Advertisement

Ballari Jail: ಕುಟುಂಬ ಸದಸ್ಯರಿಗೆ ದೂರವಾಣಿ ಕರೆ ಮಾಡಲು ದರ್ಶನ್‌ ಬೇಡಿಕೆ!

12:26 AM Sep 04, 2024 | Team Udayavani |

ಬಳ್ಳಾರಿ: ನಗರದ ಜೈಲಲ್ಲಿ ಬಹಿರ್ದೆಸೆ ಸಾಧ್ಯವಾಗುತ್ತಿಲ್ಲ, ಸರ್ಜಿಕಲ್‌ ಚೇರ್‌ ಕೊಡಿ ಎಂದು ಬೇಡಿಕೆ ಇಟ್ಟು ಅದನ್ನು ಈಡೇರಿಸಿಕೊಂಡ ಬಳಿಕ ನಿನ್ನೆ ಜೈಲಿನ ಏಕಾಂತವನ್ನು ದೂರ ಮಾಡಲು ಟಿವಿಯ ಬೇಡಿಕೆ ಇರಿಸಿದ್ದ ನಟ ದರ್ಶನ್‌ ಈವತ್ತು ಕುಟುಂಬದ ಸದಸ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾನೆ.

Advertisement

ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗಿರುವ ದರ್ಶನ್‌, 6 ದಿನಗಳಿಂದ ಹೈಸೆಕ್ಯೂರಿಟಿ ಸೆಲ್‌ನಲ್ಲಿ ಮೌನಕ್ಕೆ ಶರಣಾಗಿದ್ದಾನೆ. ಪುಸ್ತಕಗಳೇ ಈಗ ಸಂಗಾತಿ. ಟಿವಿ, ದೂರವಾಣಿ ಬಳಕೆ ಬೇಡಿಕೆಗಳ ಕುರಿತು ಜೈಲು ಅಧಿಕಾರಿಗಳು ಅರ್ಜಿ ಪಡೆದು “ಪ್ರಿಸನ್‌ ಕಾಲ್‌ ಸಿಸ್ಟಮ್‌’ ಪದ್ಧತಿಯಡಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಅನುಮತಿ ಸಿಕ್ಕರೆ ವಾರದಲ್ಲಿ 3 ಬಾರಿ ಕುಟುಂಬದ ಸದಸ್ಯರೊಂದಿಗೆ ಕೇವಲ 5 ನಿಮಿಷ ದೂರವಾಣಿಯಲ್ಲಿ ಮಾತನಾಡಬಹುದು. ಕುಟುಂಬದ ಸದಸ್ಯರು, ವಕೀಲರು ಸೇರಿ ಯಾರೊಂದಿಗೆ ಮಾತನಾಡುವುದಕ್ಕಿದೆಯೋ ಅವರ ಮೊಬೈಲ್‌ ಸಂಖ್ಯೆಯನ್ನು ಮೊದಲೇ ನೀಡಬೇಕು. ಮಾತನಾಡು ವುದೆಲ್ಲ ಧ್ವನಿ ಮುದ್ರಣ ಆಗಲಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.