Advertisement
ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಸಮಸ್ತ ಲೋಕಗಳನ್ನು ಗೆದ್ದು ತನ್ನ ವಶದಲ್ಲಿಟ್ಟುಕೊಂಡು ಅಟ್ಟಹಾಸ ಮೆರೆಯುತ್ತಿದ್ದ , ಮಹಾದಾನಿಯೂ ಆಗಿರುವ ಬಲಿ ಚಕ್ರವರ್ತಿ ಒಮ್ಮೆ ದೊಡ್ಡ ಯಾಗವೊಂದನ್ನು ಕೈಗೊಳ್ಳುತ್ತಾನೆ. ಯಾಗದ ಪುಣ್ಯ ಪ್ರಾಪ್ತಿಗಾಗಿ ಬೇಡಿದವರಿಗೆ ಬೇಡಿದ ದಾನವನ್ನು ನೀಡುವ ನಿರ್ಧಾರವನ್ನು ಕೈಗೊಂಡ ಇವನ ಗರ್ವವನ್ನು ಮುರಿಯಲು ಮಹಾವಿಷ್ಣುವು ವಾಮನ ರೂಪ ತಾಳಿ ಬಂದು ಮೂರು ಹೆಜ್ಜೆಯನ್ನು ಭೂಮಿಯನ್ನು ದಾನವಾಗಿ ಕೇಳುತ್ತಾನೆ.
Related Articles
Advertisement
ಇಷ್ಟೊಂದು ಒಳ್ಳೆಯ ಆಶಯ, ಸಂಭ್ರಮ ತುಂಬಿಕೊಂಡ ಹಬ್ಬಗಳು ಇತ್ತೀಚಿಗೆ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ನಿಜವಾಗಲು ವಿಷಾದಕರ. ಈ ಜಾಗತೀಕರಣ ನಡುವೆ ಹಬ್ಬಗಳೆಂದರೆ ಡಿಸ್ಕೌಂಟ್ ಸೇಲ್, ಶಾಪಿಂಗ್ ಸಮಯಗಳಿಗೆ ಮಾತ್ರ ಸೀಮಿತವಾಗದೆ ನಮ್ಮ ಸುಂದರ ಸಂಸೃತಿಯ ಬಗೆಗೆ ಯುವ ಸಮುದಾಯಗಳು ಅರಿತು ಬೆರೆತು ಹಬ್ಬಗಳ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ.
ಕುಂದಗನ್ನಡದ ಸಂಸ್ಕೃತಿಯಲ್ಲಿ ಗದ್ದೆಯಲ್ಲಿ ದೀಪ ಬೆಳಗುವುದು : ಗ್ರಾಮೀಣ ರೈತರು ಬಲೀಂದ್ರನನ್ನು ಅತ್ಯಂತ ಭಕ್ತ ಭಾವದಿಂದ ಭರಮಾಡಿಕೊಳ್ಳುವ ನಿಟ್ಟಿನಿಂದ ತೆಂಗಿನ ಮರದ ಒಣಗಿದ ಕೊನೆಯಿಂದ (ಕೊಂತಳಿ)ಸಿದ್ದಪಡಿಸಿದ ದೀಪ ( ನೆಣೆ ಕೋಲು ) ಗದ್ದೆಯಲ್ಲಿ ದೀಪ ಬೆಳಗಿ ಹಿಟ್ಟು (ಗೊಡಿØಟ್ಟು ),ಹೊಸ ಬೆಳೆಯ ಅವಲಕ್ಕಿ , ವೀಳ್ಯದೆಲೆ, ಅಡಿಕೆ, ಕೆಸ್ಕಾರ್ ಹೂವು, ಜಂಗಮ ಸೊಪ್ಪು, ಕೂಳಿ ಹೂವು ಹಾಗೂ ಕೋಳೆ ಹೂವುಗಳನ್ನು ಕೃಷಿ ಸಂಸ್ಕೃತಿಗೆ ಪೂರಕವಾಗಿ ಸಮರ್ಪಿಸುವ ವಿಶಿಷ್ಟ ಪದ್ಧತಿ ಇದೆ.
ಗದ್ದೆಗಳಿಗೆ ದೀಪ ಬೆಳಗಿದ ಬಳಿಕ ಕೃಷಿಕ ತನ್ನ ಮನೆಯಲ್ಲಿನ ಹೊಲಿ ರಾಶಿ (ಭತ್ತದ ರಾಶಿ)ಗೆ ಪೂಜೆ ಸಲ್ಲಿಸಿದ ಬಳಿಗೆ ನಂಬಿಕೆಯಂತೆ ಹುಲ್ಲಿನ ರಾಶಿ (ಹುಲ್ಕುತ್ರಿ) , ಗೊಬ್ಬರದ ಗುಂಡಿಗೆ ದೀಪ ಹಚ್ಚುವ ಮೂಲಕ ದೀಪಾವಳಿ ಹಬ್ಬದ ದೀಪ ಕಾಣ್… ಮುಂಬಪ್ಪ ಕೊಡಿ ಕಾಣ್…. ಎಂದು ಕುಂದಗನ್ನಡದ ಗ್ರಾಮೀಣ ಕೃಷಿಕರು ಗೋವಿನ ಮುಂದೆ ನಿಂತು ಹೇಳಿ ನಂತರ ಹೊಸ ಬೆಳೆ ಹಾಗೂ ಹಿಟ್ಟನ್ನು ಗೋವುಗಳಿಗೆ ಸಮರ್ಪಿಸುವ ಸಂಪ್ರದಾಯವಿದೆ.
– ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ.