ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿಬಹುಮತ ಪಡೆದು ಅಧಿಕಾರ ಹಿಡಿಯಬೇಕಿದ್ದಕಾಂಗ್ರೆಸ್‌ಗೆ ಹಿಡಿದಿರುವ ಗ್ರಹಣ ಬಿಟ್ಟಂತಿಲ್ಲ.ಮೇಯರ್ ಆಕಾಂಕ್ಷಿಗಳು ರಾಜ್ಯ ನಾಯಕರನ್ನುಭೇಟಿಯಾಗುತ್ತಿದ್ದು, ಮೇಯರ್-ಉಪಮೇಯರ್‌ಚುನಾವಣೆ ನಡೆಸುವಂತೆ ಸರ್ಕಾರ, ಪ್ರಾದೇಶಿಕಆಯುಕ್ತರ ಮೇಲೂ ಒತ್ತಡ ಹೇರಲು ಜಿಲ್ಲೆಯಜನಪ್ರತಿನಿಧಿಗಳು, ಮುಖಂಡರು ಆಸಕ್ತಿತೋರದಿರುವುದು ಚರ್ಚೆಗೆ ಗ್ರಾಸವಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆನಡೆದು 9 ತಿಂಗಳು ಕಳೆದಿವೆ. ಪಾಲಿಕೆಯ 39 ಸದಸ್ಯಸ್ಥಾನಗಳ ಪೈಕಿ ಕಾಂಗ್ರೆಸ್ 21, ಕಾಂಗ್ರೆಸ್ ಬಂಡಾಯದಪಕ್ಷೇತರರು 5, ಬಿಜೆಪಿ 13 ಸ್ಥಾನಗಳಲ್ಲಿ ಜಯಗಳಿಸಿದೆ.ಬಹುಮತ ಪಡೆದುಕೊಂಡಿರುವ ಪಕ್ಷ ಅಧಿಕಾರದಚುಕ್ಕಾಣಿ ಹಿಡಿದು ಜನಸಾಮಾನ್ಯರು ಇವರ ಮೇಲಿಟ್ಟಿದ್ದನಂಬಿಕೆ ಉಳಿಸಿಕೊಳ್ಳಬೇಕಿತ್ತು. ಆದರೆ, ಕಾಂಗ್ರೆಸ್‌ಮಾತ್ರ, ಮೇಯರ್ ಚುನಾವಣೆ ಕುರಿತು ಖುದ್ದು,ನಿರಾಸಕ್ತಿ ಹೊಂದಿದಂತಿದೆ.
ಚುನಾವಣೆ ಫಲಿತಾಂಶಹೊರಬಿದ್ದು, 9 ತಿಂಗಳಾಗಿವೆ. ಈ ನಡುವೆ, ವಿಧಾನಪರಿಷತ್, ಪಪಂ, ಹೊಸಪೇಟೆ ನಗರಸಭೆ ಸಾರ್ವತ್ರಿಕಚುನಾವಣೆ ನಡೆದು ಅಧ್ಯಕ್ಷ-ಉಪಾಧ್ಯಕ್ಷರು ಸಹಆಯ್ಕೆಯಾಗಿದ್ದಾರೆ. ಇಲ್ಲಿಲ್ಲೆಲ್ಲೂ ಕಾಣದ ಕೋವಿಡ್‌ಸೋಂಕು ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ನಡೆಸಲು ಮಾತ್ರಕಂಟಕವಾಗಿ ಪರಿಣಮಿಸಿದಂತಿದ್ದು, ರಾಜ್ಯ ಸರ್ಕಾರಒಂದಲ್ಲ ಒಂದು ನೆಪಹೇಳಿ ಕಾಲಹರಣ ಮಾಡುತ್ತಿದೆಎಂದು ಮೇಯರ್ ಆಕಾಂಕ್ಷಿಗಳು,
ಸದಸ್ಯರುಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಗೆ ಇನ್ನೂ ಮುಹೂರ್ತಕೂಡಿಬಂದಿಲ್ಲ. ಸ್ಪಷ್ಟ ಬಹುಮತ ಹೊಂದಿರುವಕಾಂಗ್ರೆಸ್ ನಾಯಕರು, ಸರ್ಕಾರದ ಮೇಲೆ ಒತ್ತಡಹೇರಿ, ಮೇಯರ್-ಉಪಮೇಯರ್ ಚುನಾವಣೆನಡೆಸುವಂತೆ ಆಗ್ರಹಿಸಬೇಕಿತ್ತು.
ಆದರೆ, ಈವರೆಗೂಒಬ್ಬೇ ಒಬ್ಬ ನಾಯಕರು, ಜನಪ್ರತಿನಿಧಿಗಳು ಮೇಯರ್‌ಚುನಾವಣೆ ಕುರಿತು ಮಾತನಾಡುತ್ತಿಲ್ಲ. ಅಲ್ಲದೇ,ಪ್ರತಿಭಟನೆ ನಡೆಸಿ ಒತ್ತಡ ಹೇರೋಣವೆಂದರೂ,ಯಾವೊಬ್ಬ ಜನಪ್ರತಿನಿಧಿಗಳು ಆಸಕ್ತಿ ತೋರದೆಮೌನ ವಹಿಸಿರುವ ಕಾಂಗ್ರೆಸ್ ನಾಯಕರ ಬಗ್ಗೆಇದೀಗ ಜನರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.
ವೆಂಕೋಬಿ ಸಂಗನಕಲ್ಲು