Advertisement

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ

01:45 PM Jun 16, 2022 | Team Udayavani |

ಬಳ್ಳಾರಿ: ತಾಲೂಕಿನ ಹಂದಿಹಾಳು ಗ್ರಾಮದಲ್ಲಿ ಜೂ.18 ರಂದುಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಗ್ರಾಮವಾಸ್ತವ್ಯನಡೆಸಲಿದ್ದು, ಗ್ರಾಮಸ್ಥರ ದೂರು-ದುಮ್ಮಾನ ಆಲಿಸಲಿದ್ದಾರೆ.ಇದಕ್ಕಾಗಿ ಎಲ್ಲ ಸಿದ್ಧತೆಗಳು ಗ್ರಾಮದಲ್ಲಿ ಭರದಿಂದ ಸಾಗಿವೆ.ಜಿಲ್ಲಾಧಿಕಾರಿಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳುಸಾಥ್‌ ನೀಡಲಿದ್ದಾರೆ ಎಂದು ಎಡಿಸಿ ಪಿ.ಎಸ್‌. ಮಂಜುನಾಥಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಅನೇಕ ಸಮಸ್ಯೆಗಳಿಗೆಪರಿಹಾರ ಕಲ್ಪಿಸಲಿದ್ದಾರೆ ಮತ್ತು ಉಳಿದ ಸಮಸ್ಯೆಗಳಿಗೆಕಾಲಮಿತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನನೀಡಲಿದ್ದಾರೆ.ಜಿಲ್ಲಾಧಿಕಾರಿಗಳು ಹಂದಿಹಾಳು ಗ್ರಾಮದಲ್ಲಿ ಗ್ರಾಮವಾಸ್ತವ್ಯನಡೆಸಲಿದ್ದು, ಅಪರ ಜಿಲ್ಲಾಧಿಕಾರಿಗಳು, ಸಹಾಯಕಆಯುಕ್ತರು, ಬಳ್ಳಾರಿ ತಹಶೀಲ್ದಾರರು ಹಾಗೂ ಜಿಲ್ಲಾಮಟ್ಟದಅಧಿಕಾರಿಗಳು ಇರಲಿದ್ದಾರೆ.

ತಾಲೂಕುಮಟ್ಟದಲ್ಲಿ ತಹಶೀಲ್ದಾರರು ಸಹ ಒಂದೊಂದುಊರುಗಳನ್ನು ಗುರುತಿಸಿ ಆ ಗ್ರಾಮಗಳಲ್ಲಿ ಗ್ರಾಮವಾಸ್ತವ್ಯನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ದನಿಯಾಗುವಕೆಲಸ ಮಾಡಲಿದ್ದಾರೆ. ಈ ಗ್ರಾಮ ವಾಸ್ತವ್ಯದ ಮೂಲಕ ಜನರಮನೆಬಾಗಿಲಿಗೆ ಸರ್ಕಾರ ತೆರಳಿದಂತಾಗಲಿದೆ ಎಂದವರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next