Advertisement

ಬಲಿಪ ನಾರಾಯಣ ಭಾಗವತರಿಗೆ ಪ್ರತಿಷ್ಠಿತ “ಪಾರ್ತಿಸುಬ್ಬ ಪ್ರಶಸ್ತಿ’

06:00 AM Sep 18, 2018 | Team Udayavani |

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ 2017ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದು ಪ್ರತಿಷ್ಠಿತ 
“ಪಾರ್ತಿಸುಬ್ಬ’,ಪ್ರಶಸ್ತಿಗೆ ತೆಂಕುತಿಟ್ಟು ಯಕ್ಷಗಾನ ಕಲಾವಿದ ಮೂಡಬಿದರೆಯ ಮಾರೂರು ಗ್ರಾಮದ ಬಲಿಪ ನಾರಾಯಣ ಭಾಗವತ ಆಯ್ಕೆಯಾಗಿದ್ದಾರೆ.

Advertisement

ಕನ್ನಡ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ಪಾರ್ತಿಸುಬ್ಬ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನ‌  ಪ್ರಕಟಿಸಿದರು. ಯಕ್ಷಗಾನ ಕ್ಷೇತ್ರದಲ್ಲಿನ ಸಾಧನೆಗಾಗಿ ನೀಡಲಾಗುವ ಪಾರ್ತಿಸುಬ್ಬ ಪ್ರಶಸ್ತಿಗೆ ಬಲಿಪ ನಾರಾಯಣ ಭಾಗವತ (ಯಕ್ಷಗಾನ ಪ್ರಸಂಗ ಕತೃì ಮತ್ತು ಖ್ಯಾತ ಭಾಗವತರು) ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ 1ಲಕ್ಷ ರೂ.ನಗದು ಮತ್ತು ಫ‌ಲಕವನ್ನು ಒಳಗೊಂಡಿದೆ ಎಂದರು.

ಹಾಗೆ, 2017ನೇ ಸಾಲಿನ ಗೌರವ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಶಂಕರ ಭಾಗವತ (ಮದ್ದಳೆ ವಾದಕರು), ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಬರೆ ಕೇಶವ ಭಟ್‌ (ತಾಳಮದ್ದಳೆ ಅರ್ಥಗಾರಿಕೆ), ಕುಂದಾಪುರದ ಹೆಚ್‌.ಶ್ರೀಧರ್‌ ಹಂದೆ ಕೋಟ (ಬಡಗುತಿಟ್ಟು ಯಕ್ಷಗಾನ ವಿದ್ವಾಂಸರು ಮತ್ತು ಭಾಗವತರು), ತಿಪಟೂರಿನ ಅರಳಗುಪ್ಪೆಯ ಎ.ಎಂ.ಶಿವಶಂಕರಯ್ಯ (ಮೂಡಲಪಾಯ ಯಕ್ಷಗಾನ ಭಾಗವತರು) ಮತ್ತು ಬೆಂಗಳೂರಿನ ಕರಿಯಣ್ಣ ನವರು
(ಮೂಡಲಪಾಯ ಯಕ್ಷಗಾನ ಪಾತ್ರಧಾರಿ)ಆಯ್ಕೆಯಾಗಿದ್ದು, ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಫ‌ಲಕ ಒಳಗೊಂಡಿದೆ ಎಂದು ತಿಳಿಸಿದರು.

2017ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಬಲಿಪ ನಾರಾಯಣ ಭಾಗವತರ “ಬಲಿಪರ ಜಯಲಕ್ಷಿ$¾à’ (ಪ್ರಸಂಗ ಸಂಕಲನ)ಮತ್ತು ಶಿವಮೊಗ್ಗ ಜಿಲ್ಲೆ ಸಾಗರದ ಪ್ರೊ.ಜಿ.ಎಸ್‌.ಭಟ್‌ ಅವರ ಯಕ್ಷಗಾನ “ಅಂಗೋಪಾಂಗ ಸಮತೋಲನ ವಿಚಾರ’ (ಸಂಶೋಧನಾ ಗ್ರಂಥ) ಕೃತಿಗಳು ಭಾಜನವಾಗಿವೆ.

ಪ್ರಶಸ್ತಿ 25 ಸಾವಿರ ರೂ.ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದ್ದು, ಸೆಪ್ಟೆಂಬರ್‌ ಕೊನೆ ವಾರ ಅಥವಾ ಅಕ್ಟೋಬರ್‌ ಮೊದಲ ವಾರದಲ್ಲಿ ಉಡುಪಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರೊ.ಎಂ.ಎ.ಹೆಗಡೆ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next