Advertisement

ಬಾಳೆಹೊನ್ನೂರು: ಬಸ್‌ ನಿಲ್ದಾಣ ಆವರಣದಲ್ಲಿ ಕಾರು ಪಾರ್ಕಿಂಗ್‌

08:28 AM May 21, 2019 | Suhan S |

ಬಾಳೆಹೊನ್ನೂರು: ಪಟ್ಟಣದ ಬಸ್‌ ನಿಲ್ದಾಣದ ಆವರಣದಲ್ಲಿ ಪ್ರತಿನಿತ್ಯ ಕಾರುಗಳನ್ನು ಪಾರ್ಕಿಂಗ್‌ ಮಾಡುವುದರಿಂದ ಬಸ್‌ ನಿಲುಗಡೆಗೆ ಅಡ್ಡಿಯಾಗಿದೆ.

Advertisement

ಈ ಹಿಂದೆ ರಾಜ್ಯಸಭಾ ಸದಸ್ಯ ಜಯರಾಮ್‌ ರಮೇಶ್‌, ಬಸ್‌ ನಿಲ್ದಾಣ ಕಾಂಕ್ರೀಟ್ ಕಾಮಗಾರಿಗೆ 25 ಲಕ್ಷ ರೂ. ಬಿಡುಗಡೆ ಮಾಡಿದ್ದು, ಶೇ.40ರಷ್ಟು ಕಾಮಗಾರಿ ಮಾಡಲಾಗಿದೆ. ಕಾಂಕ್ರೀಟ್ ಮಾಡಿದ ಸ್ಥಳದಲ್ಲೇ ಕಾರುಗಳನ್ನು ಪಾರ್ಕ್‌ ಮಾಡುತ್ತಿರುವ ಹಿನ್ನಲೆಯಲ್ಲಿ ಬಸ್‌ಗಳು ದುರಸ್ತಿ ಕಾಣದ ಹೊಂಡಗುಂಡಿ ಬಿದ್ದಿರುವ ಸ್ಥಳದಲ್ಲೇ ನಿಲ್ಲಸಬೇಕಾಗಿದೆ.

ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬಸ್‌ಗಳನ್ನು ಹೊರತುಪಡಿಸಿ ಬೇರೆ ವಾಹನಗಳಿಗೆ ಪ್ರವೇಶ ಇಲ್ಲ ಎಂದು ಸೂಚನಾ ಫಲಕ ಅಳವಡಿಸಲಾಗಿದೆ. ಆದರೆ ಕಾನೂನು ಪಾಲನೆಯಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹುಸಿಯಾದ ಭರವಸೆ: ರಾಜ್ಯಸಭಾ ಸದಸ್ಯರಾದ ಜಯರಾಮ್‌ ರಮೇಶ್‌ ಅವರು ನೀಡಿದ ಅನುದಾನದಲ್ಲಿ ಕಾಂಕ್ರೀಟಿಕರಣ ಮಾಡಿರುವುದನ್ನು ಪರಿಶೀಲಿಸಲು ಬಂದಾಗ ಇನ್ನೂ 25 ಲಕ್ಷ ರೂ. ಅನುದಾನ ಕೊಡಿಸುವುದಾಗಿ ತಿಳಿಸಿ ಎರಡು ವರ್ಷ ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆಯಾಗದೆ ಇರುವ ಹಿನ್ನ್ನೆಲೆಯಲ್ಲಿ ಬಸ್‌ ನಿಲ್ದಾಣ ಅಭಿವೃದ್ಧಿಯಾಗಲೇ ಇಲ್ಲ. ಜಿಲ್ಲೆಯಲ್ಲೇ ಅತೀ ದೊಡ್ಡ ಪಂಚಾಯತ್‌ ಎಂದು ಹೆಗ್ಗಳಿಕೆ ಪಡೆದಿರುವ ಬಿ.ಕಣಬೂರು ಗ್ರಾಪಂ ಕೂಡಲೇ ಅಭಿವೃದ್ಧಿಪಡಿಸಬೇಕಾಗಿದೆ ಪ್ರಸಿದ್ಧ ಹೊರನಾಡು, ಕಳಸ, ಶೃಂಗೇರಿ, ನರಸಿಂಹರಾಜಪುರ ಯಾತ್ರ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಬಸ್‌ ನಿಲ್ದಾಣ ಕೇಂದ್ರವಾಗಿದ್ದು, ಕೂಡಲೇ ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next