ಮುಂಬಯಿ: ಮೀರಾ ರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆ. 13 ರಂದು ಪೂರ್ವಾಹ್ನ 10 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪರಮಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಜರಗಿತು.
ಬೆಳಗ್ಗೆ 10 ರಿಂದ ಲಕ್ಷ ತುಳಸಿ ಅರ್ಚನೆಯು ಮಧ್ಯಾಹ್ನ 12 ರ ವರೆಗೆ ನಡೆಯಿತು. ಆನಂತರ ಸಂಜೆ 5 ರಿಂದ ರಾತ್ರಿ 12 ರವರೆಗೆ ಮಠದ ದೇವರ ಸನ್ನಿಧಿಯಲ್ಲಿ ದೇವರ ಸಂಕೀರ್ತನೆ, ಭಜನ ಕಾರ್ಯಕ್ರಮ ಹಾಗೂ ಮಹಾಮಂಗಳಾರತಿಯನ್ನು ಆಯೋಜಿಸಲಾಗಿತ್ತು.
ಮಧ್ಯರಾತ್ರಿ 12.30 ರಿಂದ ಶ್ರೀದೇವರಿಗೆ ಮಹಾಪೂಜೆ, ಚಂದ್ರೋದಯದ ಆನಂತರ ಶ್ರೀ ಕೃಷ್ಣಘÂì ಪ್ರದಾನ ನಡೆಯಿತು. ಸೆ. 14ರಂದು ಬೆಳಗ್ಗೆ ವಿಟ್ಲಪಿಂಡಿ ಮೊಸರು ಕುಡಿಕೆ ಸಮಾರಂಭ ಜರಗಿತು.
ಆನಂತರ ಶ್ರೀಕೃಷ್ಣ ವೇಷ ಸ್ಪರ್ಧೆಯು ಪೂರ್ವಾಹ್ನ 10 ರಿಂದ ಪ್ರಾರಂಭಗೊಂಡು ಮಧ್ಯಾಹ್ನ 12ಕ್ಕೆ ಸಮಾಪ್ತಿಗೊಂಡಿತು.
ಇದೇ ಸಂದರ್ಭದಲ್ಲಿ ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಹಾಗೂ ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು.
ತುಳು-ಕನ್ನಡಿಗ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು, ಅನ್ಯಭಾಷಿಗ ಭಕ್ತಾಭಿಮಾನಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.