ಬಳ್ಳಾರಿ: ಗಣಿನಾಡು ವಿಭಜಿತ ಬಳ್ಳಾರಿ ಜಿಲ್ಲೆಯ ನೂತನಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಸಾರಿಗೆ ಸಚಿವಬಿ. ಶ್ರೀರಾಮುಲು ಅವರಿಗೆ ವಹಿಸಿ ರಾಜ್ಯ ಸರ್ಕಾರಸೋಮವಾರ ಆದೇಶ ಹೊರಡಿಸಿದ್ದು, ಬಹುದಿನಗಳಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ನೂತನವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನು ಆನಂದ್‌ಸಿಂಗ್ ಬದಲು ಜೊಲ್ಲೆ ಶಶಿಕಲಾ ಅವರಿಗೆ ನೀಡಿರುವುದುಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕಳಚಿ 2019ರಲ್ಲಿ ಬಿ.ಎಸ್. ಯಡಿಯೂರಪ್ಪನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಬಿ.ಶ್ರೀರಾಮುಲು ಅವರಿಗೆ ಸುಲಭವಾಗಿ ಸಚಿವ ಸ್ಥಾನದಕ್ಕಿತ್ತಾದರೂ, ಮಾತೃ ಜಿಲ್ಲೆ ಬಳ್ಳಾರಿ ಜಿಲ್ಲಾ ಉಸ್ತುವಾರಿಕೈತಪ್ಪಿ ನೆರೆಯ ಚಿತ್ರದುರ್ಗ, ರಾಯಚೂರು ಜಿಲ್ಲೆಗಳಉಸ್ತುವಾರಿ ಲಭಿಸಿತ್ತು. ಉಪಮುಖ್ಯಮಂತ್ರಿ ಸ್ಥಾನ,ಲೋಕೋಪಯೋಗಿ ಖಾತೆ ಸೇರಿ ಪ್ರತ್ಯೇಕ ಖಾತೆಗಳನ್ನುನೀಡುವಂತೆ ಕೋರಿದರೂ ಸಾಧ್ಯವಾಗಲಿಲ್ಲ.
ಕೊನೆಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಬೇಡಿಕೆಯಿಟ್ಟಿದ್ದರೂ ಬಳ್ಳಾರಿ ಮೂಲದ ರಾಮುಲುಅವರು, ನೆರೆಯ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರುವಿಧಾನಸಭಾ ಕ್ಷೇತ್ರವನ್ನು ಪ್ರತಿನಿ ಧಿಸುತ್ತಿರುವುದುಮಾತೃ ಜಿಲ್ಲೆ ಉಸ್ತುವಾರಿ ಕೈತಪ್ಪಲು ಪ್ರಮುಖ ಕಾರಣಎಂಬ ಮಾತುಗಳು ಕೇಳಿಬಂದಿದ್ದವು. ಕೊನೆಗೆ ಬಳ್ಳಾರಿಜಿಲ್ಲೆಯ ಉಸ್ತುವಾರಿಯನ್ನು ಸಚಿವ ಆನಂದ್‌ಸಿಂಗ್‌ನೀಡಲಾಗಿತ್ತು.
ಬಳ್ಳಾರಿ ಜಿಲ್ಲೆ ವಿಭಜನೆಯಾಗಿ ನೂತನವಿಜಯನಗರ ರಚನೆಯಾದ ಬಳಿಕ ಅವಳಿ ಜಿಲ್ಲೆಗಳಿಗೂಉಸ್ತುವಾರಿಯಾಗಿ ಮುಂದುವರೆದಿದ್ದ ಆನಂದ್‌ಸಿಂಗ್‌ಬಗ್ಗೆ ಬಳ್ಳಾರಿ ಜಿಲ್ಲೆಯಲ್ಲಿ ಅಸಮಾಧಾನ ಕೇಳಿಬಂದಿತ್ತು.ನಗರ ಶಾಸಕ ಸೋಮಶೇಖರ ರೆಡ್ಡಿಯವರು, ಅಖಂಡಬಳ್ಳಾರಿಯ ವಿಭಜನೆಗೆ ಕಾರಣರಾದ ಆನಂದ್‌ಸಿಂಗ್ ಜಿಲ್ಲಾ ಉಸ್ತುವಾರಿ ಮುಂದುವರೆಯುವುದುಬೇಡ.
ಉಸ್ತುವಾರಿಯನ್ನು ಬದಲಾವಣೆ ಮಾಡಿಅಥವಾ ಶ್ರೀರಾಮುಲು ಅವರಿಗೆ ನೀಡುವಂತೆಬಹಿರಂಗವಾಗಿ ಮಾಧ್ಯಮಗಳ ಬಳಿ ಹೇಳಿದ್ದರು.ಅಲ್ಲದೇ ಈಚೆಗೆ ನಡೆದ ಎಂಎಲ್‌ಸಿ ಚುನಾವಣೆಯಕಾರ್ಯಕ್ರಮದಲ್ಲಿ ಸಚಿವ ಸಿಂಗ್ ಸಮ್ಮುಖದಲ್ಲೇಎರಡು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿರುವಆನಂದ್‌ಸಿಂಗ್ ಅವರಿಗೆ ಜವಾಬ್ದಾರಿ ಜಾಸ್ತಿಯಾಗಿದೆ.ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿಯನ್ನುಬದಲಾಯಿಸಿ ರಾಮುಲುಗೆ ನೀಡುವಂತೆ ಕೋರಿದ್ದರು.
ಇದಕ್ಕೆ ಸಚಿವ ಆನಂದ್‌ಸಿಂಗ್ ಅವರು ಸಹ ಸಮ್ಮತಿಸೂಚಿಸಿದ್ದು, ಬಳ್ಳಾರಿ ಉಸ್ತುವಾರಿಯನ್ನು ಸಚಿವರಾಮುಲುಗೆ ನೀಡುವುದಾದರೆ ಸ್ವಾಗತ. ಬೇರೆಯವರಿಗೆನೀಡಿದರೆ ಒಪ್ಪುವುದಿಲ್ಲ ಎಂದಿದ್ದರು. ಅದರಂತೆವಿಭಜಿತ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಸಾರಿಗೆಸಚಿವ ಶ್ರೀರಾಮುಲು ಅವರಿಗೆ ನೀಡುವ ಮೂಲಕಶಾಸಕ ಸೋಮಶೇಖರ ರೆಡ್ಡಿಯವರ ಬಹುದಿನಗಳಬೇಡಿಕೆಯನ್ನು ಈಡೇರಿಸಿದಂತಾಗಿದೆ
ವೆಂಕೋಬಿ ಸಂಗನಕಲ್ಲು