Advertisement

10 ಮೀ. ಏರ್‌ ರೈಫ‌ಲ್‌ ತಂಡ ಸ್ಪರ್ಧೆ: ಭಾರತೀಯ ವನಿತೆಯರಿಗೆ ಚಿನ್ನ

11:05 PM May 31, 2022 | Team Udayavani |

ಹೊಸದಿಲ್ಲಿ: ಅಜರ್‌ಬೈಜಾನ್‌ನ ಬಾಕುವಿನಲ್ಲಿ ಸಾಗುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕದ ಬೇಟೆ ಆರಂಭಿಸಿದೆ.

Advertisement

ವನಿತೆಯರ 10 ಮೀ. ಏರ್‌ ರೈಫ‌ಲ್‌ ತಂಡ ಸ್ಪರ್ಧೆಯಲ್ಲಿ ಎಲಾವೆನಿಲ್‌ ವಲರಿವಾನ್‌, ರಮಿತಾ ಮತ್ತು ಶ್ರೇಯಾ ಅಗರ್ವಾಲ್‌ ಅವರನ್ನು ಒಳಗೊಂಡ ಭಾರತೀಯ ತಂಡ ಚಿನ್ನ ಗೆದ್ದ ಸಾಧನೆ ಮಾಡಿದೆ.

ಭಾರತೀಯ ತಂಡವು ಅನ್ನಾ ನೀಲ್ಸೆನ್‌, ಎಮ್ಮಾ ಕೊಚ್‌ ಮತ್ತು ರಿಕ್ಕೆ ಮಯೆಂಗ್‌ ಇಬೆÕನ್‌ ಅವರನ್ನು ಒಳಗೊಂಡ ಡೆನ್ಮಾರ್ಕ್‌ ತಂಡವನ್ನು 17-5 ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಜಯಿಸಿತು. ಪೋಲಂಡ್‌ ಕಂಚು ಜಯಿಸಿದೆ.
ಭಾರತೀಯ ತಂಡವು ಸೋಮವಾರ ನಡೆದ ಅರ್ಹತಾ ಸುತ್ತಿನ ಮೊದಲ ಹಂತದಲ್ಲಿ ಅಗ್ರಸ್ಥಾನ ಪಡೆದಿದ್ದರೆ ದ್ವಿತೀಯ ಹಂತದಲ್ಲಿ ದ್ವಿತೀಯ ಸ್ಥಾನಿ ಯಾಗಿ ಪ್ರಶಸ್ತಿ ಸುತ್ತಿಗೇರಿತ್ತು.

ಪುರುಷರ ಏರ್‌ ರೈಫ‌ಲ್‌ ತಂಡ ಸ್ಪರ್ಧೆಯಲ್ಲಿ ಭಾರತೀಯ ತಂಡ ಕಂಚಿನ ಪದಕಕ್ಕಾಗಿ ನಡೆದ ಸೆಣಸಾಟದಲ್ಲಿ ಕ್ರೊವೇಶಿಯಕ್ಕೆ 10-16 ಅಂಕಗಳಿಂದ ಶರಣಾಗಿ ನಾಲ್ಕನೇ ಸ್ಥಾನ ಪಡೆಯಲಷ್ಟೇ ಶಕ್ತವಾಯಿತು. 12 ಸದಸ್ಯರ ಭಾರತೀಯ ರೈಫ‌ಲ್‌ ತಂಡವು ಸದ್ಯ ಪದಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 2 ಚಿನ್ನ ಸಹಿತ ಒಟ್ಟಾರೆ 4 ಪದಕ ಗೆದ್ದಿರುವ ಸರ್ಬಿಯಾ ಅಗ್ರಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next