Advertisement

ಅಲ್ಪಸಂಖ್ಯಾತ ಮಕ್ಕಳಿಗೆ ಮಾಹಿತಿ ಕೊರತೆ

05:44 PM Oct 04, 2019 | Team Udayavani |

ಬಾಳೆಹೊನ್ನೂರು: ಮಾಹಿತಿ ಕೊರತೆಯಿಂದಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಬೇಸರ ವ್ಯಕ್ತಪಡಿಸಿದರು.

Advertisement

ಪಿಸಿಬಿ ಆವರಣದಲ್ಲಿ ಇಮಾಮ್‌ ಎ-ಅಝಮ್‌ ಎಜುಕೇಷನ್‌ ಮತ್ತು ಚಾರಿಟೇಬಲ್‌ ಫಂಡ್‌ ಟ್ರಸ್ಟ್‌ ವತಿಯಿಂದ ಮಾಹಿತಿ ಸೇವಾ ಕೇಂದ್ರ ಹಾಗೂ ಅಲ್ಪಸಂಖ್ಯಾತರ ಸರ್ಕಾರಿ ಸೌಲಭ್ಯದ ಮಾಹಿತಿ ಮತ್ತು ಆನ್‌ ಲೈನ್‌ ಅಪ್ಲಿಕೇಶನ್‌ ಸೇವೆಗಳ ಬಗ್ಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಲ್ಪಸಂಖ್ಯಾತರಿಗಾಗಿ ಶಾದಿ ಮಹಲ್‌, ಜೈನ ಬಸದಿ, ಚರ್ಚ್‌, ಉನ್ನತ ಶಿಕ್ಷಣ ಸ್ವ ಉದ್ಯೋಗ, ಶಾದಿ ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದು, ಎಲ್ಲರೂ ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ವಿಜಯ ಮಾತೆ ದೇಗುಲದ ಧರ್ಮಗುರು ಲ್ಯಾನ್ಸಿ ಪಿಂಟೋ ಮಾತನಾಡಿ, ಧರ್ಮದ ತಳಹದಿಯಲ್ಲಿ ಶಿಕ್ಷಣ ಪಡೆದಲ್ಲಿ ವಿಶೇಷ ಜ್ಞಾನವಂತರಾಗಿ ಸಾಧನೆ ಮಾಡಬಹುದಾಗಿದೆ.

ಸೇವಾ ಕೇಂದ್ರದ ಅವಶ್ಯಕತೆ ಅನಿವಾರ್ಯವಾಗಿದ್ದು, ಮಾಹಿತಿ ಪಡೆದು ಯೋಜನೆಗಳ ಫಲವನ್ನು ಪಡೆಯುತ್ತಾರೆ. ಎಲ್ಲರೂ ಸಮಾಜಮುಖೀ ಚಿಂತನೆಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂದು ಸೇವಾ ಕೇಂದ್ರದವರಿಗೆ ಸಲಹೆ ನೀಡಿದರು. ಅಲ್ಪಸಂಖ್ಯಾತರ ಕಚೇರಿ ವಿಸ್ತರಣಾಧಿಕಾರಿ ರಾಕೇಶ್‌ ಮಾತನಾಡಿ, ಸರ್ಕಾರದಿಂದ ಲಭ್ಯವಾಗುವ ಅನುದಾನಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಸಿ.ಗೀತಾ ಮಾತನಾಡಿ, ಸರ್ಕಾರಿ ಯೋಜನೆಗಳು
ತ್ವರಿತವಾಗಿ ವಿದ್ಯಾರ್ಥಿ ಸಮುದಾಯಕ್ಕೆ ತಲುಪುತ್ತಿಲ್ಲ. ಕೆಲವೆಡೆ ದಾಖಲೆ ಕಡಿತ ವಿಲೇವಾರಿ ಆಗುವುದು ವಿಳಂಬವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು.

Advertisement

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ.ಎಂ.ಉಮೇಶ್‌ ಕಲ್ಮಕ್ಕಿ, ತಾಲೂಕು ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್‌ ಮಾತನಾಡಿದರು. ಜಾಮಿಯಾ ಮಸೀದಿಯ ಮೌಲಾನಖಾರಿ
ಗುಲಾಮ್‌ ಜೀಲಾನಿ, ಕಡ್ಲೆಮಕ್ಕಿ ಶರೀಯತ್‌ ಕಾಲೇಜಿನ ಹಾಮಿಂ ಶಿಹಾಬ್‌ ತಂಜ್ಞಾಲ್‌, ಶೌಖತ್‌ ಸಖಾಫಿ, ಜಾಮಿಯಾ ಮಸೀದಿ ಅಧ್ಯಕ್ಷ ಮಹಮ್ಮದ್‌ ಇಬ್ರಾಹಿಂ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್‌.ಚನ್ನಕೇಶವ್‌, ತಾಲೂಕು ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಮುಕ್ತರ ಅಹಮ್ಮದ್‌, ಜಿ.ಎಂ.ಶಬೀರ್‌, ಜಿಪಂ ಸದಸ್ಯೆ ಚಂದ್ರಮ್ಮ, ತಾಪಂ ಸದಸ್ಯ ಟಿ.ಎಂ.ನಾಗೇಶ್‌ ಸೇರಿದಂತೆ ಅಲ್ಪಸಂಖ್ಯಾತ ಸೇವಾ ಸಮಿತಿ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ಪಿಸಿಬಿ ಮಾಲಿಕ ಹಾಗೂ ಸೇವಾ ಸಂಸ್ಥೆ ಅಧ್ಯಕ್ಷ ಎಚ್‌.ಎಂ.ಸಲೀಮ್‌ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಜಾನ್‌ ವಿಲೆಧೀಡ್‌ ಡಿಸೋಜಾ ಸ್ವಾಗತಿಸಿದರು. ಗ್ರಾಪಂ ಅಧ್ಯಕ್ಷ ಮಹಮ್ಮದ್‌ ಹನೀಫ್‌ ಪ್ರಸ್ತಾವಿಕವಾಗಿ ಮಾತನಾಡಿದರು. ಇಬ್ರಾಹಿಂ ಶಫಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next