Advertisement

ತೆರೆದ ತಿನಿಸುಗಳ ಸುರಕ್ಷತೆ ಅವಧಿಯ ಮಾಹಿತಿ ಕಡ್ಡಾಯ

01:11 AM Feb 26, 2020 | Hari Prasad |

ಹೊಸದಿಲ್ಲಿ: ಇನ್ನು ಮುಂದೆ ಸಿಹಿತಿನಿಸುಗಳ ಅಂಗಡಿಗಳು, ಬೇಕರಿಗಳಲ್ಲಿ ಪ್ಯಾಕಿಂಗ್‌ ಮಾಡದೇ ಟ್ರೇಗಳಲ್ಲಿ ಹಾಗೂ ಕಂಟೇನರ್‌ಗಳಲ್ಲಿ ಇಡಲಾಗುವ ಸಿಹಿ ತಿನಿಸುಗಳ ಸುರಕ್ಷತೆ ಅವಧಿ ಹಾಗೂ ತಯಾರಿಕೆ ದಿನಾಂಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗಿದೆ. ಈ ಕುರಿತು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಆದೇಶಿಸಿದ್ದು, ಇದು ಜೂನ್‌ನಿಂದ ಅನ್ವಯವಾಗಲಿದೆ.

Advertisement

ಬೇಕರಿ ಹಾಗೂ ಅಂಗಡಿಗಳಲ್ಲಿ ತೆರೆದಿಟ್ಟಿರುವ ತಿನಿಸುಗಳಿಗೆ ತಯಾರಿಕಾ ದಿನಾಂಕ ನಮೂದಿಸುವ ನಿಯಮ ಅನ್ವಯಿಸುತ್ತಿರಲಿಲ್ಲ. ಈ ತಿನಿಸುಗಳು ಹಾಳಾಗಿದ್ದರೂ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು.

ಆದರೆ, ಇನ್ನು ಮುಂದೆ ತಿನಿಸನ್ನು ತಯಾರಿಸಿದ ದಿನಾಂಕ ಹಾಗೂ ಯಾವ ದಿನಾಂಕದೊಳಗೆ ಆ ತಿನಿಸು ಸೇವಿಸಲು ಯೋಗ್ಯ ಎಂಬುದನ್ನು ಕಡ್ಡಾಯವಾಗಿ ಇನ್ನು ಪ್ರದರ್ಶಿಸಲೇಬೇಕು. ಸಾರ್ವಜನಿಕರ ಹಿತಕ್ಕಾಗಿ ಈ ನಿಯಮ ಜಾರಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next