ಬಾಳೆಹೊನ್ನೂರು: ಸಮೀಪದ ದೇವಗೋಡು ಗ್ರಾಮದ ಕೆಮ್ಮಣ್ಣು ಕಾಮಧೇನು ಗೋ ಸೇವಾ ಕೇಂದ್ರಕ್ಕೆ ಬಾಳೆಹೊನ್ನೂರಿನ ಆಸರೆ ಯುವಕರ ತಂಡದಿಂದ ರೂ.10
ಸಾವಿರ ಮೌಲ್ಯದ ಮೇವನ್ನು ದಾನವಾಗಿ ನೀಡಲಾಯಿತು.
ಗೋ ಶಾಲೆಗೆ ಮೇವು ಹಸ್ತಾಂತರ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಶಶಾಂಕ್ ಹೇರೂರು ಮಾತನಾಡಿ, ಕೊರೊನಾ ಸೋಂಕಿನ
ಹಿನ್ನೆಲೆಯಲ್ಲಿ ಆಸರೆ ತಂಡದ ಸಮಾನ ಮನಸ್ಕ ಯುವಕರು ಒಗ್ಗೂಡಿ, ಮನುಷ್ಯ ಫಲಾನುಭವಿಗಳ ಜೊತೆಗೆ ಪ್ರಾಣಿ ಸಂಕುಲದ ಕುರಿತು ಕಾಳಜಿ ವಹಿಸಿ ಮೇವು ದಾನ ನೀಡುತ್ತಿದ್ದೇವೆ. ನಮ್ಮ ಈ ಕಾರ್ಯ ಸರ್ಕಾರಕ್ಕೆ ಮೇಲ್ಪಂಕ್ತಿಯಾಗಬೇಕಿದ್ದು, ರಾಜ್ಯದಲ್ಲಿರುವ 200ಕ್ಕೂ ಅಧಿ ಕ ಗೋಶಾಲೆಗಳಿಗೆ ಸಹಾಯ ನೀಡಬೇಕು ಎಂದರು.
ಗೋ ಶಾಲಾ ಅಧ್ಯಕ್ಷ ನಾಗೇಶ್ ಆಂಗೀರಸ ಮಾತನಾಡಿ, ಹಿಂದೂಪರ ಸಂಘಟನೆಯ ಕಾರ್ಯಕರ್ತರ ಈ ಕಾರ್ಯ ಸರ್ಕಾರ, ಸಮಾಜ ಹಾಗೂ ಮಠ ಮಾನ್ಯಗಳಿಗೆ ಮೇಲ್ಪಂಕ್ತಿಯಾಗಿದ್ದು, ಮುಂದಿನ ತಲೆಮಾರು ಭಾರತವನ್ನು ಹೇಗೆ ಕಟ್ಟಬೇಕು ಎಂದು ತಿಳುವಳಿಕೆ ನೀಡಿದಂತೆ ಆಗಿದೆ ಎಂದರು. ಆಸರೆ ತಂಡದ ಅಧ್ಯಕ್ಷ ರಮೇಶ್ ಗಡಿಗೇಶ್ವರ, ಸಂದೀಪ್ ಶೆಟ್ಟಿ, ಸಂತೋಷ್ ಶೆಟ್ಟಿ, ಮಧು ಆಡುವಳ್ಳಿ, ಕಾರ್ತಿಕ್, ಲೋಹಿತ್ ಶೆಟ್ಟಿ, ಶ್ರೀರಾಮ್ ಆಂಗೀರಸ, ಸುಮಾ ನಾಗೇಶ್ ಇದ್ದರು.