Advertisement
ಗೌರವಧನ ಹೆಚ್ಚಳಹೆಣ್ಣು ಮಕ್ಕಳ ಕಲ್ಯಾಣದ ದೃಷ್ಟಿಯಿಂದ ಪ್ರಧಾನಿ ಮೋದಿಯವರು ಬೇಟಿ ಪಢಾವೋ ಬೇಟಿ ಬಚಾವೋದಂತಹ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರಕಾರದಿಂದಲೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲಾಗಿದೆ. ರಾಜ್ಯ ಸರಕಾರವೂ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಬಜೆಟ್‌ನಲ್ಲಿ ಮಾಡಲಾದ ಈ ಘೋಷಣೆ ಅನುಷ್ಠಾನಕ್ಕೆ ಬರಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದರು.
Related Articles
ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್. ಮಾತನಾಡಿ, ಸುಮಾರು 45 ವರ್ಷಗಳಿಂದ ಅಂಗನವಾಡಿ ನೌಕರರಿಗೆ ಗೌರವಧನ ಮಾತ್ರ ಸಿಗುತ್ತಿದೆ. ಹಲವು ರೀತಿಯ ಹೋರಾಟ ಬಳಿಕ 150 ರೂ.ಗಳಿಂದ 8 ಸಾವಿರ ರೂ.ಗೆ ಹಾಗೂ 50 ರೂ.ನಿಂದ 4 ಸಾವಿರ ರೂ.ಗೆ ಗೌರವಧನ ಹೆಚ್ಚಳವಾಗಿದೆ. ಆದರೆ ದುಪ್ಪಟ್ಟು ಕೆಲಸ ಮಾಡುವ ನಮಗೆ ಕನಿಷ್ಠ ವೇತನ ಜಾರಿಗೊಳಿಸಿ ಎನ್ನುವ ಆಗ್ರಹ ಮಾಡುತ್ತಿದ್ದೇವೆ ಎಂದರು.
Advertisement
ಲಾಭದಲ್ಲಿ ಸಹಕಾರ ಸಂಘಸಂಘದ ಮೂಲಕ ಸಹಕಾರ ಸಂಘವನ್ನು 4 ವರ್ಷಗಳ ಹಿಂದೆ ಅತ್ಯಂತ ಕಟ್ಟಪಟ್ಟು ಮಂಗಳೂರಿನಲ್ಲಿ ಆರಂಭಿಸಲಾಗಿದೆ. ಈ ವರ್ಷದಿಂದ ಲಾಭದಲ್ಲಿ ಮುನ್ನಡೆಯುತ್ತಿದೆ.
ಮುಂದೆ ಪುತ್ತೂರಿನಲ್ಲೂ ಶಾಖೆ ಆರಂಭಿಸುವ ಚಿಂತನೆ ಇದೆ. ಜತೆಗೆ ಸಂಘದ ಸದಸ್ಯರಿಗೆ ನೆರವಾಗಲು ಟ್ರಸ್ಟ್ ಆರಂಭಿಸಲಾಗಿದೆ. ಅಂಗನವಾಡಿಯ ನಿವೃತ್ತರಿಗೆ ಪಿಂಚಣಿ ಸಿಗಬೇಕು ಎನ್ನುವ ಹೋರಾಟ ಕೈಗೆತ್ತಿಕೊಂಡಿದ್ದೇವೆ ಎಂದರು. ಸಮ್ಮಾನ, ದೇಣಿಗೆ ಹಸ್ತಾಂತರ
ಪುತ್ತೂರಿನಲ್ಲಿ ಸಿಡಿಪಿಒ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಶಾಂತಿ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ನಿವೃತ್ತಿ ಹೊಂದಿದ 5 ಅಂಗನವಾಡಿ ಕಾರ್ಯಕರ್ತೆಯವರು ಹಾಗೂ 10 ಸಹಾಯಕಿಯರನ್ನು ಗೌರವಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸಂಧ್ಯಾ ಅವರು ಸಂಘಕ್ಕೆ ದೇಣಿಗೆಯನ್ನು ನೀಡಿದರು. ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘದ ತಾಲೂಕು ಅಧ್ಯಕ್ಷೆ ಪುಷ್ಪಾ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂಘದ ಜಿಲ್ಲಾಧ್ಯಕ್ಷೆ ಲತಾ ಅಂಬೆಕಲ್ಲು, ತಾಲೂಕು ಉಪಾಧ್ಯಕ್ಷೆ ಮಾಲಿನಿ, ಪುತ್ತೂರು ಪ್ರಭಾರ ಸಿಡಿಪಿಒ ಭಾರತಿ, ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಉಪಾಧ್ಯಕ್ಷೆ ವಿಜಯೇಶ್ವರಿ ಗೌಡ ಸ್ವಾಗತಿಸಿ, ಪ್ರಶಸ್ತಿ ವಿಜೇತ ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ನಿರ್ವಹಿಸಿದರು. ಕಾರ್ಯಕರ್ತೆಯರು ಕಣ್ಣೀರು ಸುರಿಸಿದರು…
ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ನೌಕರರಿಗೆ ಗೌರವ ಧನದ ನೆಲೆಯಲ್ಲಿ ಕಡಿಮೆ ವೇತನ ನೀಡುತ್ತಿರುವ, ಹಲವು ರೀತಿಯ ಒತ್ತಡದ ಮಧ್ಯೆ ಕೆಲಸ ನಿರ್ವಹಿಸಬೇಕಾದ ಸ್ಥಿತಿಗಳನ್ನು ಹೇಳಿಕೊಂಡು ಅಂಗನವಾಡಿ ಕಾರ್ಯಕರ್ತೆಯರು ಕಣ್ಣೀರು ಸುರಿಸಿದರು. ಜಿಲ್ಲಾ ಉಪಾಧ್ಯಕ್ಷೆ ವಿಜಯೇಶ್ವರಿ, ಮಾಜಿ ಅಧ್ಯಕ್ಷೆ ಶ್ರೀಲತಾ ರಾವ್, ಕಾರ್ಯಕರ್ತೆ ರಾಜೀವಿ ಕುಂಬ್ರ ಅನಿಸಿಕೆ ಹಂಚಿಕೊಂಡರು. ಕಟ್ಟಡಕ್ಕೆ ಮನವಿ
ಪುತ್ತೂರಿನ ಹಾಲಿ ಸ್ತ್ರೀಶಕ್ತಿ ಭವನವು ನಗರದಿಂದ ದೂರ ಇದ್ದು, ಅಲ್ಲಿಗೆ ತೆರಳಲು ಕಷ್ಟವಾಗುತ್ತಿದೆ. ಸ್ವಂತ ಕಟ್ಟಡವನ್ನು ನಗರದೊಳಗೆ ಮಾಡಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.