Advertisement

ಇ ಆಡಳಿತ ಕಾರ್ಯಾಗಾರ

06:49 PM Feb 18, 2021 | Team Udayavani |

ಬಳ್ಳಾರಿ: ಸರ್ಕಾರದ ಯೋಜನೆಗಳು, ನೀತಿ-ನಿಯಮಗಳು ಹಾಗೂ ಸರ್ಕಾರದ ಸಕಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಅತ್ಯಂತ ಕ್ಷಿಪ್ರಗತಿಯಲ್ಲಿ ತಲುಪಿಸುವಲ್ಲಿ ಸೈಬರ್‌ ವ್ಯವಸ್ಥೆ ಮತ್ತು ಇ-ಆಡಳಿತ ವ್ಯವಸ್ಥೆ ಅತ್ಯಂತ ಸಹಕಾರಿಯಾಗಿದೆ ಎಂದು ಅಪರ ಜಿಲ್ಲಾ ಧಿಕಾರಿ ಪಿ.ಎಸ್‌. ಮಂಜುನಾಥ ಹೇಳಿದರು.

Advertisement

ನಗರದ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಗ್ರೂಪ್‌-ಎ ಅ ಧಿಕಾರಿಗಳಿಗಾಗಿ ಬುಧವಾರ ಏರ್ಪಡಿಸಿದ್ದ ಸೈಬರ್‌ ಸೆಕ್ಯೂರಿಟಿ ಮತ್ತು ಇ-ಆಡಳಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರದಲ್ಲಿ ಇತ್ತೀಚಿನ ದಿನಗಳಲ್ಲಿ ಇ-ಆಡಳಿತ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಿದೆ ಮತ್ತು ಜನರ ಸಮಸ್ಯೆ ಮತ್ತು ಸೇವೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗಿದೆ. ಸೈಬರ್‌ ವ್ಯವಸ್ಥೆಯಿಂದ
ಅನುಕೂಲ ಎಷ್ಟಿದೆಯೋ ಅನಾನುಕೂಲವೂ ಅಷ್ಟೇ ಇದೆ. ಈ ಕುರಿತು ನಾವೆಲ್ಲರೂ ತಿಳಿದುಕೊಳ್ಳಬೇಕಿದೆ ಎಂದ ಅವರು ಸರ್ಕಾರಿ
ಅಧಿ ಕಾರಿ ಮತ್ತು ಸಿಬ್ಬಂದಿಗೆ ವೃತ್ತಿಕೌಶಲ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ರೀತಿಯ ತರಬೇತಿಗಳು ಅತ್ಯಂತ ಉಪಯುಕ್ತವಾಗಿದ್ದು, ಸದ್ವಿನಿಯೋಗ
ಮಾಡಿಕೊಳ್ಳಬೇಕು ಎಂದರು.

ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಎಂ. ಸುನೀತಾ ಮಾತನಾಡಿದರು. ಸೈಬರ್‌ ಸೆಕ್ಯೂರಿಟಿ ಮತ್ತು ಇ-ಆಡಳಿತದ ಕುರಿತು ಬಳ್ಳಾರಿ ಎನ್‌ಐಸಿ ಪ್ರಿನ್ಸಿಪಲ್‌ ಸಿಸ್ಟಮ್‌ ಅನಾಲಿಸ್ಟ್‌ ವೆಂಕಟರಮಣ ಹಾಗೂ ತಾಂತ್ರಿಕ ನಿರ್ದೇಶಕ ಶಿವಪ್ರಕಾಶ ವಸ್ತ್ರದ್‌ ತರಬೇತಿ ನೀಡಿದರು. ನಂತರ ತರಬೇತಿಯಲ್ಲಿ ಭಾಗವಹಿಸಿದ್ದ ಗ್ರೂಪ್‌-ಎ ಅ ಧಿಕಾರಿಗಳಿಗೆ ತರಬೇತಿ ಕೇಂದ್ರದ ವತಿಯಿಂದ
ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಈ ವೇಳೆ ಜಿಲ್ಲಾ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಶ್ರೀಹರಿ, ತರಬೇತಿ ಕೇಂದ್ರದ ಉಪಪ್ರಾಚಾರ್ಯ ಸುರೇಶಬಾಬು, ಬೋಧಕ
ಶಿವರಾಜ ಇದ್ದರು.

ಓದಿ : ಕೆಲವೇ ದಿನಗಳಲ್ಲಿ ವಿಸ್ಟ್ರಾನ್‌ ಕಂಪನಿಯ ಉತ್ಪಾದನೆ ಪುನರಾರಂಭ: ಜಗದೀಶ್‌ ಶೆಟ್ಟರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next