ಕೂಡ್ಲಿಗಿ: ದೆಹಲಿಯಲ್ಲಿ ರೈತರು ನಡೆಸುತ್ತಿರುವ·ಮುಷ್ಕರ ಬೆಂಬಲಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರಾಜ್ಯ ರೈತ ಸಂಘದ ಪದಾಧಿ ಕಾರಿಗಳು, ಸಿಐಟಿಯುಮತ್ತು ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ-50ನ್ನು ಬಂದ್‌ಮಾಡಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆಗಳನ್ನುಕೂಗಿದರು.
ಹೆದ್ದಾರಿ ಬಂದ್ ವೇಳೆ ರಾಜ್ಯ ರೈತ ಸಂಘದಜಿಲ್ಲಾಧ್ಯಕ್ಷ ದೇವಮನಿ ಮಹೇಶ ಮಾತನಾಡಿ, ಕೆಲವುಬಹು ರಾಷ್ಟ್ರೀಯ ಕಂಪನಿಗಳ ಹಿತಕ್ಕಾಗಿ ಎಪಿಎಂಸಿ,ಭೂ ಸುಧಾರಣಾ ಕಾಯ್ದೆ ಸೇರಿದಂತೆ ದೇಶದ ರೈತರಿಗೆಹಾಗೂ ಕಾರ್ಮಿಕರಿಗೆ ಮಾರಕವಾಗುವಂತ ಹಲವುಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು,ಅವುಗಳನ್ನು ಹಿಂಪಡೆಯುವಂತೆ ದೆಹಲಿ ಬಳಿ ರೈತರುಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿರ್ಲಕ್ಷ·ವಹಿಸಿದೆ.ರೈತರ ತಾಳ್ಮೆ ಪರೀಕ್ಷಿಸದೆ ಕೇಂದ್ರ ಸರ್ಕಾರ ಕೂಡಲೇಎಲ್ಲ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಅವರುಒತ್ತಾಯಿಸಿದರು.
ಕಾರ್ಮಿಕ ಮುಖಂಡ ಸಿ. ವಿರುಪಾಕ್ಷಿ,ಟಿಪ್ಪು, ಕೆಪಿಸಿಸಿ ಕಾರ್ಯದರ್ಶಿ ಹಿರೇಕುಂಬಳಗುಂಟಉಮೇಶ್, ರೈತ ಮುಖಂಡ ಬಂಡ್ರಿ ಡಿ. ಹನುಮಂತಪ್ಪ,ಪಟ್ಟಣ ಪಂಚಾಯ್ತಿ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ,ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಮಯೂರಮಂಜುನಾಥ, ಕೆಪಿಸಿಸಿ ಮಹಿಳಾ ಘಟಕದಕಾರ್ಯದರ್ಶಿ ಜಿ. ನಾಗಮಣಿ ಮಾತನಾಡಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಬಣಕಾರಚನ್ನಬಸಪ್ಪ, ಜಿಲ್ಲಾ ಉಪಾಧ್ಯಕ್ಷ ಉಲುವತ್ತಿ ಎಂ.ಸೋಮಪ್ಪ, ಉಪಾಧ್ಯಕ್ಷ ಬನ್ನಿಮರದ ಭೀಮಪ್ಪ, ಪ್ರಧಾನಕಾರ್ಯದರ್ಶಿ ಕಾಟೇರ್ ಶೇಷಪ್ಪ, ಕೆ. ಪರುಶಪ್ಪ, ಡಾಣಿರಾಘವೇಂದ್ರ, ಬಸವರಾಜ, ರೆಹಮಾನ್, ಗಂಗಾಧರಸೇರಿದಂತೆ ಅನೇಕರು ಇದ್ದರು. ಇದಕ್ಕೂ ಮೊದಲುಪಟ್ಟಣದಲ್ಲಿನ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ
ಸ್ಮಾರಕದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರುಅಂಬೇಡ್ಕರ್, ಮದಕರಿ ವೃತ್ತದ ಮೂಲಕ ಹೆದ್ದಾರಿತಲುಪಿದರು. ಡಿವೈಎಸ್ಪಿ ನೇತೃತ್ವದಲ್ಲಿ ಸಿಪಿಐವಸಂತ್.ವಿ ಅಸುದೆ ಸೂಕ್ತ ಪೊಲೀಸ್ ಬಂದೋಬಸ್ತ್ಕೈಗೊಂಡಿದ್ದರು.
ಓದಿ :·
ಉತ್ತರಾಖಂಡ್ ನಲ್ಲಿ ಹಿಮ ಸ್ಪೋಟ: ಹರಿದ್ವಾರ- ಋಷಿಕೇಶದಲ್ಲಿ ಪ್ರವಾಹ ಭೀತಿ