Advertisement

ಮಹಿಳೆಯರಿಂದ ಭಾರತೀಯ ಸಂಸ್ಕೃತಿ ಜೀವಂತ

08:57 PM Mar 29, 2021 | Team Udayavani |

ಬಾಳೆಹೊನ್ನೂರು: ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರ. ಧರ್ಮ- ಸಂಸ್ಕೃತಿ- ಪರಂಪರೆ- ಆಚರಣೆಗಳು ಮಹಿಳೆಯರಿಂದಲೇ ಉಳಿದು ಬೆಳೆದುಕೊಂಡು ಬಂದಿವೆ. ಸಂಸ್ಕೃತಿ ಜೀವಂತಿಕೆಗೆ ಅವರ ಕೊಡುಗೆ ಮಹತ್ತರವಾದುದು ಎಂದು ಶ್ರೀ ರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ “ಧರ್ಮ ಮತ್ತು ಮಹಿಳೆ’ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ತಾಯಿ ಎಂಬ ಎರಡಕ್ಷರದಲ್ಲಿ ಏನೆಲ್ಲವೂ ಅಡಗಿದೆ. ಮಾತೃದೇವೋ ಭವ ಎಂದು ಗೌರವಿಸಿದೆ. ಭಾರತೀಯ ಸಂಸ್ಕೃತಿಯಲ್ಲಿ ಉತ್ಕೃಷ್ಟ ಸ್ಥಾನ ಮಹಿಳೆಯರಿಗೆ ಕೊಟ್ಟಿದ್ದಾರೆ. ವೀರಶೈವ ಧರ್ಮದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಕಲ್ಪಿಸಿಕೊಟ್ಟಿದ್ದಾರೆ.

