Advertisement
ಆರೋಗ್ಯ ಕೇಂದ್ರವೊಂದರ ದಾದಿ ಹಾಗೂ ಆಕೆಯ ಪತಿ ವಿರುದ್ಧ ಬಾಲಚಂದ್ರ ಕಳಗಿ ಪತ್ನಿ ದೂರು ದಾಖಲಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಆರಂಭದಲ್ಲಿ ಈ ದಂಪತಿ ವಿರುದ್ಧ ಮೃತರ ಚಿಕ್ಕಪ್ಪ ನೀಡಿದ ದೂರು ಆಧರಿಸಿ ಪೊಲೀಸರು ವಿಚಾರಣೆ ನಡೆಸಿ, ಪ್ರಕರಣದಲ್ಲಿ ಇವರಿಬ್ಬರ ಪಾತ್ರವಿಲ್ಲ ಎಂದು ಹೇಳಿದ್ದರು. ಈಗ ಮೃತರ ಪತ್ನಿ ನೀಡಿದ ದೂರಿನನ್ವಯ ಮತ್ತೆ ತನಿಖೆಗೆ ಮುಂದಾಗಿದ್ದಾರೆ. ಸಾಲಕ್ಕೆ ನೆರವು?
ಕಳಗಿ ಪತ್ನಿ ನೀಡಿದ ದೂರಿನಲ್ಲಿ, ಶಂಕಿತ ದಂಪತಿಗೆ ತನ್ನ ಪತಿ ಆರ್ಥಿಕ ನೆರವಿನೊಂದಿಗೆ ಭಾರೀ ಮೊತ್ತದ ಬ್ಯಾಂಕ್ ಸಾಲ ಒದಗಿಸಿರುವ ಬಗ್ಗೆ ಉಲ್ಲೇ ಖೀಸಿದ್ದಾರೆ ಹಾಗೂ ಹೊಸ ಕಾರು ಮತ್ತು ಬಂಗಲೆಗೆ ಸುಳ್ಯ ಬ್ಯಾಂಕೊಂ ದರಿಂದ ಸಾಲ ಕೊಡಿಸಿರುವ ಬಗ್ಗೆಯೂ ಶಂಕೆ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಬಂಧಿತ ಆರೋಪಿಗಳ ಜತೆ ಈ ದಂಪತಿಗೆ ಸಂಬಂಧವಿದೆಯೇ ಎನ್ನುವುದು ಇನ್ನಷ್ಟೆ ತಿಳಿದು ಬರಬೇಕಿದೆ.
Related Articles
ಕೊಲೆ ಪ್ರಕರಣದಲ್ಲಿ ಸಂಪಾಜೆಯ ಕೆ. ಹರಿಪ್ರಸಾದ್ ಹಾಗೂ ಚೆಂಬುವಿನ ಸಂಪತ್ ಕುಮಾರ್ ಹಾಗೂ ಜಯನ್ ಅಲಿಯಾಸ್ ಜಗ್ಗು ಪ್ರಮುಖ ಆರೋಪಿಗಳು. ಮಾ.19ರಂದು ಸಂಪತ್ ಕುಮಾರ್, ಕಳಗಿ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದ. ಮಡಿಕೇರಿ ಸುದರ್ಶನ ವೃತ್ತದ ಬಳಿ ಕಳಗಿ ಕಾರು ನಿಲ್ಲಿಸಿ ಇನ್ನೊಂದು ಕಾರಿನಲ್ಲಿ ಅರಸಿಕಟ್ಟೆಗೆ ತೆರಳಿದ್ದರು. ಅವರು ಹಿಂದಿರುಗುವ ತನಕ ಸಂಪತ್ ಇಲ್ಲೇ ಕಾಯುತ್ತಿದ್ದ ದೃಶ್ಯ ಸಿಸಿಕೆಮರಾದಲ್ಲಿ ಸೆರೆಯಾಗಿದೆ. ಸುಪಾರಿ ಪಡೆದಿದ್ದ ಲಾರಿ ಚಾಲಕ ಜಯನ್ ಮದೆನಾಡು ಬಳಿ ಕಾದು ಕುಳಿತಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
Advertisement
ಮಡಿಕೇರಿಯಿಂದ ಮಂಗಳೂರು ಮಾರ್ಗವಾಗಿ ತೆರಳುವ ಕಳಗಿಯನ್ನು ಮದೆನಾಡು ಬಳಿ ಲಾರಿ ಢಿಕ್ಕಿ ಹೊಡೆಸಿ ಕೊಲ್ಲುವ ಪ್ಲ್ರಾನ್ ರೂಪಿಸಲಾಗಿತ್ತು. ಕಳಗಿ ಮಂಗಳೂರು ರಸ್ತೆಯಲ್ಲಿ ಸಾಗದೆ ಮೂರ್ನಾಡು ಮಾರ್ಗದಲ್ಲಿ ತೆರಳಿದ್ದರು. ಇದರಿಂದ ಸ್ಥಳ ಬದಲಾಯಿಸುವಂತೆ ಸಂಪತ್ ಲಾರಿ ಚಾಲಕ ಜಯನ್‌ಗೆ ಫೋನ್ ಮೂಲಕ ತಿಳಿಸಿದ್ದ ಎನ್ನಲಾಗಿದೆ. ಕಳಗಿ ಸಾವು ಖಚಿತವಾದ ಬಳಿಕ ಆರೋಪಿ ಸಂಪತ್ ತನ್ನ ಮೊಬೈಲ್ ಸಿಮ್ ಅನ್ನು ತೆಗೆದು ಎರಡನೇ ಮೊಣ್ಣಂಗೇರಿ ಬಳಿ ಎಸೆದಿದ್ದಾನೆ.
30 ಲ.ರೂ.ಡೀಲ್?ಕಳಗಿ ಕೊಲೆಗೆ ಸಂಪತ್ ಕುಮಾರ್ 30 ಲ.ರೂ. ಗಳ ಸುಪಾರಿಯನ್ನು ಹರಿ ಪ್ರಸಾದ್‌ಗೆ ನೀಡಿದ್ದ. ಹರಿ ಪ್ರಸಾದ್ 3 ಲ.ರೂ.ಗಳಿಗೆ ಜಯನ್ ಗೆ ಈ ಕೊಲೆ ಜವಾಬ್ದಾರಿಯನ್ನು ಒಪ್ಪಿಸಿದ್ದ ಎಂದು ಹೇಳಲಾಗುತ್ತಿದ್ದು, ಕೊಲೆಯ ಮೇಲುಸ್ತುವಾರಿಯನ್ನು ಸ್ವತಃ ಸಂಪತ್ ನೋಡಿ ಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ. ಅದಿನ್ನೂ ಖಚಿತವಾಗಿಲ್ಲ.