Advertisement

ಬಾಲಕೃಷ್ಣಾನ ಮುದ್ದಾಡಿದ ಯಶೋದೆಯರು

03:31 PM Aug 15, 2017 | Team Udayavani |

ರಾಯಚೂರು: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಯಾದವ ಸಮಾಜ ಸೇರಿದಂತೆ ಸಮಾಜದ ಎಲ್ಲ ಬಾಂಧವರು ಸೋಮವಾರ ಜಿಲ್ಲಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು. ಈ ನಿಮಿತ್ತ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ, ಮಕ್ಕಳಿಗೆ ಕೃಷ್ಣೆ ರಾಧೆಯರ ವೇಷ ಧರಿಸಿ ಸಂಭ್ರಮಿಸಿದರು. ನಗರದ ವಿವಿಧ ದೇವಸ್ಥಾನಗಳಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಶಾಲೆಗಳಲ್ಲಿ ಮಕ್ಕಳಿಗೆ ಶ್ರೀಕೃಷ್ಣನ ಉಡುಗೆ ತೊಡುವ ಸ್ಪರ್ಧೆ ಆಯೋಜಿಸಲಾಗಿತ್ತು. ಯಾದವ ಸಮಾಜದ ಸಹಯೋಗದಲ್ಲಿ
ಜಿಲ್ಲಾಡಳಿತದಿಂದ ಬೃಹತ್‌ ಮೆರವಣಿಗೆ ನಡೆಸಲಾಯಿತು. ನಗರದ ಜಿಲ್ಲಾ ಯಾದವ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಕೃಷ್ಣ ಜಯಂತ್ಯುತ್ಸವ ಆಯೋಜಿಸಲಾಗಿತ್ತು. ಸಮಾರಂಭ ಉದ್ಘಾಟಿಸಿ
ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಠ, ಶ್ರೀಕೃಷ್ಣ ಜಯಂತಿ ಕೇವಲ ಯಾದವ ಕುಲಕ್ಕೆ ಸೀಮಿತವಲ್ಲ. ಇತಿಹಾಸದ ಪುಟಗಳನ್ನು ನೋಡಿದಾಗ ಧರ್ಮರಕ್ಷಣೆಗಾಗಿ ಶ್ರೀಕೃಷ್ಣ ಅನೇಕ ಅವತಾರಗಳನ್ನೆತ್ತಿದ್ದಾನೆ. ಇಂದಿನ ದಿನಗಳಲ್ಲಿ ಶ್ರೀಕೃಷ್ಣ ಮತ್ತೂಮ್ಮೆ ಜನಿಸಬೇಕಿದೆ. ಶ್ರೀಕೃಷ್ಣ ಮಹಾಭಾರತದಲ್ಲಿ ಅರ್ಜುನನ ಸಾರಥಿಯಾಗಿದ್ದಾಗ ಮಾಡಿದ ಗೀತಬೋಧನೆಯಲ್ಲಿ ಮಾನವ ಕುಲಕ್ಕೆ ಸಾಕಷ್ಟು ಸಂದೇಶಗಳನ್ನು ನೀಡಿದ್ದು, ಇಂದಿಗೂ ಅವು ಪ್ರಸ್ತುತ ಎನಿಸುತ್ತವೆ ಎಂದರು ಯಾದವ ಕುಲದವರು ಶ್ರಮಜೀವಿಗಳು. ರಾಜ್ಯ
ಸರ್ಕಾರ ಹಾಲು ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಪ್ರತಿ ಲೀ.ಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ. ಹೈನುಗಾರಿಕೆ
ಅಭಿವೃದ್ಧಿಯಾದರೆ ಆರ್ಥಿಕ, ಸಾಮಾಜಿಕ ಜೀವನ ಸುಧಾರಣೆ ಸಾಧ್ಯ. ಆದರೆ, ಅದೇ ಹಸುವನ್ನು ಮುಂದಿಟ್ಟುಕೊಂಡು ರಾಷ್ಟ್ರ
ವ್ಯಾಪಿಯಾಗಿ ದಂಗೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಮಕ್ಕಳು ಅಧಿಕಾರದ ಚುಕ್ಕಾಣಿ ಹಿಡಿದು ಯಾವುದೇ
