Advertisement
ಶ್ರೀಶೈಲ ರಾಯಪ್ಪ ತೋಳಮಟ್ಟಿ ಜಮ್ಮು-ಕಾಶ್ಮೀರದಲ್ಲಿ ಮೇ 22ರಂದು ಹುತಾತ್ಮರಾಗಿರುವ ಸುದ್ದಿ ಕೇಳಿದ ಕುಟುಂಬ ಸದಸ್ಯರಿಗೆ ಸುದ್ದಿಯನ್ನು ಮೊದಲು ನಂಬಲಾಗಲಿಲ್ಲ. ನಂತರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಂದ ಸುದ್ದಿಯೆಂದ ನಂತರವೇ ನಂಬಿ ಕಣ್ಣೀರಾಕಿ ಉಳಿದವರಿಗೂ ಸುದ್ದಿ ತಲುಪಿಸಲಾಯಿತು.
Related Articles
Advertisement
ಮುಗ್ದ ಮಕ್ಕಳು: ಶ್ರೀಶೈಲ ರಾಯಪ್ಪ ಬಳಬಟ್ಟಿಯವರಿಗೆ 6 ವರ್ಷದ ವೇದಶ್ರೀ ಹಾಗೂ 4 ವರ್ಷದ ವಿಶ್ವನಾಥ ಎಂಬ ಮಕ್ಕಳಿದ್ದು ಅವರು ತಮ್ಮ ಮನೆಯ ಮುಂದೆ ಸೇರಿದ ಜನರನ್ನು ಕಂಡು ಮುಗ್ದತೆಯಿಂದ ಅವರ ಚಿಕ್ಕಪ್ಪನಿಗೆ ಚಾಕೋಲೇಟ್ ಕೊಡಿಸಲು ಕೇಳಿದಾಗ ಚಿಕ್ಕಪ್ಪನ ರೋಧನ ಮುಗಿಲು ಮುಟ್ಟಿತ್ತು.
ಮಕ್ಕಳು ತಮ್ಮ ತಂದೆ ಹುತಾತ್ಮರಾಗಿರುವದನ್ನೂ ಅರಿಯದ ಕಂದಮ್ಮಗಳನ್ನು ಕಂಡು ನೆರೆದ ಜನರು ಮಕ್ಕಳಿಗೆ ಅರಿವು ಮೂಡುವದಕ್ಕಿಂತ ಮುಂಚೆಯೇ ತಂದೆಯನ್ನು ಕಳೆದುಕೊಂಡ ನತದೃಷ್ಟರು ಎಂದು ಕಣ್ಣಾಲಿಗಳನ್ನು ತುಂಬಿಕೊಂಡು ಮುಗ್ದ ಮಕ್ಕಳನ್ನು ತಬ್ಬಿಕೊಂಡು ಸಂಬಂಧಿಗಳು ರೋಧಿಸುವ ದೃಶ್ಯ ಸಾಮಾನ್ಯವಾಗಿತ್ತು.
ಧೃತಿಗೆಟ್ಟ ಪಾಲಕರು: ನಮ್ಮದು ಮೂಲ ಬಡತನ ಕುಟುಂಬವಾಗಿದ್ದು ನಮ್ಮ ತಂದೆಯವರು ನಾವು ಚಿಕ್ಕವರಿದ್ದಾಗಲೇ ತಾಯಿ ತವರು ಮನೆ ಇಲಾಳ ಗ್ರಾಮಕ್ಕೆ ಹೋಗಿದ್ದರು. ಇದರಿಂದ ನಾವು ಅಲ್ಲಿಯೇ ಇದ್ದು ಮುಂದೆ ನಮಗೆ ಮಕ್ಕಳಾದ ಮೇಲೆ ಅವರಿಗೆ ನಮ್ಮ ಊರಿನ ಹೆಸರನ್ನೇ ಅಡ್ರೆಸ್ಸನ್ನಾಗಿ ಮಾಡಿದ್ದರಿಂದ ತೋಳಮಟ್ಟಿ ಹೋಗಿ ಬಳಬಟ್ಟಿಯಾಯಿತು. ನನಗಿರುವ ಎರಡು ಮಕ್ಕಳಲ್ಲಿ ದೊಡ್ಡವನೇ ಶ್ರೀಶೈಲ ಅವನು ನಮ್ಮೊಂದಿಗೆ ಸಾಕಷ್ಟು ಶ್ರಮವಹಿಸಿ ದುಡಿಮೆಯೊಂದಿಗೆ ಶಿಕ್ಷಣ ಮುಂದುವರಿಸಿ ಸೇನೆಗೆ ಸೇರಿದ ನಂತರ ನಮಗೆಲ್ಲರಿಗೂ ಒಳ್ಳೆದಾಗಿತ್ತರ್ರೀ, ಈಗ ಅವನ ಇಲ್ಲ ಇನ್ನ ಸಣ್ಣ ಮಗ ಒಬ್ನ ಉಳಿದರ ಎಂದು ರೋಧಿಸುತ್ತಾ ಹೇಳಿದರು ರಾಯಪ್ಪ ತೋಳಮಟ್ಟಿ.