Advertisement

ನೆಮ್ಮದಿಗಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ

04:18 PM Aug 19, 2022 | Team Udayavani |

ಬಾಳೆಹೊನ್ನೂರು: ಮನುಷ್ಯನ ಬದುಕು ಹಲವಾರುಸಮಸ್ಯೆ-ಸವಾಲುಗಳಿಂದ ಅಶಾಂತಿಯಕಡಲಾಗಿದೆ. ಶಾಂತಿ-ಸಂತೃಪ್ತಿಗೆ ಧರ್ಮಾಚರಣೆ ಮೂಲ. ನೆಮ್ಮದಿಗಿಂತ ದೊಡ್ಡಸಂಪತ್ತು ಜೀವನದಲ್ಲಿ ಮತ್ತೂಂದು ಯಾವುದೂ ಇಲ್ಲವೆಂದುಶ್ರೀ ರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರಜಗದ್ಗುರುಗಳು ತಿಳಿಸಿದರು.

Advertisement

ಶ್ರೀ ರಂಭಾಪುರಿ ಪೀಠದಲ್ಲಿ ಜರುಗುತ್ತಿರುವ ಶ್ರಾವಣಪುರಾಣ ಪ್ರವಚನ ಹಾಗೂ 3ನೇ ಗುರುವಾರ ಧರ್ಮಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನನೀಡಿದರು.ಬಡವ ಮತ್ತು ಶ್ರೀಮಂತ ಇಬ್ಬರೂ ಸಂಪತ್ತನ್ನು ಉಂಡುಆನಂದಿಸಲಾರರು. ಬಡವ ಗಳಿಸಲು ಹೆಣಗಾಡಿದರೆಶ್ರೀಮಂತ ಉಳಿಸಲು ಒದ್ದಾಡುತ್ತಾನೆ.

ದೂರ- ದೂರನೆಟ್ಟ ಗಿಡಗಳು ಬೆಳೆಯುತ್ತಿದ್ದಂತೆ ಹತ್ತಿರವಾಗುತ್ತವೆ.ಆದರೆ ಮನುಷ್ಯ ಬೆಳೆಯುತ್ತಿದ್ದಂತೆ ಅವನ ಮನಸ್ಸುಗಳುದೂರವಾಗುತ್ತಾ ಹೋಗುತ್ತವೆ ಎಂದರು.ಗಂವ್ಹಾರ ಹಿರೇಮಠದ ವಿರೂಪಾಕ್ಷ ಶ್ರೀಗಳು ಶ್ರೀಜಗದ್ಗುರು ರೇಣುಕ ವಿಜಯ ಪುರಾಣದಲ್ಲಿ ಬರುವ ಶ್ರೀಜಗದ್ಗುರು ರೇಣುಕಾಚಾರ್ಯರ ಸಂಸ್ಕಾರಯುಕ್ತ ಬದುಕಿಗೆಜ್ಞಾನ ಬೋಧಾಮೃತ ಅವಶ್ಯಕವೆಂದರು.

Advertisement

Udayavani is now on Telegram. Click here to join our channel and stay updated with the latest news.

Next