Advertisement

ಕಸಾಪ ರಾಜ್ಯಾಧ್ಯಕ್ಷರ ಹೇಳಿಕೆ ಸರಿಯಲ್ಲ

02:34 PM Feb 15, 2022 | Team Udayavani |

ಬಳ್ಳಾರಿ: ಹೆಬ್ಬೆಟ್ಟಿನವರು ಕಸಾಪ ಸದಸ್ಯರಾಗಿದ್ದಾರೆಎಂಬ ರಾಜ್ಯಾಧ್ಯಕ್ಷ ಮಹೇಶ್‌ ಜೋಷಿಯವರ ಹೇಳಿಕೆಸರಿಯಲ್ಲ. ಆಸಕ್ತಿಯಿದ್ದ ಯಾರಾದರೂ ಪರಿಷತ್‌ಗೆ ಸದಸ್ಯರಾಗಬಹುದು ಎಂದು ಕಸಾಪ ಜಿಲ್ಲಾಧ್ಯಕ್ಷನಿಷ್ಠಿರುದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಸಾಂಸ್ಕೃತಿಕ ಸಮುಚ್ಚಯದಲ್ಲಿಮಹಾದೇವ ಎಜುಕೇಶನ್‌, ಆರ್ಟ್‌ ಆ್ಯಂಡ್‌ಕಲ್ಚರಲ್‌ ಟ್ರಸ್ಟ್‌, ವಂದೇ ಮಾತರಂ ಯುವಕಸಂಘ, ಮೇಡಂಕ್ಯೂರಿ ವಿಜ್ಞಾನ ಅಕಾಡೆಮಿ, ಕಸಾಪವತಿಯಿಂದ ಆಯೋಜಿಸಿದ್ದ ಎರಡು ದಿನಗಳಸಂಕ್ರಾಂತಿ ವೈಭವ-2022 ಕಾರ್ಯಕ್ರಮದಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಸಾಪ ರಾಜ್ಯಾಧ್ಯಕ್ಷ ಮಹೇಶ್‌ಜೋಷಿಹೇಳಿಕೆ ಸರಿಯಾದದ್ದಲ್ಲ. ಪರಿಷತ್‌ಗೆ ಆಸಕ್ತಿಇದ್ದರೆ ಯಾರುಬೇಕಾದರೂ ಸದಸ್ಯತ್ವ ಸ್ಥಾನಪಡೆಯಬಹುದು. ಹೆಬ್ಬೆಟ್ಟಿನವರು ಸದಸ್ಯರಾಗಿದ್ದಾರೆಎಂಬ ಹೇಳಿಕೆಯಿಂದ ಕನ್ನಡಿಗರಲ್ಲಿ ಬೇಸರವಾಗಿದೆ.

ರಾಜ್ಯದ 30 ಜಿಲ್ಲೆಗಳ ಮತ್ತು ಗಡಿ ಜಿಲ್ಲೆಗಳ ಎಲ್ಲಕಸಾಪ ಅಧ್ಯಕ್ಷರು ಈ ಕುರಿತು ಜೋಷಿ ಅವರಲ್ಲಿಮನವರಿಕೆ ಮಾಡಿಕೊಡುತ್ತೇವೆ ಎಂದರು.ವರನಟ ಡಾ.ರಾಜಕುಮಾರ್‌, ಗುಬ್ಬಿ ವೀರಣ್ಣ,ಬೆಳಗಲ್ಲು ವೀರಣ್ಣ, ದರೋಜಿ ಈರಮ್ಮನಂಥವರುಇಡೀ ರಾಷ್ಟ್ರವೇ ಮೆಚ್ಚುವಂಥ ಕಲಾ ನೈಪುಣ್ಯತೆಯನ್ನುಹೊಂದಿದ್ದಾರೆ. ಲತಾ ಮಂಗೇಶ್ಕರ್‌ ಅಂಥವರೇಕೇವಲ ಒಂದೇ ದಿನ ಶಾಲೆಗೆ ಹೋದವರು. ಮತ್ತೆತಿರುಗಿ ಕೂಡ ಶಾಲೆಗೆ ಹೋದವರಲ್ಲ. ಅವರು ತಮ್ಮತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲಿಲ್ಲವೇ? ಮಹೇಶ್‌ಜೋಷಿ ಅವರಿಗೆ ಈ ರೀತಿ ಹೇಳಿಕೆ ಮತ್ತೆ ನೀಡದಂತೆನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next