Advertisement

Balehonnur;ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ: Video Viral

04:22 PM Sep 20, 2023 | Team Udayavani |

ಚಿಕ್ಕಮಗಳೂರು : ಡಿ ಗ್ರೂಪ್ ಮಹಿಳಾ ಸಿಬಂದಿಯನ್ನು ರೂಂನಲ್ಲಿ ಕೂಡಿ ಹಾಕಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದಲ್ಲಿ ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.ಥಳಿಸಿರುವ ವಿಡಿಯೋ ಚಿತ್ರೀಕರಿಸಲಾಗಿದ್ದು, ವೈರಲ್ ಆಗಿದೆ.

Advertisement

ಬಾಳೆಹೊನ್ನೂರು ಸರ್ಕಾರಿ ಅಸ್ಪತ್ರೆ ವಸತಿ ಗೃಹದಲ್ಲಿ, ರೂಂನಲ್ಲಿ ಕೂಡಿಹಾಕಿಕೊಂಡು ಏನು ಮಾಡುತ್ತಿದ್ದಿ ಎಂದು ಪ್ರಶ್ನಿಸಿ ಮಹಿಳೆಯ ಸಂಬಂಧಿಕರು, ಸ್ಥಳೀಯರು ಆಕ್ರೋಶಗೊಂಡು ತಾಲೂಕು ವೈದ್ಯಾಧಿಕಾರಿ ಡಾ.ಎಲ್ಡೋಸ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಎನ್.ಆರ್.ಪುರ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಎಲ್ಡೋಸ್ ವಿರುದ್ದ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಲ್ಡೋಸ್ ಈ ಹಿಂದೆ ನರ್ಸ್ ಕೆನ್ನೆಗೆ ಹೊಡೆದು ಅಮಾನತ್ತಾಗಿದ್ದು, ಈ ಹಿಂದೆಯೂ ಹಲವು ಆರೋಪಗಳು ಕೇಳಿ ಬಂದಿದ್ದವು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next