ಹೆತ್ತ ತಾಯಿ ಹೊತ್ತ ಭೂಮಿ ಇವೆರಡನ್ನು ಎಂದಿಗೂ ಮರೆಯಲಾಗದು. ಆದರ್ಶ ಮಹಿಳೆಯರಲ್ಲಿ ಆರು ಸದ್ಗುಣಗಳನ್ನು ಕಾಣಬಹುದು. ಕೆಲಸ ಕಾರ್ಯಗಳಲ್ಲಿ ದಾಸಿಯಾಗಿ, ಸಲಹೆ ಸೂಚನೆಗಳನ್ನು ಕೊಡುವಲ್ಲಿ ಮಂತ್ರಿಯಾಗಿ, ರೂಪದಲ್ಲಿ ಲಕ್ಷಿ¾ಯಾಗಿ, ತಾಳ್ಮೆಯಲ್ಲಿ ಭೂಮಿಯಾಗಿ, ಊಟದಲ್ಲಿ ತಾಯಿಯಾಗಿ ಮತ್ತು ಸಾಂಸಾರಿಕ ಜೀವನದಲ್ಲಿ ಸಂಗಾತಿಯಾಗಿ ಮಹಿಳೆ ಪಾತ್ರ ನಿರ್ವಹಿಸುತ್ತಾಳೆ. ಮಹಿಳೆಯರಲ್ಲಿ ಇರುವ ಒಳ್ಳೆಯ ಗುಣಗಳು ಪುರುಷರಲ್ಲಿ ಬಂದರೆ ದೇವರಾಗಿ ಕಾಣುತ್ತಾರಂತೆ. ಅಕಸ್ಮಾತ್‌ ಗಂಡಿನಲ್ಲಿರುವ ಗುಣಗಳು ಹೆಣ್ಣಿನಲ್ಲಿ ಏನಾದರೂ ಬಂದರೆ ಏನಾಗುತ್ತಾರೋ ಹೇಳಲಿಕ್ಕಾಗದೆಂದು ಎಚ್ಚರಿಸಿದ್ದಾರೆ ಎಂದರು. “ಕಾಯಕ ಯೋಗಿ ವೀರ ಗಂಗಾಧರ ಜಗದ್ಗುರುಗಳು’ ಎಂಬ ಕೃತಿಯನ್ನು ಅಖೀಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಬಿ.ವೈ. ಅರುಣಾದೇವಿ ಬಿಡುಗಡೆ ಮಾಡಿ ಲಿಂ. ಶ್ರೀ ರಂಭಾಪುರಿ ವೀರ ಗಂಗಾಧರ ಜಗದ್ಗುರುಗಳು ನಮ್ಮೆಲ್ಲರ ದೈವವಾಗಿ ಪೂಜೆಗೊಳ್ಳುತ್ತಿದ್ದಾರೆ. ಅವರ ತಪಶಃಕ್ತಿ, ದೂರದೃಷ್ಟಿ. ಬೋ ಧಿಸಿದ ವಿಚಾರಧಾರೆಗಳು ನಮ್ಮೆಲ್ಲರ ಬಾಳಿಗೆ ನಂದಾದೀಪ. ಅವರ ಜೀವನ ಸಾಧನೆಯನ್ನು ಕುರಿತು ಎಲ್‌.ಬಿ.ಕೆ. ಆಲ್ದಾಳ ಅವರು ಕಿರು ನಾಟಕ ರಚಿಸಿ ಕೃತಿ ರೂಪದಲ್ಲಿ ಭಕ್ತರ ಕೈಗೆ ಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಡಾ| ಪಂಡಿತಾರಾಧ್ಯ ವಿರಚಿತ “ಶಿವಾರಾಧನಾ ಪ್ರದೀಪಿಕಾ’ ಕೃತಿಯನ್ನು ಭಾಷಾ ವಿಜ್ಞಾನಿ ಡಾ| ಸಂಗಮೇಶ ಸವದತ್ತಿಮಠ ಬಿಡುಗಡೆ ಮಾಡಿದರು. ಬ್ರಹ್ಮಾಂಡ ಗುರೂಜಿ ಎಂದೇ ಪ್ರಸಿದ್ಧರಾಗಿರುವ ಡಾ| ನರೇಂದ್ರ ಶರ್ಮಾಜಿ ಸಮಾರಂಭದಲ್ಲಿ ಪಾಲ್ಗೊಂಡು ಹಿತವಚನ ನೀಡಿದರು. ಗ್ರಾಪಂ ಅಧ್ಯಕ್ಷೆ ಅಂಬುಜಾ, ಗ್ರಾಪಂ. ಸದಸ್ಯ ಮಹೇಶ ಆಚಾರ, ಬೆಂಗಳೂರಿನ ನಾಗರತ್ನ ಮಂಜುಳಾ, ನೇತ್ರಾದೇವಿ ಮುಖ್ಯ ಅತಿಥಿಗಳಾಗಿದ್ದರು. ದೇ

ವಾಪುರ-ಬಬಲಾದ್‌ (ಎಸ್‌) ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿದರು. ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಲಕ್ಷೆ¾àಶ್ವರದ ಡಾ| ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ “ಮಹಿಳೆಯರಿಂದ ಧರ್ಮ ಸಂಸ್ಕೃತಿ ಬೆಳವಣಿಗೆ’ ವಿಷಯವಾಗಿ ಉಪನ್ಯಾಸ ನೀಡಿದರು. ಹೊನ್ನಕಿರಣಗಿ ಚಂದ್ರಗುಂಡ ಶ್ರೀ, ಪಡಸಾವಳಿ-ಉದಗೀರದ ಡಾ| ಶಂಭುಲಿಂಗ ಶ್ರೀ, ಜವಳಿ ಗಂಗಾಧರ ಶ್ರೀ, ಹರಿಹರದ ಕೊಟ್ರಮ್ಮ ತೋಟಪ್ಪ ಕೊಂಡಜ್ಜಿ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಗುರುಲಿಂಗಯ್ಯ ಹಿತ್ತಲಶಿರೂರ, ಶಿವಮೊಗ್ಗದ ಶಾಂತಾ ಆನಂದ ಭಕ್ತಿಗೀತೆ ಹಾಡಿದರು. ಹುಬ್ಬಳ್ಳಿಯ ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು. ಮೈಸೂರಿನ ಟಿ.ಎಚ್‌. ರೇಣುಕಾ ಪ್ರಸಾದ್‌ ನಿರೂಪಿಸಿದರು. ಬೆಳಗ್ಗೆ ವಸಂತೋತ್ಸವ ಜರುಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next