ ಒಡೆದ ಮನೆಯಲ್ಲ. ಒಗ್ಗೂಡಿರುವ ಮನೆಯಾಗಿದೆ ಎಂದವರು ತಿಳಿಸಿದರು. ಪಾಲಿಕೆಯಲ್ಲಿ ಆಸ್ತಿ ತೆರಿಗೆಯನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಲಾಗಿದೆ. ಬಳ್ಳಾರಿ ಮೇಲ್ದರ್ಜೆಗೇರಿರುವ ನಗರವಾಗಿದ್ದು, ಅದ ಮಾನದಂಡಗಳನ್ನು ಆಧರಿಸಿ ಆಸ್ತಿ ತೆರಿಗೆಯನ್ನು ಮರು ಪರಿಷ್ಕರಿಸಲಾಗುವುದು.
ಕೌಲ್ ಬಜಾರ್‌ನ 11 ವಾರ್ಡ್‌ಗಳಲ್ಲಿ 29, 31, 32ರಲ್ಲಿ ಗಲಾಟೆ ನಡೆದಿದೆ. ಸೋತ ಅಭ್ಯರ್ಥಿಗಳ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರ ಮನೆಗಳ ಎದುರು ಶಸ್ತಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಈ ಕುರಿತು ಎಸ್‌ಪಿ ಗಮನ ಸೆಳೆಯಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಬಿಜೆಪಿ ಪಕ್ಷವೇ ನೇರ ಹೊಣೆ ಎಂದವರು ಎಚ್ಚರಿಸಿದರು.
ಮಾಜಿ ಶಾಸಕ ಅನಿಲ್‌ಲಾಡ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯ ಮುಂಡ್ರಿಗಿ ನಾಗರಾಜ್, ಜಿಲ್ಲಾಧ್ಯಕ್ಷ ಜಿ.ಎಸ್.ಮಹ್ಮದ್ ರμàಕ್, ಜೆ.ಎಸ್.ಆಂಜನೇಯಲು, ರವಿ, ಹರ್ಷದ್, ಕೊಳಗಲ್ಲು ಅಂಜಿನಿ ಸೇರಿ ಹಲವರು ಇದ್ದರು.