Advertisement

ವಿವಿಧ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

05:08 PM Feb 07, 2021 | Team Udayavani |

ಬಳ್ಳಾರಿ: ನಗರದ 3,4,5ನೇ ವಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಸೊಳ್ಳೆಗಳನ್ನು ನಿಯಂತ್ರಿಸಬೇಕು ಸೇರಿ ವಿವಿಧ ಬೇಡಿಕೆಗಳನ್ನು
ಈಡೇರಿಸಬೇಕು ಎಂದು ಒತ್ತಾಯಿಸಿ ಸಮಾಜ ಸೇವಕ, ಯುವ ಮುಖಂಡ ಪ್ರಭಂಜನ್‌ ಕುಮಾರ್‌ ನೇತೃತ್ವದಲ್ಲಿ ವಾರ್ಡ್‌ಗಳ ಸ್ಥಳೀಯ
ನಿವಾಸಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 3,4, 5ನೇ ವಾರ್ಡ್‌ನ ರಸ್ತೆಗಳ ಇಕ್ಕೆಲಗಳಲ್ಲಿ ನಿರ್ಮಿಸಲಾಗಿರುವ ತೆರೆದ ಚರಂಡಿಗಳು ಅವೈಜ್ಞಾನಿಕವಾಗಿವೆ. ಪರಿಣಾಮ ಚರಂಡಿಯಲ್ಲಿ ಕೊಚ್ಚೆ ನೀರು ಮುಂದಕ್ಕೆ ಹರಿಯದೇ ಒಂದೆಡೆ ನಿಂತು ರಸ್ತೆಗಳ ಮೇಲೆಲ್ಲ ಹರಡಿ ಅವಾಂತರ ಸೃಷ್ಟಿಸುತ್ತಿದೆ.

ದುರ್ವಾಸನೆ ಬೀರುವುದರ ಜತೆಗೆ ಸೊಳ್ಳೆಗಳ ಹಾವಳಿ ಹೆಚ್ಚಿ ಜನರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಕೂಡಲೇ ತೆರೆದ ಚರಂಡಿಗಳನ್ನು
ಸ್ವತ್ಛಗೊಳಿಸಬೇಕು ಎಂದು ಪ್ರಭಂಜನ್‌ ಕುಮಾರ್‌ ಆಗ್ರಹಿಸಿದ್ದಾರೆ.

ವಾರ್ಡ್‌ಗಳ ವಿವಿಧೆಡೆ ತಿಪ್ಪೆಗುಂಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಎರಡು ಮೂರು ವಾರಗಳು ಕಳೆದರೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಹಂದಿಗಳ ಹಾವಳಿಯೂ ಅಧಿಕವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗ, ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಈ ಕುರಿತು ಸಂಬಂಧಪಟ್ಟ ಪಾಲಿಕೆ ಅಧಿ ಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ.

ಇನ್ನು ವಾರ್ಡ್‌ನ ವಿವಿಧೆಡೆ ಒಳಚರಂಡಿಗಳ ಚೇಂಬರ್‌ಗಳು ಸೋರಿಕೆಯಾಗುತ್ತಿದ್ದು, ಕೊಚ್ಚೆ ನೀರು ಮನೆಗಳ ಮುಂದೆಲ್ಲಾ ಹರಡಿ ಅವಾಂತರ ಸೃಷ್ಟಿಸುತ್ತಿದೆ. ನಗರದ ವಿವಿಧೆಡೆ ಸಾರ್ವಜನಿಕ ಶೌಚಾಲಯಗಳ ಕೊರತೆ ಎದುರಾಗಿದೆ. ಹಳ್ಳಿಗಳಿಂದ ಬರುವ ಮಹಿಳೆಯರ ಪರಿಸ್ಥಿತಿ ಹೇಳತೀರದಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕು ಎಂದವರು ಒತ್ತಾಯಿಸಿದ್ದಾರೆ. ಬಳಿಕ ಮಹಾನಗರ ಪಾಲಿಕೆ ಅಧಿಕಾರಿಗೆ
ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಯಸಿಂಹ, ಕುಮಾರ್‌ ಸೇರಿದಂತೆ ವಾರ್ಡ್‌ನ ನೂರಾರು ನಿವಾಸಿಗಳು ಇದ್ದರು.

Advertisement

ಓದಿ :ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನೂ ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು!

Advertisement

Udayavani is now on Telegram. Click here to join our channel and stay updated with the latest news.

Next