Advertisement

ಇಸ್ರೇಲ್‌ನಿಂದ ಬಂತು ಬಾಲಕೋಟ್‌ ಬಾಂಬ್‌!

10:28 AM Sep 17, 2019 | sudhir |

ನವದೆಹಲಿ: ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರರ ನೆಲೆಗಳ ಮೇಲೆ ಐಎಎಫ್ದಾಳಿ ನಡೆಸುವಲ್ಲಿ ಬಳಸಿದ್ದ ಸ್ಪೈಸ್‌ 2000 ಬಾಂಬ್‌ಗಳ ಮೊದಲ ಕಂತು ಇಸ್ರೇಲ್‌ನಿಂದ ಭಾರತಕ್ಕೆ ಆಗಮಿಸಿದೆ. ಕಳೆದ ಜೂನ್‌ನಲ್ಲಿ ರಕ್ಷಣಾ ಪಡೆಯು ತುರ್ತು ಖರೀದಿ ಒಪ್ಪಂದ ಮಾಡಿಕೊಂಡು, 100 ಬಾಂಬ್‌ಗಳನ್ನು ಖರೀದಿಸಿತ್ತು. ಅದರ ಮೊದಲ ಕಂತಿನಲ್ಲಿ ಈಗ ಮಧ್ಯ ಪ್ರದೇಶದ ಗ್ವಾಲಿಯರ್‌ ವಾಯುನೆಲೆಗೆ ಬಾಂಬ್‌ಗಳು ಬಂದು ತಲುಪಿವೆ.

Advertisement

ಮಿರೇಜ್‌ 2000 ಯುದ್ಧ ವಿಮಾನಗಳಿಗೆ ಈ ಬಾಂಬ್‌ಗಳನ್ನು ಅಳವಡಿಸಬಹುದಾ ಗಿದ್ದು, ಗ್ವಾಲಿಯರ್‌ನಲ್ಲೇ ಮಿರೇಜ್‌ ನೆಲೆಯೂ ಇದೆ.

ಈ ಹೊಸ ಬಾಂಬ್‌ಗಳು ಇಡೀ ಕಟ್ಟಡವನ್ನು ಸಂಪೂರ್ಣ ವಾಗಿ ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿಂದೆ ಬಾಲಕೋಟ್‌ನಲ್ಲಿ ದಾಳಿ ನಡೆಸಿದ ಬಾಂಬ್‌ಗಳು, ಕಟ್ಟಡದ ಛಾವಣಿಯನ್ನು ರಂಧ್ರ ಮಾಡಿ ಒಳಹೊಕ್ಕು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದವು. ಮೂಲ ಗಳ ಪ್ರಕಾರ, ಪ್ರಸ್ತುತ 100 ಬಾಂಬ್‌ಗಳನ್ನು ಇಸ್ರೇಲ್‌ ಪೂರೈಸಿದ ನಂತರ, ಮತ್ತೂಂದು ಸುತ್ತಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಬಾಂಬ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next