Advertisement

ಸಂಭ್ರಮದ ಉದ್ಭವ ವೀರಭದ್ರೇಶ್ವರ ಸ್ವಾಮಿ ರಥೋತ್ಸವ

06:41 PM Mar 25, 2021 | Team Udayavani |

ಕಂಪ್ಲಿ: ಸಣಾಪುರ ಗ್ರಾಮದ ತುಂಗಭದ್ರಾ ನದಿತೀರದಲ್ಲಿ ಕಲ್ಲಿನಲ್ಲಿ ಸ್ವಯಂ ಲಿಂಗರೂಪದಲ್ಲಿ ಉದ್ಭವಿಸಿರುವ ಹಾಗೂ ಕಲಿಯುಗದಲ್ಲಿಯೂ ಅತ್ಯಂತ ಜಾಗೃತ ದೇವರೆಂದೆ ಪ್ರಸಿದ್ಧಿ ಪಡೆದಿರುವ ಶ್ರೀ ಉದ್ಬವ ವೀರಭದ್ರೇಶ್ವರ ಸ್ವಾಮಿಯ ಮಹಾರಥೋತ್ಸವವು ಬುಧುವಾರ ಸಂಜೆ 4.30ಕ್ಕೆ ವಿಜೃಂಭಣೆಯಿಂದ ಜರುಗಿತು.

Advertisement

ಮಹಾರಥೋತ್ಸವದ ನಿಮಿತ್ತ ದೇವಸ್ಥಾನದಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಜನಪದ ಕಲಾ ತಂಡಗಳು ರಥೋತ್ಸವಕ್ಕೆ ವಿಶೇಷ ಮೆರಗನ್ನು ನೀಡಿದ್ದವು. ಮಕ್ಕಳು ಹಾಗೂ ಸಾರ್ವಜನಿಕರು ತೇರಿಗೆ ಉತ್ತತ್ತಿ, ಹಣ್ಣು-ಹೂಗಳನ್ನು ಎಸೆಯುವ ಮೂಲಕ ಹರಕೆ ತೀರಿಸಿದರು.

ಮಾ. 25ರಂದು ಸಂಜೆ ಕಡುಬಿನ ಕಾಳಗ ಮತ್ತು ಗ್ರಾಮದ ಹಿರಿಯ ಮಹಿಳೆಯರಿಂದ ಹಾಡುಗಾರಿಕೆ ಮತ್ತು ಬಾಣಬಿರುಸಗಳ ಪ್ರದರ್ಶನ ನಡೆಯಲಿದೆ.

ಓದಿ : ಸಂಗೀತಕ್ಕಿದೆ  ಕಾಯಿಲೆ ವಾಸಿ ಶಕ್ತಿ  : ಹಿರೇಕಲ್ಮಠ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next