Advertisement

ಜಡಿ ಮಳೆಗೆ ನೆಲಕಚ್ಚಿದ ಗಣಿನಾಡಿನ ಬೆಳೆ

10:18 AM Nov 20, 2021 | Team Udayavani |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ನಾಲ್ಕೈದುದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, 24 ಗಂಟೆಯಲ್ಲಿ14405 ಹೆಕ್ಟೇರ್‌ ವಿವಿಧ ಬೆಳೆಗಳು ಹಾನಿಯಾಗಿದೆ.ಅಂದಾಜು 20 ಕೋಟಿ ರೂಗಳಷ್ಟು ನಷ್ಟವಾಗಿದ್ದು ರೈತರು ಕಂಗಾಲಾಗಿದ್ದಾರೆ.

Advertisement

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದಮೋಡ ಕವಿದ ವಾತಾವರಣದೊಂದಿಗೆ ಆಗಾಗ ಜಿಟಿಜಿಟಿಮಳೆಯಾಗುತ್ತಿತ್ತು. ಆದರೆ, ಗುರುವಾರ ರಾತ್ರಿಯಿಂದನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಬಳ್ಳಾರಿ,ಸಿರುಗುಪ್ಪ, ಸಂಡೂರು, ಕುರುಗೋಡು, ಕಂಪ್ಲಿ ತಾಲೂಕುಗಳಲ್ಲಿಕಟಾವಿಗೆ ಬಂದಿದ್ದ ಭತ್ತ, ಮೆಣಸಿನಕಾಯಿ ಇನ್ನಿತರೆಬೆಳೆಗಳು ನೆಲಕಚ್ಚಿವೆ.

ತಾಲೂಕಿನ ಕಪ್ಪಗಲ್ಲು, ಕೊಳಗಲ್ಲು,ಶ್ರೀಧರಗಡ್ಡೆ, ಕೊರ್ಲಗುಂದಿ ಗ್ರಾಮಗಳಲ್ಲಿ ಒಣಗಲು ಹಾಕಿದ್ದಮೆಣಸಿನಕಾಯಿ ಸಹ ಮಳೆನೀರಿಗೆ ಕೊಚ್ಚಿಕೊಂಡು ಹೋಗಿವೆ.ಹೊಲಗಳಲೆಲ್ಲಾ ನೀರು ನಿಂತು ಬೆಳದು ನಿಂತಿರುವ ಬೆಳೆ ಕೈಗೆಬಾರದಂತಾಗಿದೆ. ಮಳೆಯಿಂದಾಗಿ ಕೆಲವೇ ದಿನಗಳಲ್ಲಿ ಕಟಾವುಮಾಡಬೇಕೆಂದಿದ್ದ ಮೆಣಸಿನಕಾಯಿ ಬೆಳೆಯೂ ಕೊಳೆಯುವಪರಿಸ್ಥಿತಿ ಬಂದಿದ್ದು, ಲಕ್ಷಾಂತರ ರೂ. ವೆಚ್ಚ ಮಾಡಿದ್ದ ರೈತರಕಣ್ಣಲ್ಲಿ ಕಣ್ಣೀರು ತರಿಸಿದೆ.

ಬೆಳೆ ಹಾನಿಯಿಂದ ರೈತರನ್ನು ನಷ್ಟದಸುಳಿಗೆ ಸಿಲುಕುವಂತೆ ಮಾಡಿದೆ.ತಾಲೂಕಿನ ಕೊಳಗಲ್ಲು, ಕೊರ್ಲಗುಂದಿ, ಮೋಕಾ, ಎರ್ರಗುಡಿ,ಕಪ್ಪಗಲ್ಲು, ಸೋಮಸಮುದ್ರ, ಹಂದಿಹಾಳ್‌, ಜಾಲಿಬೆಂಚಿ,ಸಂಜೀವರಾಯನಕೋಟೆ, ಮಿಂಚೇರಿ, ಶ್ರೀಧರಗಡ್ಡೆ,ತಾಳೂರು, ಹಡ್ಲಿಗಿ, ಬಸರಕೋಡು ಸೇರಿ ಇನ್ನಿತರೆ ಗ್ರಾಮಗಳಿಗೆಕೃಷಿ ಮತ್ತು ತೋಟಗಾರಿಕೆ ಅಧಿ ಕಾರಿಗಳು ಭೇಟಿ ನೀಡಿ ಮಳೆಗೆನೆಲಕಚ್ಚಿರುವ ಬೆಳೆಯನ್ನು ನೋಡಿ ಸಮೀಕ್ಷೆ ಆರಂಭಿಸಿದ್ದಾರೆ.

ಆದರೆ, ನಿರಂತರವಾಗಿ ಮಳೆ ಸುರಿದರೂ, ಜನ, ಜಾನುವಾರುಸೇರಿ ಯಾವುದೇ ಪ್ರಾಣ ಹಾನಿಯಾಗದಿರುವುದು ಸಮಾಧಾನಮೂಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next