Advertisement

ಪಾಳುಬಿದ್ದ ಆರೋಗ್ಯ ಇಲಾಖೆ ವಸತಿ ಗೃಹ

01:16 PM Feb 09, 2020 | Naveen |

ಬಾಳೆಹೊನ್ನೂರು: ಪಟ್ಟಣದ ಸರ್ಕಾರಿ ಆಸ್ಪತ್ರೆ ನೌಕರರ ನಿವೇಶನಗಳು ಕುಸಿದು ಬೀಳುವ ಹಂತ ತಲುಪಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಳೇ ಆಸ್ಪತ್ರೆ ಹಿಂಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ 5 ವಸತಿ ಗೃಹಗಳಿದ್ದು, ಮೇಲುಸ್ತುವಾರಿ ಇಲ್ಲದೆ ಪಾಳು ಬಿದ್ದಿವೆ. ಕೊಪ್ಪ ರಸ್ತೆಯಲ್ಲಿ 2 ಕಟ್ಟಡಗಳಿದ್ದು, ಬೀಳುವ ಹಂತ ತಲುಪಿವೆ. ಒಂದು ಕಾಲದಲ್ಲಿ ವೈದ್ಯರು, ಸಿಬ್ಬಂದಿ ವಾಸಿಸುತ್ತಿದ್ದ ಮನೆಗಳು ಪಾಳು ಬಿದ್ದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಸುಣ್ಣದ ಗಾರೆ ಬಳಸಿ ನಿರ್ಮಿಸಿರುವ ಕಟ್ಟಡ ಗಟ್ಟಿಮುಟ್ಟಾಗಿದ್ದು, ಮೇಲ್ಛಾವಣಿ ಮರಮಟ್ಟುಗಳು ಗಟ್ಟಿಯಾಗಿವೆ. ರೀಪರ್‌ಗಳು ಮಾತ್ರ ಗೆದ್ದಲು ತಿಂದಿದ್ದು, ಹೆಂಚುಗಳು ಕೆಳಗೆ ಬೀಳುತ್ತಿವೆ. ಬಿ.ಕಣಬೂರು ಗ್ರಾಪಂನ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಈ ಬಗ್ಗೆ ಗಮನ ಹರಿಸದೇ ಇರುವುದು ನಿವೇಶನ ಪಾಳು ಬೀಳಲು ಕಾರಣವಾ ಗಿದೆ ಎಂದಿದ್ದಾರೆ.

ಇನ್ನು ಮುಂದಾದರೂ ನೆಲಹಾಸು, ಗೋಡೆ ಪ್ಲಾಸ್ಟರಿಂಗ್‌ ಹಾಗೂ ಮೇಲ್ಛಾವಣಿಗೆ ನೂತನ ಹೆಂಚುಗಳನ್ನು ಬಳಸಿ ದುರಸ್ತಿ ಮಾಡಿದರೆ ವಸತಿ ಗೃಹಗಳು ಉತ್ತಮ ಸ್ಥಿತಿಯಲ್ಲಿ ಕಾಣ ಬಹುದಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಕಟ್ಟಡ ದುರಸ್ತಿ ಮಾಡಿಸಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next