ಜಾತಿ ಜನಾಂಗಕ್ಕೆ ಸೀಮಿತವಾಗದೆ ನಾವು ಮಾನವರು ಒಂದೇ ಎನ್ನುವ ಭಾವನೆಯಿಂದ ಬಾಳಬೇಕು. ನಮ್ಮಲ್ಲಿಯೇ ನಮ್ಮ
ನಾಯಕರನ್ನು ಆಯ್ಕೆ ಮಾಡಿಕೊಂಡು ಸಂವಿಧಾನ ಬದ್ದವಾಗಿ ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕು ಎಂದರು. ನಗರ ಶಾಸಕ ಡಾ| ಎಸ್‌.ಶಿವರಾಜ ಪಾಟೀಲ ಮಾತನಾಡಿ, ಶ್ರೀಕೃಷ್ಣನ ನೆನೆದರೆ ಕಷ್ಟಗಳು ದೂರವಾಗುತ್ತವೆ. ಶ್ರೀಕೃಷ್ಣನನ್ನು ಇಡೀ ವಿಶ್ವವೇ ಆರಾ ಧಿಸುತ್ತಿದೆ ಎಂದರು. ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ವಕೀಲರಾದ ಮಾರೆಪ್ಪ, ಕೆ.ಶಾಂತಪ್ಪ, ಯಂಕಣ್ಣ ಯಾದವ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿಂದಪ್ಪ, ನಗರಸಭೆ ಸದಸ್ಯ ಹರೀಶನಾಡಗೌಡ, ಯಾದವ ಸಂಘದ ಅಧ್ಯಕ್ಷ ಕೆ.ಹನುಮಂತಪ್ಪ,
ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ, ಅಕ್ಬರ್‌ ಅಲಿ ಸೈಯ್ಯದ್‌ ಸೋಹೆಲ್‌, ಡಾ| ವೆಂಕಟರಾವ್‌ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. ಅದ್ಧೂರಿ ಮೆರವಣಿಗೆ: ನಗರದ ಮಹಿಳಾ ಸಮಾಜದಿಂದ ಆಯೋಜಿಸಿದ್ದ ಶ್ರೀಕೃಷ್ಣ ಭಾವಚಿತ್ರದ ಮೆರೆವಣಿಗೆಗೆ
ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಠ ಸೋಮವಾರ ಬೆಳಗ್ಗೆ ಚಾಲನೆ ನೀಡಿದರು. ಮೆರೆವಣಿಗೆಯುದ್ದಕ್ಕೂ ಮಹಿಳೆಯರಿಂದ ದಾಂಡಿಯಾ ನೃತ್ಯ, ಕೋಲಾಟ ಪ್ರದರ್ಶನ ನಡೆಯಿತು. ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಗಮನ ಸೆಳೆದವು. ತಾಯಂದಿರು ಮಕ್ಕಳಿಗೆ ರಾಧಾ ಕೃಷ್ಣರ ವೇಷಭೂಷಣ ತೊಡಿಸಿದ್ದರು. ತೀನ್‌ಕಂದಿಲ್‌ ವೃತ್ತ, ನೇತಾಜಿ ವೃತ್ತ, ಹನುಮಾನ್‌ ಟಾಕೀಜ್‌ ಮಾರ್ಗವಾಗಿ ಯಾದವ ಭವನದವರೆಗೆ ಮೆರವಣಿಗೆ ನಡೆಸಲಾಯಿತು. ಗೀತಾ ಮಂದಿರದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ
ಮಾಡಲಾಗಿತ್ತು. ನಗರದ ಇಸ್ಕಾನ್‌ ದೇವಸ್ಥಾನದಲ್ಲೂ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪೂಜಾ ಕಾರ್ಯಕ್ರಮಗಳನ್ನು
ಆಯೋಜಿಸಲಾಗಿತ್ತು

Advertisement
Advertisement

Udayavani is now on Telegram. Click here to join our channel and stay updated with the latest news.

Next