ಹೊಸಪೇಟೆ: ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಸದುಭಿರುಚಿ ಚಿತ್ರಗಳು ಹೆಚ್ಚು ಬರಬೇಕು ಎಂದು ಕಿರುತೆರೆಯ ನಿರ್ದೇಶಕ
ಕೊಟ್ಟೂರಿನ ಎಸ್.ವೆಂಕಟೇಶ್ ಕೊಟ್ಟೂರು ಅಭಿಪ್ರಾಯಿಸಿದರು.
ನಗರದ ಪಿಡಿಐಟಿ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ “ರಾಗ ಭೆ„ರವಿ’ ಕನ್ನಡ ಸಂಗೀತ ಪ್ರಧಾನ ಚಲನಚಿತ್ರದ ಪ್ರೀಮಿಯರ್ ಪ್ರದರ್ಶನ-ಸಂವಾದದಲ್ಲಿ ಅವರು ಮಾತನಾಡಿದರು.
ನಾನೊಬ್ಬ ನಿರ್ದೇಶಕನಾಗಲು ಪುಟ್ಟಣ ಕಣಗಾಲ್, ಕೆ.ವಿಶ್ವನಾಥ್ ಹಾಗೂ ಬಾಲಚಂದರ್ ಸ್ಫೂ ರ್ತಿಯಾದರು. ಡಾ| ರಾಜ್‌ಕುಮಾರ್, ಎನ್‌ಟಿಆರ್, ಅಮಿತಾಭ್ ಬಚ್ಚನ್ ಅವರ ಸಿನಿಮಾಗಳು ನನ್ನ ಮೇಲೆ ಪ್ರಭಾವ ಬೀರಿದವು. ಬಳ್ಳಾರಿ ಜಿಲ್ಲೆಯವನಾದ ನನ್ನ ಚಿತ್ರದ ಪ್ರೀಮಿಯರ್ ಪ್ರದರ್ಶನ ಹೊಸಪೇಟೆಯಲ್ಲಿ ನಡೆದಿರುವುದು ಖುಷಿ ತಂದಿದೆ ಎಂದರು. ನಿರ್ಮಾಪಕ ಸಾ. ಹರೀಶ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ದೊರೆಗಳಾದ ಪ್ರೌಢದೇವರಾಯ, ಶ್ರೀಕೃಷ್ಣದೇವರಾಯ ಕಲೆ ಸಾಹಿತ್ಯ ಸಂಗೀತ ನೃತ್ಯಗಳಿಗೆ ನೀಡಿದ ಪ್ರೋತ್ಸಾಹ ಇಂದಿಗೂ ಮುಂದುವರೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಗೀತ-ಭಾರತಿ ಸಂಸ್ಥೆಯ ಎಚ್.ಪಿ. ಕಲ್ಲಂಭಟ್ ಮಾತನಾಡಿ, ಹಿಂದೂಸ್ತಾನಿ ಸಂಗೀತದ ಹತ್ತು ಗೀತೆಗಳನ್ನು ಅಳವಡಿಸಿ ಕಥೆಯನ್ನು ಹೆಣೆಯಲಾಗಿದೆ. ಇದೊಂದು ಸವಾಲಿನ ಕೆಲಸ. ಇದರಲ್ಲಿ ಚಿತ್ರತಂಡ ಅತ್ಯಂತ ಯಶಸ್ವಿಯಾಗಿದೆ. ಚಿತ್ರದಲ್ಲಿ ಕತೆ ಹಾಗೂ ಸಂಗೀತ ಮೇಳೈಸಿವೆ.
ಸಂಗೀತಕ್ಕೆ ನೋವನ್ನು ಶಮನಗೊಳಿಸುವ ಶಕ್ತಿಯಿದೆ ಎಂಬುದನ್ನು ಚಿತ್ರ ಸಾರುತ್ತದೆ ಎಂದು ನಗರದ ಅಭಿಪ್ರಾಯಪಟ್ಟರು.
ಪಿಡಿಐಟಿಯ ಪ್ರಾಂಶುಪಾಲ ಡಾ| ಎಸ್. ಎಂ. ಶಶಿಧರ್, ಡಾ| ಪಲ್ಲವ ವೆಂಕಟೇಶ್, ಡಾ| ಕೆ. ನಾಗರತ್ನಮ್ಮ, ಹಿರಿಯ ಸಂಗೀತ ನಿರ್ದೇಶಕ ಚಾರುಚಂದ್ರ ಇವರುಗಳು ಮಾತನಾಡಿದರು. ನಿರ್ದೇಶಕ ಎಸ್. ವೆಂಕಟೇಶ್ ಕೊಟ್ಟೂರು ಹಾಗೂ ನಿರ್ಮಾಪಕ ಸಾ. ಹರೀಶ್ ಅವರನ್ನು
ಸನ್ಮಾನಿಸಿ ಗೌರವಿಸಲಾಯಿತು. ಡಾ| ತಾರಿಹಳ್ಳಿ ವೆಂಕಟೇಶ್, ಭಾನುಮತಿ, ಎಚ್.ಎಂ. ನೂರ್ ಅಹಮದ್, ಉಪನ್ಯಾಸಕರಾದ ನಿರಂಜನ, ದಿವಾಕರ್, ಹಿರಿಯ ವೈದ್ಯ ಡಾ| ಮಹಾಬಲೇಶ್ವರ ರೆಡ್ಡಿ, ಕನ್ನಡ ಕಲಾ ಸಂಘದ ಚಂದ್ರಶೇಖರ್, ಬದರೀಶ್, ಕೆಂಚನಗೌಡ, ಸೊ.ದಾ. ವಿರುಪಾಕ್ಷಗೌಡ, ಡಾ| ಅಬ್ದುಲ್ ಸಮದ್, ವೆಂಕನಗೌಡರು, ಪೂರ್ಣಿಮ ಗುರುರಾಜ್, ಮಹಮದ್ ರμ ಹಾಗೂ ವೇಣುಗೋಪಾಲ ಮಾತನಾಡಿದರು.
ಓದಿ:
ಉಪಚುನಾವಣೆ ಹೊತ್ತಲ್ಲೇ ಮಸ್ಕಿಗೆ ಮತ್ತೂಂದು ಬಂಪರ್!