Advertisement
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂ ಅಧ್ಯಕ್ಷರ ಸೂಚನೆ ಮೇರೆಗೆ ಪಿಡಿಒ ಕಾಂಪೌಂಡ್ ತೆರವುಗೊಳಿಸಿದ್ದಾರೆಂದು ದೂರಿದರು. ಕಂದಾಯ ಇಲಾಖೆಯಿಂದ ಸರ್ವೆ ನಂ.139ರಲ್ಲಿ ಪೋಡಿ ನಂ.457ರಂತೆ ನಮ್ಮ ನಿವೇಶನ ದಾಖಲೆಯಿದ್ದು, ಕಾಂಪೌಂಡ್ ನಿರ್ಮಿಸಲಾಗುತ್ತಿತ್ತು. ಪಕ್ಕದ ವಾಣಿಜ್ಯ ಮಳಿಗೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಂಪೌಂಡ್ ತೆರವುಗೊಳಿಸಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಎಕರೆ ಕಂದಾಯ, ಅರಣ್ಯ ಹಾಗೂ ಗ್ರಾಮ ಠಾಣಾ ಒತ್ತುವರಿಯಾಗಿದ್ದರೂ ಪಿಡಿಒ ದುರುದ್ದೇಶದಿಂದ ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ತೆರವುಗೊಳಿಸಿ ನಷ್ಟ ಉಂಟು ಮಾಡಿದ್ದಾರೆ ಎಂದರು.
ಜಾಗದ ಹಿಂಭಾಗದ ಮನೆಯವರಿಗೆ ದಾರಿ ಬೇಕೆಂಬ ನೆಪವೊಡ್ಡಿ ಕಾಂಪೌಂಡ್ ಕೆಡವಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪಿಡಿಒ ತೆರವುಗೊಳಿಸಿದ್ದಾರೆ. ಈ ಸಂಬಂಧ ನನಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು. ಬಿ.ಕಣಬೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಇಬ್ರಾಹಿಂ ಮಾತನಾಡಿ, ಗ್ರಾಪಂನಲ್ಲಿ ಹಣ ನೀಡಿದರೆ ದಾಖಲೆ ಇಲ್ಲದಿರುವ ಸರಕಾರಿ ಜಾಗಕ್ಕೂ ಇ ಸ್ವತ್ತು ಮಾಡಿಕೊಟ್ಟಿದ್ದಾರೆ. ಕಂದಾಯ ಇಲಾಖೆ ನೌಕರರ ನಿವೇಶನಕ್ಕೆ ಮೀಸಲಿಟ್ಟ ಪ್ರದೇಶವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಪ್ರಭಾವಿಗಳ ಒತ್ತಡಕ್ಕೆ ಮಣಿದು ಗ್ರಾಪಂನಲ್ಲಿ ಖಾತೆ ಮಾಡಿಕೊಟ್ಟಿದ್ದಾರೆ.
Related Articles
Advertisement
ನಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಈ ಎಲ್ಲ ಸಂಗತಿಗಳ ಸಮಗ್ರ ಮಾಹಿತಿ ಸಿಸಿ ಕ್ಯಾಮರಾಧಲ್ಲಿ ರ್ಸೆಏಯಾಗಿದ್ದು, ಪರಿಶೀಲಿಸಿದರೆ ಸತ್ಯಾಂಶ ಬೆಳಕಿಗೆ ಬರುತ್ತದೆ. ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಇತ್ತೀಚೆಗೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಬಸ್ ನಿಲ್ದಾಣ ಆವರಣದಲ್ಲಿದ್ದ 19 ಅಂಗಡಿ- ಮಳಿಗೆಗಳನ್ನು ಯಾವುದೇ ಟಂಡರ್ ಹಾಗೂ ಪತ್ರಿಕಾ ಪ್ರಕಟಣೆ ನೀಡದೇ ಕಡೆವಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು. ಗ್ರಾಪಂ ಮಾಜಿ ಸದಸ್ಯ ವಿನ್ಸಿಲೋಬೊ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅಕ್ರಮ ಇಸ್ವತ್ತಿಗೆ ಸಂಬಂಧಿಸಿದಂತೆ ಹಿಂದಿನ ಜಿಪಂ ಸಿಇಒ ದಾಖಲೆ ಪರಿಶೀಲಿಸಿ 450ಕ್ಕೂ ಹೆಚ್ಚು ಕಡತಗಳನ್ನು ತನಿಖೆಗೆ ಒಳಪಡಿಸಿದ್ದಾರೆ. ಅಕ್ರಮ ಕಾಂಪೌಂಡ್ ಹೆಸರಿನಲ್ಲಿ ಕ್ರಮ ಕೈಗೊಂಡಿರುವುದು ಸರಿಯಲ್ಲ.
ಬಸ್ ನಿಲ್ದಾಣ ದುರಸ್ತಿ, ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡದ ಇವರು ಭದ್ರಾ ಹಿನ್ನೀರು ನಿಲ್ಲುವ ಪ್ರದೇಶದಲ್ಲಿ ಸುಮಾರು 80ಲಕ್ಷ ರೂ. ವೆಚ್ಚದಲ್ಲಿ ಸಂತೆ ಮಾರ್ಕೆಟ್ ನಿರ್ಮಾಣ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂಬಂಧ ಜಿಲ್ಲಾ ಧಿಕಾರಿ ಹಾಗೂ ಜಿಪಂ ಸಿಇಒ ಹಾಗೂ ಎಬಿಸಿ ಮತ್ತು ಲೋಕಾಯುಕ್ತಕ್ಕೆ ನಿಯೋಗದಲ್ಲಿ ತೆರಳಿ ದೂರು ಸಲ್ಲಿಸಿ, ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೀವನ್, ಜೋಸೆಫ್ ಎಚ್.ಎಲ್, ಟಿಪ್ಪು ಉಪಸ್ಥಿತರಿದ್ದರು.