Advertisement

ಸಂಗೀತಕ್ಕಿದೆ ಹೃದಯ ಸೆಳೆಯುವ ಶಕ್ತಿ: ಶಾಂತಾನಾಯ್ಕ

06:11 PM Apr 03, 2022 | Team Udayavani |

ಬಳ್ಳಾರಿ: ಕಠಿಣ ಹೃದಯಗಳನ್ನು ಸೆಳೆಯುವ ಶಕ್ತಿಸಂಗೀತಕ್ಕೆ ಇದ್ದು ಸಂಗೀತದಲ್ಲಿ ಅಭಿರುಚಿ ಇರದವರುಕ್ರೂರಿಯಾಗಿರುತ್ತಾನೆ ಎಂದು ಪ್ರೊ| ಶಾಂತಾನಾಯ್ಕಅಭಿಪ್ರಾಯಪಟ್ಟರು.ನಗರದ ರಾಘವಕಲಾ ಮಂದಿರದಲ್ಲಿ ಆಲಾಪ್‌ ಕಲಾಟ್ರಸ್ಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದಈಚೆಗೆ ಹಮ್ಮಿಕೊಂಡಿದ್ದ “ಯುಗಾದಿ ರಂಗ ಸಂಭ್ರಮ’ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆಸುಮಾರು 30 ಕೋಟಿ ಕಲಾವಿದರು ಇರಬಹುದು.ಅವರನ್ನೆಲ್ಲ ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕಾದಕಾರ್ಯವನ್ನು ಸರ್ಕಾರ, ಸಂಘ ಸಂಸ್ಥೆಗಳು ಮಾಡಬೇಕು.ಅಂತಹ ಒಂದು ಮಹಾತ್ಕಾರ್ಯವನ್ನು ಆಲಾಪ್‌ ಕಲಾಟ್ರಸ್ಟ್‌ ಮಾಡುತ್ತಿದೆ ಎಂದು ಟ್ರಸ್ಟ್‌ ಕಾರ್ಯವನ್ನು ಶ್ಲಾಘಿಸಿದರು.

ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಸಿದ್ಧಲಿಂಗೇಶ ರಂಗಣ್ಣನವರ್‌ ಮಾತನಾಡಿ, ಯುಗಾದಿಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ತಿಳಿಸುವಹಬ್ಬವಾಗಿದೆ. ಚೈತ್ರ ಮಾಸದಲ್ಲಿ ಪ್ರಕೃತಿ ಮೈದುಂಬಿದಂತೆರಂಗ ಸಂಭ್ರಮದಿಂದ ರಂಗಭೂಮಿಯು ಮೈದುಂಬಲಿ.ನಮ್ಮ ಸಂಸ್ಕೃತಿಯನ್ನು ನಾವು ಗೌರವಿಸೋಣ ನಾವುಖರೀದಿ ಮಾಡುವ ಕಾರು ಬಂಗಲೆಗಳಲ್ಲಿ ಇಲ್ಲದ ನೆಮ್ಮದಿಸಂಗೀತ ಸಾಹಿತ್ಯದಲ್ಲಿದೆ ಎಂದರು.ಹಿರಿಯ ನ್ಯಾಯವಾದಿ ಕೋಟೇಶ್ವರರಾವ್‌ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷನಿಷ್ಠಿರುದ್ರಪ್ಪ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಪುರಸ್ಕೃತ ಬಿ. ಗಂಗಣ್ಣ, ಲತಾಶ್ರೀ, ಬದನೆಹಾಳ್‌ ಭೀಮಣ್ಣಅವರನ್ನು ಸನ್ಮಾನಿಸಲಾಯಿತು.ಅನುದಾನಿತ ಶಾಲೆಗಳ ಸಂಘದ ರಾಜ್ಯಾಧ್ಯಕ್ಷ ಡಾ|ಕೆ.ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next